Amazon Summer Offers | ಬೇಸಿಗೆ ಆರಂಭಕ್ಕೂ ಮೊದಲು ಅಮೆಜಾನ್​ನಲ್ಲಿ ಭರ್ಜರಿ ಆಫರ್​

| Updated By: ಸಾಧು ಶ್ರೀನಾಥ್​

Updated on: Feb 27, 2021 | 4:58 PM

Amazon Summer Offers | ಎಸಿ, ರೆಫ್ರಿಜರೇಟರ್​, ಕೂಲರ್​ ಸೇರಿ ಎಲ್ಲಾ ಬೇಸಿಗೆ ಉಪಕರಣಗಳ ಮೇಲೆ ಆಫರ್​ ಸಿಗಲಿದೆ. ಅಷ್ಟೇ ಅಲ್ಲದೆ, ಆ್ಯಕ್ಸಿಸ್​ ಬ್ಯಾಂಕ್​ ಕ್ರೆಡಿಟ್​-ಡೆಬಿಟ್​ ಕಾರ್ಡ್​ ಬಳಕೆ ಮಾಡಿ ಆರ್ಡರ್​ ಮಾಡಿದರೆ ಶೇ.10 ಡಿಸ್ಕೌಂಟ್​ ಸಿಗಲಿದೆ.

Amazon Summer Offers | ಬೇಸಿಗೆ ಆರಂಭಕ್ಕೂ ಮೊದಲು ಅಮೆಜಾನ್​ನಲ್ಲಿ ಭರ್ಜರಿ ಆಫರ್​
ಅಮೆಜಾನ್​ ಆಫರ್​ಗಳು
Follow us on

ಇ-ಕಾಮರ್ಸ್​​ ತಾಣಗಳು ಗ್ರಾಹಕರನ್ನು ಸೆಳೆಯಲು ಭರ್ಜರಿ ಆಫರ್​ ನೀಡುತ್ತವೆ. ಅದರಲ್ಲೂ ಹಬ್ಬದ ಸಮಯದಲ್ಲಿ ಬಟ್ಟೆ ಸೇರಿ ದಿನ ಬಳಕೆ ವಸ್ತುಗಳ ಮೇಲೆ ಸಾಕಷ್ಟು ಆಫರ್​ಗಳನ್ನು ನೀಡಲಾಗುತ್ತದೆ. ಈಗ ಬೇಸಿಗೆ ಆರಂಭಕ್ಕೂ ಮೊದಲು ಇ-ಕಾರ್ಮರ್ಸ್​ ದಿಗ್ಗಜ ಅಮೆಜಾನ್​ ಎಸಿ ಸೇರಿ ಸಾಕಷ್ಟು ಬೇಸಿಗೆ ಉಪಕರಣಗಳ ಮೇಲೆ ಶೇ. 50 ಆಫರ್​ ನೀಡುತ್ತಿದೆ. ಫೆಬ್ರವರಿ 26ಕ್ಕೆ ಈ ಆಫರ್​ ಆರಂಭವಾಗಿದ್ದು, ನಾಳೆ ಪೂರ್ಣಗೊಳ್ಳಲಿದೆ.

ಎಸಿ, ರೆಫ್ರಿಜರೇಟರ್​, ಕೂಲರ್​ ಸೇರಿ ಎಲ್ಲಾ ಬೇಸಿಗೆ ಉಪಕರಣಗಳ ಮೇಲೆ ಆಫರ್​ ಸಿಗಲಿದೆ. ಅಷ್ಟೇ ಅಲ್ಲದೆ, ಆ್ಯಕ್ಸಿಸ್​ ಬ್ಯಾಂಕ್​ ಕ್ರೆಡಿಟ್​-ಡೆಬಿಟ್​ ಕಾರ್ಡ್​ ಬಳಕೆ ಮಾಡಿ ಆರ್ಡರ್​ ಮಾಡಿದರೆ ಶೇ. 10 ಡಿಸ್ಕೌಂಟ್​ ಸಿಗಲಿದೆ. ಈ ಆಫರ್​ ಸಿಗಬೇಕು ಎಂದರೆ ನೀವು ಕನಿಷ್ಠ 7,500 ರೂಪಾಯಿ ಖರೀದಿ ಮಾಡಬೇಕು ಮತ್ತು ಇದರ ಗರಿಷ್ಟ ಡಿಸ್ಕೌಂಟ್​ 1,500 ರೂಪಾಯಿ ಆಗಿದೆ. ಅಮೆಜಾನ್​ ನೀಡುತ್ತಿರುವ ಆಫರ್​ನ ಸಂಪೂರ್ಣ ವಿವರ ಇಲ್ಲಿದೆ.

