AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Online‌ ಮೂಲಕ ಪಾಠ ಅಲ್ಲ Drugs! ಹೈಸ್ಕೂಲ್ ವಿದ್ಯಾರ್ಥಿಗೆ ಕೊರಿಯರ್ ಮೂಲಕ ಡ್ರಗ್ಸ್ ಸಪ್ಲೈ

ಬೆಂಗಳೂರು: ಗಾರ್ಡನ್‌ ಸಿಟಿ, ಗ್ರೀನ್‌ ಸಿಟಿ, ಸಿಲಿಕಾನ್‌ ಸಿಟಿ ಹೀಗೆ ಅಮೋಘ ಸಾಧನೆಗಳಿಂದ ಏನೆಲ್ಲಾ ಒಳ್ಳೆಯ ಹೆಸರುಗಳನ್ನು ಸಂಪಾದಿಸಿದ್ದ ಬೆಂಗಳೂರಿಗೆ, ಈಗ ಉಡ್ತಾ ಸಿಟಿ ಎಂಬ ಕೆಟ್ಟ ಹೆಸಲು ಅಂಟಿಕೊಳ್ಳೋ ಲಕ್ಷಣಗಳು ಕಾಣ್ತಿವೆ. ಇದಕ್ಕೆ ಕಾರಣ ಇತ್ತೀಚಿನ ದಿನಗಳಲ್ಲಿ ಮಹಾನಗರದಲ್ಲಿ ಹೆಚ್ಚುತ್ತಿರುವ ಡ್ರಗ್ಸ್‌ ಪ್ರಕರಣಗಳು. ಹೌದು, ಬೆಂಗಳೂರು ಈಗ ಉಡ್ತಾ ಬೆಂಗಳೂರು ಆಗುತ್ತಿದೆ. ಡ್ರಗ್ಸ್‌ ಜಾಲವೊಂದನ್ನು ಭೇದಿಸಿರುವ ಬೆಂಗಳೂರು ಪೊಲೀಸರು ಈಗ ಮತ್ತೊಂದು ಸ್ಫೋಟಕ, ಆದರೆ ಅಷ್ಟೇ ಭಯಾನಕ ಸತ್ಯವನ್ನ ಪತ್ತೆ ಹಚ್ಚಿದ್ದಾರೆ. ಅದೇನಂದ್ರೆ ಯಾರ ಭಯವೂ […]

Online‌ ಮೂಲಕ ಪಾಠ ಅಲ್ಲ Drugs! ಹೈಸ್ಕೂಲ್ ವಿದ್ಯಾರ್ಥಿಗೆ ಕೊರಿಯರ್ ಮೂಲಕ ಡ್ರಗ್ಸ್ ಸಪ್ಲೈ
ಸಾಂದರ್ಭಿಕ ಚಿತ್ರ
Guru
| Edited By: |

Updated on: Aug 28, 2020 | 5:36 PM

Share

ಬೆಂಗಳೂರು: ಗಾರ್ಡನ್‌ ಸಿಟಿ, ಗ್ರೀನ್‌ ಸಿಟಿ, ಸಿಲಿಕಾನ್‌ ಸಿಟಿ ಹೀಗೆ ಅಮೋಘ ಸಾಧನೆಗಳಿಂದ ಏನೆಲ್ಲಾ ಒಳ್ಳೆಯ ಹೆಸರುಗಳನ್ನು ಸಂಪಾದಿಸಿದ್ದ ಬೆಂಗಳೂರಿಗೆ, ಈಗ ಉಡ್ತಾ ಸಿಟಿ ಎಂಬ ಕೆಟ್ಟ ಹೆಸಲು ಅಂಟಿಕೊಳ್ಳೋ ಲಕ್ಷಣಗಳು ಕಾಣ್ತಿವೆ. ಇದಕ್ಕೆ ಕಾರಣ ಇತ್ತೀಚಿನ ದಿನಗಳಲ್ಲಿ ಮಹಾನಗರದಲ್ಲಿ ಹೆಚ್ಚುತ್ತಿರುವ ಡ್ರಗ್ಸ್‌ ಪ್ರಕರಣಗಳು.

