ತಂದೆಯ ಸಾವಿನ ಮಧ್ಯೆಯೂ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ
ಗದಗ: ತಂದೆಯ ಸಾವಿನ ಆಘಾತದ ಮಧ್ಯೆಯೂ ಎದೆಗುಂದದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿನಿಯೊಬ್ಬಳು ಹಾಜರಾಗಬೇಕಾದ ಮನಮಿಡಿಯುವ ಘಟನೆ ಗದಗನಲ್ಲಿ ನಡೆದಿದೆ. ಗದಗ ನಗರದ ಈಶ್ವರ ಬಡಾವಣೆ ನಿವಾಸಿ ಅನೂಷ ಎಂದಿನಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಲು ತಯಾರಿ ನಡೆಸಿದ್ದಳು. ಆದ್ರೆ ಇಂದು ಬೆಿಳಿಗ್ಗೆ ಆಕೆಯ ತಂದೆ ಸುರೇಶ್ ಭಜಂತ್ರಿ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ. ಒಂದೆಡೆ ವರ್ಷವಿಡಿ ಓದಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮತ್ತೊಂದೆಡೆ ಬರಸಿಡಿಲಿನಂತೆ ಬಂದೆರಗಿದ ತಂದೆಯ ಸಾವು. ಹೀಗಾಗಿ ಏನೂ ತೋಚದೆ ವಿದ್ಯಾರ್ಥಿ ಕಂಗಟ್ಟಿದ್ದಾಳೆ. ಆಗ ಕುಟುಂಬ ಸದಸ್ಯರು ಪರೀಕ್ಷೆ ಬರೆದು […]
ಗದಗ: ತಂದೆಯ ಸಾವಿನ ಆಘಾತದ ಮಧ್ಯೆಯೂ ಎದೆಗುಂದದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿನಿಯೊಬ್ಬಳು ಹಾಜರಾಗಬೇಕಾದ ಮನಮಿಡಿಯುವ ಘಟನೆ ಗದಗನಲ್ಲಿ ನಡೆದಿದೆ.
ಗದಗ ನಗರದ ಈಶ್ವರ ಬಡಾವಣೆ ನಿವಾಸಿ ಅನೂಷ ಎಂದಿನಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಲು ತಯಾರಿ ನಡೆಸಿದ್ದಳು. ಆದ್ರೆ ಇಂದು ಬೆಿಳಿಗ್ಗೆ ಆಕೆಯ ತಂದೆ ಸುರೇಶ್ ಭಜಂತ್ರಿ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ. ಒಂದೆಡೆ ವರ್ಷವಿಡಿ ಓದಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮತ್ತೊಂದೆಡೆ ಬರಸಿಡಿಲಿನಂತೆ ಬಂದೆರಗಿದ ತಂದೆಯ ಸಾವು.
ಹೀಗಾಗಿ ಏನೂ ತೋಚದೆ ವಿದ್ಯಾರ್ಥಿ ಕಂಗಟ್ಟಿದ್ದಾಳೆ. ಆಗ ಕುಟುಂಬ ಸದಸ್ಯರು ಪರೀಕ್ಷೆ ಬರೆದು ಬರುವವರೆಗೆ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಭರವಸೆ ಕೊಟ್ಟಮೇಲೆ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಹೋಗಿದ್ದಾಳೆ.