ಕೆವಿನ್‌ ಓ ಬ್ರಯಾನ್‌ ಹೊಡೆದ SIXER‌ಗೆ ಸ್ಟೇಡಿಯಮ್‌ ಹೊರಗಿದ್ದ ಆತನ ಕಾರ್‌ ಗ್ಲಾಸ್‌ ಪುಡಿ ಪುಡಿ

ಡಬ್ಲಿನ್‌: ಐರ್ಲೆಂಡ್‌ನ ಆಲ್‌ರೌಂಡರ್‌ ಕೆವಿನ್‌ ಓ ಬ್ರಯಾನ್‌ ಅಂದ್ರೆ ಬಹುತೇಕ ಕ್ರಿಕೆಟ್‌ ಪ್ರೇಮಿಗಳಿಗೆ ಗೊತ್ತಿರೋ ಹೆಸರೆ. 2011ರ ವಿಶ್ವಕಪ್‌ನಲ್ಲಿ ಬೆಂಗಳೂರಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ಏಕಾಂಗಿಯಾಗಿ ಇಂಗ್ಲೆಂಡ್‌ಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಬಿಗ್‌ ಹಿಟ್ಟರ್‌ ಈ ಕೆವಿನ್‌. ಈಗ ತಮ್ಮ ಬಿಗ್‌ ಹಿಟ್ಟಿಂಗ್‌ ಸಾಮರ್ಥ್ಯದ ರುಚಿಯನ್ನ ಖುದ್ದು ಅವರೇ ಅನುಭವಿಸಬೇಕಾಗಿ ಬಂದಿದೆ. ಹೌದು ಕೆವಿನ್‌ ಓ ಬ್ರಯಾನ್‌ ಕ್ರಿಕೆಟ್‌ನ ಕೆಲವೇ ಕೆಲ ಬಿಗ್‌ ಹಿಟ್ಟರ್‌ ಬ್ಯಾಟ್ಸಮನ್‌ಗಳಲ್ಲಿ ಒಬ್ಬರು. ಬ್ಯಾಟ್‌ ಹಿಡಿದು ಬಾರಿಸೋಕೆ ಶುರು ಹಚ್ಚಿಕೊಂಡ್ರೆ ಸಿಕ್ಸರ್‌ […]

ಕೆವಿನ್‌ ಓ ಬ್ರಯಾನ್‌ ಹೊಡೆದ SIXER‌ಗೆ ಸ್ಟೇಡಿಯಮ್‌ ಹೊರಗಿದ್ದ ಆತನ ಕಾರ್‌ ಗ್ಲಾಸ್‌ ಪುಡಿ ಪುಡಿ
Follow us
Guru
|