ಹೌದು, ಬೆಂಗಳೂರು ಈಗ ಉಡ್ತಾ ಬೆಂಗಳೂರು ಆಗುತ್ತಿದೆ. ಡ್ರಗ್ಸ್‌ ಜಾಲವೊಂದನ್ನು ಭೇದಿಸಿರುವ ಬೆಂಗಳೂರು ಪೊಲೀಸರು ಈಗ ಮತ್ತೊಂದು ಸ್ಫೋಟಕ, ಆದರೆ ಅಷ್ಟೇ ಭಯಾನಕ ಸತ್ಯವನ್ನ ಪತ್ತೆ ಹಚ್ಚಿದ್ದಾರೆ. ಅದೇನಂದ್ರೆ ಯಾರ ಭಯವೂ ಇಲ್ಲದೇ ಬೆಂಗಳೂರಿನಾದ್ಯಂತ ಡ್ರಗ್ಸ್ ಹೇಗೆ ಸಪ್ಲೈ ಆಗ್ತಿದೆ ಅನ್ನೋದು.

ಕೊರೊನಾ ಸಂಕಷ್ಟದ ಸಮಯದಲ್ಲಿ ಕೆಲ ಶಾಲಾ ಕಾಲೆಜುಗಳು ಆನ್‌ಲೈನ್‌ ಕ್ಲಾಸ್‌ ಶುರು ಮಾಡಿವೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಡ್ರಗ್ಸ್‌ ದಂದೆಕೋರರು ಈ ಮಕ್ಕಳಿಗೆ ಅದ್ರಲ್ಲೂ ಎಳೆಯ ಮಕ್ಕಳಿಗೆ ಡ್ರಗ್ಸ್‌ ಗೀಳು ಹಚ್ಚುತ್ತಿದ್ದಾರೆ. ಇದಕ್ಕೆ ಅವರು ಬಳಕೆ ಮಾಡ್ತಿರೋದು ಇಂಟರ್‌ನೆಟ್‌ ಅಂದ್ರೆ ಆನ್‌ಲೈನ್‌ ಕ್ಲಾಸ್‌ಗಳು. ಆ್ಯಪ್ ಮೂಲಕ ಮಕ್ಕಳನ್ನ ಪ್ರೊತ್ಸಾಹಿಸುವ ಈ ದಂದೆಕೋರರು ಆನ್‌ಲೈನ್‌ ಮೂಲಕವೆ ಆರ್ಡರ್‌ ಪಡೆದು ಕೊರಿಯರ್‌ ಮೂಲಕ ಬೆಂಗಳೂರಿನಾದ್ಯಾಂತ ಡ್ರಗ್ಸ್‌ ಸಪ್ಲೈ ಮಾಡ್ತಿದ್ದಾರಂತೆ. ಇದೆಲ್ಲವೂ ಸದ್ದಲ್ಲದೇ ಗಪ್‌ಚುಪ್‌ ಆಗಿ ನಡೆಯುತ್ತಿದೆ.

