ಅಮೆಜಾನ್ ಸಂಸ್ಥೆಯಿಂದ ಚೀನಾಗೆ ಶಾಕ್: ಭಾರತದಲ್ಲೇ ಡಿವೈಸ್ ಉತ್ಪಾದನೆ!
ಭಾರತದಲ್ಲೇ ವಸ್ತುಗಳನ್ನು ಉತ್ಪಾದನೆ ಮಾಡುವ ನಿರ್ಧಾರದಿಂದ ಭಾರತದ ಆರ್ಥಿಕತೆಗೆ ಉತ್ತೇಜನ ಸಿಗಲಿದೆ. ಭಾರತದಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ ಎನ್ನುವುದು ಅಮೆಜಾನ್ ಸಂಸ್ಥೆಯ ಅಭಿಪ್ರಾಯ.
ಬೆಂಗಳೂರು: ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಅಮೆಜಾನ್ ಸಂಸ್ಥೆ ತನ್ನ ಸಾಧನಗಳನ್ನು ಭಾರತದಲ್ಲೇ ಉತ್ಪಾದನೆ ಮಾಡುವ ನಿರ್ಧಾರಕ್ಕೆ ಬಂದಿದೆ. ಈ ಬೆಳವಣಿಗೆಯಿಂದ ಕೇಂದ್ರ ಸರ್ಕಾರದ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾಗೆ (Make-in-India) ಉತ್ತೇಜನ ಸಿಗಲಿದೆ. ಅಲ್ಲದೆ, ಚೀನಾ ವಸ್ತುಗಳನ್ನುಬಹಿಷ್ಕಾರ ಮಾಡುವ ಭಾರತೀಯರ ಆಂದೋಲನಕ್ಕೂ ಬೆಂಬಲ ಸಿಕ್ಕಂತಾಗುತ್ತಿದೆ.
ಮೊದಲ ಹಂತದಲ್ಲಿ ಸ್ಮಾರ್ಟ್ ಟಿವಿ ಸ್ಟ್ರೀಮಿಂಗ್ಗೆ ಬೇಕಾಗುವ ಫೈರ್ ಟಿವಿ ಸ್ಟಿಕ್ಗಳನ್ನು ಚೆನ್ನೈನಲ್ಲಿ ಉತ್ಪಾದನೆ ಮಾಡುತ್ತಿದೆ. ವರ್ಷಾಂತ್ಯಕ್ಕೆ ಚೆನ್ನೈನಲ್ಲಿ ಈ ಘಟಕ ಆರಂಭ ಆಗುವ ನಿರೀಕ್ಷೆ ಇದೆ. ಭಾರತಕ್ಕೆ ಬೇಕಾಗುವ ಫೈರ್ ಟಿವಿ ಸ್ಟಿಕ್ಗಳಿಗಾಗಿ ಅಮೆಜಾನ್ ಸಂಸ್ಥೆ ಚೀನಾ ಹಾಗೂ ತೈವಾನ್ ದೇಶದ ಮೇಲೆ ಅವಲಂಬಿತವಾಗಿದೆ. ಇದನ್ನು ಹೋಗಲಾಡಿಸುವ ಉದ್ದೇಶದಿಂದ ಭಾರತದಲ್ಲೇ ಇದರ ಘಟಕ ಆರಂಭಗೊಳ್ಳಲಿದೆ. ಬೇಡಿಕೆ ನೋಡಿಕೊಂಡು ಎಷ್ಟು ಉತ್ಪಾದನೆ ಮಾಡಬೇಕು ಎನ್ನುವುದು ನಿರ್ಧಾರವಾಗುತ್ತದೆ ಎಂದು ಅಮೆಜಾನ್ ತನ್ನ ಬ್ಲಾಗ್ನಲ್ಲಿ ತಿಳಿಸಿದೆ.
ಭಾರತದಲ್ಲೇ ವಸ್ತುಗಳನ್ನು ಉತ್ಪಾದನೆ ಮಾಡುವ ನಿರ್ಧಾರದಿಂದ ಭಾರತದ ಆರ್ಥಿಕತೆಗೆ ಉತ್ತೇಜನ ಸಿಗಲಿದೆ. ಭಾರತದಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ ಎನ್ನುವುದು ಅಮೆಜಾನ್ ಸಂಸ್ಥೆಯ ಅಭಿಪ್ರಾಯ.
Delighted to announce our first device manufacturing line in India.
This further reiterates our commitment to ‘Make in India’, contributing directly to the local economy, creating jobs & boosting Indian innovation.
@rsprasad @PMOIndia https://t.co/mJ1eAkkd6I
— Amit Agarwal (@AmitAgarwal) February 16, 2021
Held a very good conversation with @AmitAgarwal and @Chetankrishna of @amazonIN today. Delighted to share that soon Amazon will commence manufacturing of electronics products like FireTV stick in India. pic.twitter.com/BRpnUG6fA5
— Ravi Shankar Prasad (@rsprasad) February 16, 2021
ಅಮೆಜಾನ್ ನಿರ್ಧಾರವನ್ನು ಸ್ವಾಗತ ಮಾಡಿರುವ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್, ಪ್ರಧಾನಿ ನರೇಂದ್ರ ಮೋದಿ ಅಧಿಕಾರದ ಅವಧಿಯಲ್ಲಿ ಭಾರತ ದೊಡ್ಡ ದೊಡ್ಡ ಹೂಡಿಕೆಗಳನ್ನು ಪಡೆದಿದೆ. ಅಮೆಜಾನ್ ಇದಕ್ಕೆ ಹೊಸ ಸೇರ್ಪಡೆ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Explainer | ಅಮೆಜಾನ್ ಸಿಇಒ ಹುದ್ದೆಯಿಂದ ಬಿಜೊಸ್ ಕೆಳಗಿಳಿಯುತ್ತಿರುವುದೇಕೆ? ಇನ್ಮುಂದೆ ಕಂಪನಿ ಮುನ್ನಡೆಸುವವರು ಯಾರು?