Updated on: Aug 28, 2020 | 6:06 PM

ಡಬ್ಲಿನ್‌: ಐರ್ಲೆಂಡ್‌ನ ಆಲ್‌ರೌಂಡರ್‌ ಕೆವಿನ್‌ ಓ ಬ್ರಯಾನ್‌ ಅಂದ್ರೆ ಬಹುತೇಕ ಕ್ರಿಕೆಟ್‌ ಪ್ರೇಮಿಗಳಿಗೆ ಗೊತ್ತಿರೋ ಹೆಸರೆ. 2011ರ ವಿಶ್ವಕಪ್‌ನಲ್ಲಿ ಬೆಂಗಳೂರಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ಏಕಾಂಗಿಯಾಗಿ ಇಂಗ್ಲೆಂಡ್‌ಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಬಿಗ್‌ ಹಿಟ್ಟರ್‌ ಈ ಕೆವಿನ್‌. ಈಗ ತಮ್ಮ ಬಿಗ್‌ ಹಿಟ್ಟಿಂಗ್‌ ಸಾಮರ್ಥ್ಯದ ರುಚಿಯನ್ನ ಖುದ್ದು ಅವರೇ ಅನುಭವಿಸಬೇಕಾಗಿ ಬಂದಿದೆ. ಹೌದು ಕೆವಿನ್‌ ಓ ಬ್ರಯಾನ್‌ ಕ್ರಿಕೆಟ್‌ನ ಕೆಲವೇ ಕೆಲ ಬಿಗ್‌ ಹಿಟ್ಟರ್‌ ಬ್ಯಾಟ್ಸಮನ್‌ಗಳಲ್ಲಿ ಒಬ್ಬರು. ಬ್ಯಾಟ್‌ ಹಿಡಿದು ಬಾರಿಸೋಕೆ ಶುರು ಹಚ್ಚಿಕೊಂಡ್ರೆ ಸಿಕ್ಸರ್‌ ಮೇಲೆ ಸಿಕ್ಸರ್‌ ಸುರಿಮಳೆಯೇ ಅಗುತ್ತೆ. ಐರ್ಲೆಂಡ್‌ನ ದೇಸಿ ಟಿ20 ಪಂದ್ಯವೊಂದರಲ್ಲಿ ಲೀನ್‌ಸ್ಟರ್‌ ಲೈಟನಿಂಗ್‌ ಪರ ಆಡುತ್ತಾ ನಾರ್ತ್‌ ವೆಸ್ಟ್‌ ವಾರಿಯರ್ಸ್‌ ಎನ್ನೋ ತಂಡದ ವಿರುದ್ಧ ಡಬ್ಲಿನ್‌ನಲ್ಲಿ ನಡೆದ ಪಂದ್ಯವೊಂದರಲ್ಲಿ ಬಾರಿಸಿದ ಸಿಕ್ಸರ್‌ಗೆ ಸ್ವತಃ ಅವರ ಕಾರ್‌ ಪುಡಿ ಪುಡಿಯಾಗಿದೆ. ಆರಂಭಿಕನಾಗಿ ಬ್ಯಾಟಿಂಗ್‌ಗೆ ಇಳಿದ ಕೆವಿನ್‌ ಕೇವಲ 37 ಎಸೆತಗಳಲ್ಲಿ 8 ಸಿಕ್ಸರ್‌ ಮೂಲಕ 82ರನ್‌ ಗಳಿಸಿದ್ದಾರೆ. ಹೀಗೆ ಬಾರಿಸಿದ ಸಿಕ್ಸರ್‌ಗಳಲ್ಲಿ ಒಂದು ಸ್ಟೇಡಿಯಮ್‌ ಹೊರಗಿದ್ದ ಕಾರ್‌ ಪಾರ್ಕ್‌ನಲ್ಲಿ ಬಿದ್ದಿದೆ. ಅದೂ ಸ್ವತಃ ಕೇವಿನ್‌ ಅವರ ಕಾರ್‌ ಮೇಲೆಯೇ. ಬಾಲ್‌ ಬಿದ್ದ ರಭಸಕ್ಕೆ ಕಾರ್‌ನ ಹಿಂಬದಿಯ ಗ್ಲಾಸ್‌ ಚಿಂದಿಯಾಗಿದೆ.

ಈ ವಿಷಯವನ್ನ ಫೋಟೋ ಸಮೇತ ಸ್ವತಃ ಕ್ರಿಕೆಟ್‌ ಐರ್ಲೆಂಡ್‌ ಟ್ವೀಟ್‌ ಮಾಡಿದೆ. ಇದನ್ನು ಕ್ರಿಕೆಟ್‌ ಆಸ್ಟ್ರೇಲಿಯಾ ಮತ್ತು ಐಸಿಸಿ ಕೂಡಾ ರೀಟ್ವೀಟ್‌ ಮಾಡಿದ್ದು ಕೆವಿನ್‌ ಓ ಬ್ರಯಾನ್‌ಗೆ ಗೇಲಿ ಮಾಡಿವೆ. ಅಷ್ಟೇ ಅಲ್ಲ ಈ ಘಟನೆ ಈಗ ಕ್ರಿಕೆಟ್‌ ವಲಯದದಲ್ಲಿ ಭಾರೀ ತಮಾಷೆಯ ವಸ್ತುವಾಗಿಬಿಟ್ಟಿದೆ.

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