– Voltas, Daikin, LG, Whirlpool and Sanyo ಕಂಪೆನಿಯ ಏರ್​ ಕಂಡೀಷನರ್​ಗಳನ್ನು ಖರೀದಿ ಮಾಡಿದರೆ ನಿಮಗೆ ಶೇ. 40 ಡಿಸ್ಕೌಂಟ್​ ಸಿಗಲಿದೆ.
– ಸ್ಪ್ಲಿಟ್​ ಇನ್​​​ವರ್ಟರ್​ ಎಸಿಗಳ ಬೆಲೆ 22,999 ಹಾಗೂ ವಿಂಡೋ ಎಸಿ ಬೆಲೆ 17,490 ರೂಪಾಯಿ ಇಂದ ಆರಂಭ.
– LG, Samsung, Whirlpool ಸೇರಿ ಅನೇಕ ಕಂಪೆನಿಯ ರೆಫ್ರಿಜರೇಟರ್​ಗಳು ಆಫರ್​ನಲ್ಲಿ ಲಭ್ಯವಿದೆ. ಇದರಿಂದ ಶೇ. 35 ಆಫ್​ ಸಿಗಲಿದೆ. ಇದರ ಜತೆಗೆ ಶೇ.10 ಡಿಸ್ಕೌಂಟ್​ ಕೂಡ ಲಭ್ಯವಾಗುತ್ತಿದೆ.
– ಶಕ್ತಿ ಉಳಿತಾಯ ರೆಫ್ರಿಜರೇಟರ್​ಗಳು ಕೂಡ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಇವುಗಳ ಆರಂಭಿಕ ಬೆಲೆ 13,790 ರೂಪಾಯಿ ಆಗಿದೆ.
-ಎಕ್ಸ್​​​ಚೇಂಜ್​ ಆಫರ್​ ಕೂಡ ಲಭ್ಯವಿದೆ. ನಿಮಗೆ ಗರಿಷ್ಠ 12 ಸಾವಿರ ರೂಪಾಯಿ ವರೆಗೆ ಆಫ್​​ ಸಿಗಲಿದೆ.
-ಟಾಪ್​ ಬ್ರ್ಯಾಂಡ್​ ಇನ್ನು 657 ರೂಪಾಯಿಯಿಂದ ಇಎಂಐ ಆಫರ್​ಗಳು ಲಭ್ಯವಿದೆ.
– ಇನ್ನು ಕೂಲರ್​ಗಳ ಮೇಲೆ ನಿಮಗೇ ಶೇ. 50 ಆಫ್​ ನೀಡಲಾಗುತ್ತಿದೆ. ಸಿಂಪನಿ, ಬಜಾಜ್​ ಸೇರಿ ಸಾಕಷ್ಟು ಕಂಪೆನಿಗಳ ಕೂಲರ್​ಗಳು ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿದೆ.

ಇದನ್ನೂ ಓದಿ: ಅಮೆಜಾನ್​ ಸಂಸ್ಥೆಯಿಂದ ಚೀನಾಗೆ ಶಾಕ್​: ಭಾರತದಲ್ಲೇ ಡಿವೈಸ್​ ಉತ್ಪಾದನೆ!

Explainer | ಅಮೆಜಾನ್ ಸಿಇಒ ಹುದ್ದೆಯಿಂದ ಬಿಜೊಸ್ ಕೆಳಗಿಳಿಯುತ್ತಿರುವುದೇಕೆ? ಇನ್ಮುಂದೆ ಕಂಪನಿ ಮುನ್ನಡೆಸುವವರು ಯಾರು?