AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸುಧಾಕರ್, ಸತೀಶ್ ಉಸ್ತುವಾರಿಗಳು | Sudhakar and Satish Reddy to campaign in Hyderabad palike polls

ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯ ಬಿಜೆಪಿ ಪಕ್ಷದ ಸಹ ಉಸ್ತುವಾರಿಗಳಾಗಿರುವ ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಮತ್ತು ಬೆಂಗಳೂರು ಮೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರಿಗೆ ಕ್ಷೇತ್ರಗಳನ್ನು ಹಂಚಿಕೆಮಾಡಿ ಉಸ್ತುವಾರಿವಹಿಸಿಕೊಳ್ಳಲು ಹೇಳಲಾಗಿದೆ. ಸಚಿವ ಸುಧಾಕರ್​ಗೆ ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿವಹಿಸಲಾಗಿದೆ. ಅವುಗಳೆಂದರೆ, ಮಲ್ಕಾಜ್ ಗಿರಿ, ಖುತ್ಪುಲ್ಲಾಪುರ್, ಕುಕ್ಕಟ್​ಪಲ್ಲಿ ಮತ್ತು ಉಪ್ಪಳ್. ಸತೀಶ್ ರೆಡ್ಡಿಗೆ ಸಿಕಂದರಾಬಾದ್, ಸಿಕಂದರಾಬಾದ್ ಕಂಟೋನ್ಮೆಂಟ್, ಸನತ್ ನಗರ, ಜ್ಯುಬಿಲಿ ಹಿಲ್ಸ್, […]

ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸುಧಾಕರ್, ಸತೀಶ್ ಉಸ್ತುವಾರಿಗಳು | Sudhakar and Satish Reddy to campaign in Hyderabad palike polls
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Nov 18, 2020 | 10:03 PM

Share

ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯ ಬಿಜೆಪಿ ಪಕ್ಷದ ಸಹ ಉಸ್ತುವಾರಿಗಳಾಗಿರುವ ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಮತ್ತು ಬೆಂಗಳೂರು ಮೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರಿಗೆ ಕ್ಷೇತ್ರಗಳನ್ನು ಹಂಚಿಕೆಮಾಡಿ ಉಸ್ತುವಾರಿವಹಿಸಿಕೊಳ್ಳಲು ಹೇಳಲಾಗಿದೆ.

ಸಚಿವ ಸುಧಾಕರ್​ಗೆ ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿವಹಿಸಲಾಗಿದೆ. ಅವುಗಳೆಂದರೆ, ಮಲ್ಕಾಜ್ ಗಿರಿ, ಖುತ್ಪುಲ್ಲಾಪುರ್, ಕುಕ್ಕಟ್​ಪಲ್ಲಿ ಮತ್ತು ಉಪ್ಪಳ್.

ಸತೀಶ್ ರೆಡ್ಡಿಗೆ ಸಿಕಂದರಾಬಾದ್, ಸಿಕಂದರಾಬಾದ್ ಕಂಟೋನ್ಮೆಂಟ್, ಸನತ್ ನಗರ, ಜ್ಯುಬಿಲಿ ಹಿಲ್ಸ್, ಖೈರತಾಬಾದ್, ಅಂಬರ್ ಪೇಟ್ ಮತ್ತು ಮುಶೀರಾಬಾದ್-ಒಟ್ಟು ಏಳು ವಿಧಾ‌ನಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ವಹಿಸಲಾಗಿದೆ.

ಇಂದು ಹೈದರಾಬಾದ್​ನಲ್ಲಿರುವ ತೆಲಂಗಾಣ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ಚುನಾವಣಾ ಉಸ್ತುವಾರಿ ಆಗಿರುವ ಭೂಪೇಂದ್ರ ಯಾದವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜವಾಬ್ದಾರಿಗಳನ್ನು ಹಂಚಲಾಯಿತು. ಸದರಿ ಸಭೆಯಲ್ಲಿ ಡಾ. ಸುಧಾಕರ ಮತ್ತು ಶಾಸಕ ಸತೀಶ್ ರೆಡ್ಡಿ ಸಹ ಪಾಲ್ಗೊಂಡಿದ್ದರು.

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.