ರಾಯಣ್ಣ ಪ್ರತಿಮೆ ಪ್ರಕರಣ ಕುಟಿಲ ರಾಜಕೀಯ ಷಡ್ಯಂತ್ರ: CT ರವಿ

ಚಿಕ್ಕಮಗಳೂರು:ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿಚಾರದಲ್ಲಿ ಪ್ರತಿಮೆ ನಿರ್ಮಾಣವು ವಿವಾದದ ಸ್ವರೂಪ ಪಡೆಯಬಾರದು; ಬದಲಿಗೆ ರಾಯಣ್ಣ ಪ್ರತಿಮೆ ನಿರ್ಮಾಣವಾಗಲೇಬೇಕೆಂದು ಚಿಕ್ಕಮಗಳೂರಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ಪ್ರತಿಮೆ ವಿಚಾರದಲ್ಲಿ ಏನೇ ಅಡೆತಡೆ ಇದ್ರೂ ಬಗೆಹರಿಸೋದಾಗಿ ಸಿಎಂ ಹೇಳಿದ್ದಾರೆ. ಹೀಗಾಗಿ ಪ್ರತಿಮೆ ವಿಚಾರ ಈಗ ಸಂಘರ್ಷದ ರೂಪ ಪಡೆದಿರುವುದು ದುರದೃಷ್ಟಕರ. ಸಂಘರ್ಷದ ಹಿಂದೆ ರಾಜಕೀಯ ದುರುದ್ದೇಶ ಇರಬಹುದು ಎಂದಿದ್ದಾರೆ. ಅಲ್ಲದೆ ಬೆಂಗಳೂರಲ್ಲಿ ನೆಡೆದ ಗಲಭೆಯ ಹಿಂದೆ ರಾಜಕೀಯ ದುರ್ಬಳಕೆ ನಡೆದಿದೆ. ಆ ಜನ ಈ ರೀತಿ ದುರ್ಬಳಕೆ […]

ರಾಯಣ್ಣ ಪ್ರತಿಮೆ ಪ್ರಕರಣ ಕುಟಿಲ ರಾಜಕೀಯ ಷಡ್ಯಂತ್ರ: CT ರವಿ

Updated on: Aug 28, 2020 | 5:01 PM

ಚಿಕ್ಕಮಗಳೂರು:ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿಚಾರದಲ್ಲಿ ಪ್ರತಿಮೆ ನಿರ್ಮಾಣವು ವಿವಾದದ ಸ್ವರೂಪ ಪಡೆಯಬಾರದು; ಬದಲಿಗೆ ರಾಯಣ್ಣ ಪ್ರತಿಮೆ ನಿರ್ಮಾಣವಾಗಲೇಬೇಕೆಂದು ಚಿಕ್ಕಮಗಳೂರಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

ಪ್ರತಿಮೆ ವಿಚಾರದಲ್ಲಿ ಏನೇ ಅಡೆತಡೆ ಇದ್ರೂ ಬಗೆಹರಿಸೋದಾಗಿ ಸಿಎಂ ಹೇಳಿದ್ದಾರೆ. ಹೀಗಾಗಿ ಪ್ರತಿಮೆ ವಿಚಾರ ಈಗ ಸಂಘರ್ಷದ ರೂಪ ಪಡೆದಿರುವುದು ದುರದೃಷ್ಟಕರ. ಸಂಘರ್ಷದ ಹಿಂದೆ ರಾಜಕೀಯ ದುರುದ್ದೇಶ ಇರಬಹುದು ಎಂದಿದ್ದಾರೆ.

ಅಲ್ಲದೆ ಬೆಂಗಳೂರಲ್ಲಿ ನೆಡೆದ ಗಲಭೆಯ ಹಿಂದೆ ರಾಜಕೀಯ ದುರ್ಬಳಕೆ ನಡೆದಿದೆ. ಆ ಜನ ಈ ರೀತಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿವೆ. ಹೀಗಾಗಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಆಗಲೇಬೇಕು, ಚೆನ್ನಾಗಿ ಆಗಬೇಕು ಎಂದು ಸಿ.ಟಿ. ರವಿ ಹೇಳಿದ್ದಾರೆ.

ಜೊತೆಗೆ ಸಿದ್ದರಾಮಯ್ಯನವರ ಟ್ವಿಟ್ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಸಿದ್ದರಾಮಯ್ಯ ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಯಾಗಿದ್ದವರು. ಕಾಗಿನೆಲೆ ಸ್ವಾಮೀಜಿ ಭೇಟಿ ಮಾಡಿದ್ದಾಗ ಸಿಎಂ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ಮಾಡೋದಾಗಿ ಹೇಳಿದ್ದರು. ಹಾಗಾಗಿ ಈ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡೋದು, ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಂಚು ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ.

ಈ ಹಿನ್ನೆಲೆಯಿಂದ ಸಿಎಂ ಆಗಿದ್ದರು ಯೋಚಿಸಬೇಕು. ನಾಳೆ ಮತ್ತೊಬ್ಬರು ಸಿಎಂ ಆಗಬಹುದು ಅವರ ಆದೇಶ ಅಂತಿಮ ತಾನೇ. ಏನಾದ್ರು ಮಾಡಿ ರಾಜ್ಯದ ಜನರ ನೆಮ್ಮದಿ ಹಾಳು ಮಾಡುವ ಸಂಚು ನಡೆದಿದೆ. ಈ ಸಂಚಿಗೆ ಸಿದ್ದರಾಮಯ್ಯನವರು ಬಲಿಯಾಗಬಾರದು ಎಂದು ಸಚಿವ ಸಿ.ಟಿ. ರವಿ ಅಭಿಪ್ರಾಯ ಪಟ್ಟಿದ್ದಾರೆ.