ಡ್ರಗ್ಸ್ ಮಾಯಾಜಾಲದ ಈ ಅಸಲಿ ಮುಖ ಬಯಲಿಗೆ ಬಂದಿದ್ದು ಇದೇ ಆಗಸ್ಟ್‌ 15ರಂದು. 14 ವರ್ಷದ ಬಾಲಕನ ಹೆಸರಿಗೆ ಬಂದ ಕೊರಿಯರ್‌ನಿಂದ. 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕನಿಗೆ ಕೊರಿಯರ್ ಮೂಲಕ ಡ್ರಗ್ಸ್ ಬಂದಿದೆ. ಮನೆಗೆ ಬಂದ ಪಾರ್ಸಲ್‌ನ್ನು ಮಗನಿಗೆ ತಿಳಿಸದೇ ತೆರೆದಾಗ ಹೆತ್ತ ತಂದೆಯೇ ಶಾಕ್ ಆಗಿದ್ದಾರೆ. ಯಾಕಂದ್ರೆ ಅದರಲ್ಲಿತ್ತು ಕಿಕ್ಕೇರಿಸೋ ಡ್ರಗ್ಸ್. ಇದು ಡ್ರಗ್ಸ್ ಪೆಡ್ಲರ್ ಧೀರಜ್ ಕಪೂರ್ ಎಂಬಾತನಿಂದ ಆನ್ಲೈನಲ್ಲಿ ಡ್ರಗ್ಸ್ ಸಪ್ಲೈ ಆಗಿತ್ತು. ‘dheerajkapoor700@gmail.com’ ಅಡ್ರೆಸ್‌ ಮೂಲಕ ಆನ್ಲೈನಲ್ಲಿ ಡ್ರಗ್ಸ್ ಡೀಲ್ ನಡೆದಿತ್ತು. ಸದ್ಯ ಕಬ್ಬನ್‌ ಪಾರ್ಕ್‌ ಪೊಲೀಸರು ಡ್ರಗ್ ಪೆಡ್ಲರ್ ಧೀರಜ್ ಕಪೂರ್‌ನನ್ನು ಬಂಧಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಬ್ಬನ್ ಪಾರ್ಕ್ ಪೊಲೀಸರು, ಆನ್ಲೈನ್ ಡ್ರಗ್ ಜಾಲ ಭೇದಿಸಲು ಈಗ ಸ್ವತಃ ಫೀಲ್ಡಿಗಿಳಿದಿದ್ದಾರೆ.

ಪೊಲೀಸರೇನೋ ತಮ್ಮ ಕಾರ್ಯ ಮಾಡುತ್ತಿದ್ದಾರೆ. ಆದ್ರೆ ಕ್ಲಾಸ್ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡೊ ಪೋಷಕರು ಈಗ ಎಚ್ಚರವಾಗಬೇಕಿದೆ. ಯಾಕಂದ್ರೆ ಇನ್ನೂ ಹೈಸ್ಕೂಲ್ ಮೆಟ್ಟಿಲೇರದ ಮಕ್ಕಳನ್ನು ಟಾರ್ಗೆಟ್‌ ಮಾಡಿ ಡ್ರಗ್ಸ್ ಗೀಳು ಹಚ್ಚಿಸುತ್ತಿದೆ ಡ್ರಗ್ಸ್‌ ಮಾಫಿಯಾ.

ಬರೋಬ್ಬರಿ 94 ವರ್ಷಗಳ ಬಳಿಕ ಬಾಕ್ಸಿಂಗ್ ಡೇನಲ್ಲಿ 20 ವಿಕೆಟ್..!
ಬರೋಬ್ಬರಿ 94 ವರ್ಷಗಳ ಬಳಿಕ ಬಾಕ್ಸಿಂಗ್ ಡೇನಲ್ಲಿ 20 ವಿಕೆಟ್..!
ಕೆಟ್ಟದ್ದು ಸಂಭವಿಸುವ ಮುನ್ನ ಯಾವೆಲ್ಲಾ ಸೂಚನೆಗಳು ಕಾಣಿಸುತ್ತೆ?
ಕೆಟ್ಟದ್ದು ಸಂಭವಿಸುವ ಮುನ್ನ ಯಾವೆಲ್ಲಾ ಸೂಚನೆಗಳು ಕಾಣಿಸುತ್ತೆ?
ಇಂದು ಈ ರಾಶಿಯವರ ಅನಿಸಿಕೆಗಳಿಗೆ ಫಲ ಸಿಗಲಿದೆ
ಇಂದು ಈ ರಾಶಿಯವರ ಅನಿಸಿಕೆಗಳಿಗೆ ಫಲ ಸಿಗಲಿದೆ
ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಿ ಮನೆಗೆ ಮರಳಿದ ವಿರಾಟ್ ಕೊಹ್ಲಿ
ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಿ ಮನೆಗೆ ಮರಳಿದ ವಿರಾಟ್ ಕೊಹ್ಲಿ
‘ಧುರಂಧರ್’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ
‘ಧುರಂಧರ್’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್