ಸೂಪರ್​ ಸ್ಟಾರ್ ರಜನಿಕಾಂತ್ ‘ಅಣ್ಣಾತೆ’ ಸಿನಿಮಾ ರದ್ದು.. ಏಕೆ?

| Updated By: ಸಾಧು ಶ್ರೀನಾಥ್​

Updated on: Dec 23, 2020 | 5:01 PM

ಸೂಪರ್ ಸ್ಟಾರ್ ರಜನಿಕಾಂತ್ ನೂತನ ಸಿನಿಮಾ ‘ಅಣ್ಣಾತೆ’ ಚಿತ್ರೀಕರಣ ಆರಂಭಗೊಂಡಿತ್ತು. ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಚಿತ್ರೀಕರಣವನ್ನು ರದ್ದುಗೊಳಿಸಲಾಗಿದೆ.

ಸೂಪರ್​ ಸ್ಟಾರ್ ರಜನಿಕಾಂತ್ ‘ಅಣ್ಣಾತೆ’ ಸಿನಿಮಾ ರದ್ದು.. ಏಕೆ?
ಸೂಪರ್ ಸ್ಟಾರ್ ರಜಿನಿಕಾಂತ್ ‘ಅಣ್ಣಾತೆ’ ಸಿನಿಮಾ
Follow us on

ಹೈದರಾಬಾದ್: ಸೂಪರ್ ಸ್ಟಾರ್ ರಜನಿಕಾಂತ್ ನೂತನ ಸಿನಿಮಾ ‘ಅಣ್ಣಾತೆ’ ಚಿತ್ರೀಕರಣ ಆರಂಭಗೊಂಡಿತ್ತು. ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಚಿತ್ರೀಕರಣವನ್ನು ರದ್ದುಗೊಳಿಸಲಾಗಿದೆ.

ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣವನ್ನು ನಡೆಸಲಾಗುತ್ತಿತ್ತು. ಪಾಲ್ಗೊಂಡಿದ್ದ 8 ಜನರಿಗೆ ಕೊರೊನಾ ಪಾಸಿಟಿವ್ ಬಂದಿರುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಅಣ್ಣಾತೆ ಎಂಬುದು ತಮಿಳಿನ ಆ್ಯಕ್ಷನ್ ನಾಟಕ ಚಲನಚಿತ್ರವಾಗಿತ್ತು. ಸಿರುಥೈ ಸಿವ ಚಿತ್ರ ಕಥೆ ಬರೆದು ನಿರ್ದೇಶನ ಮಾಡಿದ್ದರು. ನಟಿ ಕೀರ್ತಿ ಸುರೇಶ್ ಮತ್ತು ನಯನ​ತಾರಾ ಮುಖ್ಯ ಪಾತ್ರದಲ್ಲಿ ಹಾಗೂ ಮೀನಾ ಮತ್ತು ಖುಷ್ಬೂ ಸುಂದರ್ ಸಹಾಯಕ ಪಾತ್ರದಲ್ಲಿ ನಟಿಸುತ್ತಿದ್ದರು.

ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಪಾಸಿಟಿವ್​ ವರದಿಯಿಂದ ಚಿತ್ರೀಕರಣ ರದ್ದಾಗಿದ್ದು, ಚಿತ್ರೀಕರಣದ ಪುನರಾರಂಭ ಯಾವಾಗ ಎಂಬುದನ್ನು ಕಾದು ನೋಡಬೇಕಿದೆ.

ರಾಜಕೀಯ ವಿಶ್ಲೇಷಣೆ | ತಮಿಳುನಾಡು ರಾಜಕೀಯದಲ್ಲೂ ಸೂಪರ್​ಸ್ಟಾರ್ ಆಗ್ತಾರಾ ರಜನಿಕಾಂತ್