ಮಾರ್ಚ್ 3ನೇ ತಾರೀಕು ಟಾಟಾ ಸಮೂಹ ಕಂಪೆನಿಗಳ ಸ್ಥಾಪಕ ಜೆಮ್ಷೆಡ್ ಜೀ ಟಾಟಾ ಅವರ ಜನ್ಮದಿನ. ಟಾಟಾ ಕಂಪೆನಿ ಸ್ಥಾಪಕರ ದಿನವನ್ನಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಇಂಥದ್ದೊಂದು ಸಾಮ್ರಾಜ್ಯ ಕಟ್ಟಲು ಶತಮಾನಗಳ ಶ್ರಮ ಇದೆ. ಗುಂಡು ಪಿನ್ನಿಂದ ಏರೋಪ್ಲೇನ್ ತನಕ ಈ ಕಂಪೆನಿಯ ಅಸ್ತಿತ್ವ ಇಲ್ಲದ ಜಾಗಗಳಿಲ್ಲ. ಲಾಭ- ನಷ್ಟದ ಲೆಕ್ಕಾಚಾರದಲ್ಲಿ ಈ ಕಂಪೆನಿ ಅಲ್ಲಿ- ಇಲ್ಲಿ ಸೋತಿದ್ದಿರಬಹುದು. ಆದರೆ ಹೂಡಿಕೆದಾರರ ವಿಶ್ವಾಸ ಗಟ್ಟಿಯಾಗಿ ಉಳಿಸಿಕೊಂಡಿದೆ. ಈ ಲೇಖನವನ್ನು ಟಾಟಾ ಸಮೂಹ ಕಂಪೆನಿಗಳ ಷೇರುಗಳ ಯಶೋಗಾಥೆಯನ್ನು ಅಂಕಿಗಳಲ್ಲಿ ತಿಳಿಸುವುದಕ್ಕೆ ಅಂತಲೇ ಮೀಸಲಿಡಲಾಗಿದೆ. ಹಾಗಂತ ಇಂಥದ್ದೇ ಷೇರು ಖರೀದಿಸಿ ಎಂದು ಶಿಫಾರಸು ಮಾಡುವುದು ನಮ್ಮ ಉದ್ದೇಶವಿಲ್ಲ. ಹಾಗೊಂದು ವೇಳೆ ಖರೀದಿ ಮಾಡಿದಲ್ಲಿ ಅದರ ಲಾಭ- ನಷ್ಟ ಯಾವುದಕ್ಕೂ ಲೇಖಕರಾಗಲೀ ಟಿವಿ9 ಕನ್ನಡ ಡಿಜಿಟಲ್ ಮತ್ತು ಅದರ ಯಾವುದೇ ಸಹವರ್ತಿ ಕಂಪೆನಿಗಳು ಜವಾಬ್ದಾರ ಅಲ್ಲ.
ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡು, ಲಾಕ್ಡೌನ್ ಘೋಷಣೆ ಆರಂಭವಾದಾಗ ಮಾರ್ಚ್ ತಿಂಗಳಲ್ಲಿ ಬಾಂಬೆ ಷೇರು ಮಾರುಕಟ್ಟೆಯು 25,600 ಪಾಯಿಂಟ್ ಸಮೀಪಕ್ಕೆ ಬಂದು ನಿಂತುಬಿಟ್ಟಿತು. ಅದೆಷ್ಟೋ ಕಂಪೆನಿಯ ಷೇರುಗಳು ಹತ್ತು ವರ್ಷಗಳ ಕನಿಷ್ಠ ಮಟ್ಟಕ್ಕೆ, ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಬಂದು ತಲುಪಿದವು. ಆದರೆ ಈಚೆಗೆ ಬಿಎಸ್ಇ ಸೂಚ್ಯಂಕ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 52,516 ಪಾಯಿಂಟ್ ಮುಟ್ಟಿತ್ತು. ಒಂದು ವರ್ಷದೊಳಗೆ ಡಬಲ್ಗಿಂತ ಹೆಚ್ಚಾಗಿ ಸೂಚ್ಯಂಕ ಮೇಲೆದ್ದಿದೆ. ಬಿದ್ದ ವೇಗಕ್ಕಿಂತ ಬೇಗ ಚಿಗಿತುನಿಂತಿದೆ. ಈ ಪಯಣದಲ್ಲಿ ಟಾಟಾ ಸಮೂಹ ಕಂಪೆನಿಗಳ ಷೇರು ಎಷ್ಟು ಪರ್ಸೆಂಟ್ ಲಾಭ ಗಳಿಸಿವೆ, ವಾರ್ಷಿಕ ಗರಿಷ್ಠ- ಕನಿಷ್ಠ ಮಟ್ಟ ಹಾಗೂ ಇಂದಿನ (4-3-2021) ದರಕ್ಕೆ ಲೆಕ್ಕ ಹಾಕಿದಲ್ಲಿ ಎಷ್ಟು ಪರ್ಸೆಂಟ್ ಲಾಭ ಸಿಕ್ಕಂತಾಗುತ್ತದೆ ಎಂಬ ಆಸಕ್ತಿಕರ ಸಂಗತಿಗಳು ಇಲ್ಲಿವೆ.
ಷೇರುಪೇಟೆಯಲ್ಲಿ ಟಾಟಾ ಸಮೂಹದ 17 ಕಂಪೆನಿಗಳು
ಟಾಟಾ ಸಮೂಹದ್ದು ಲಿಸ್ಟಿಂಗ್ ಆಗದ ಕಂಪೆನಿಗಳೂ ಇವೆ. ಆದರೆ ಇಲ್ಲಿ ಗಣನೆಗೆ ತೆಗೆದುಕೊಳ್ಳುತ್ತಿರುವುದು ಲಿಸ್ಟಿಂಗ್ ಆದ ಕಂಪೆನಿಯ ಷೇರುಗಳ ಬೆಲೆ ಮಾತ್ರ. ಮೊದಲೇ ಹೇಳಿದ ಹಾಗೆ ವೈವಿಧ್ಯಮಯವಾದ ವ್ಯವಹಾರಗಳನ್ನು ಟಾಟಾ ಸಮೂಹ ನಡೆಸುತ್ತಿದ್ದು, 17 ಕಂಪೆನಿಗಳು ಷೇರುಪೇಟೆಯಲ್ಲಿ ವಹಿವಾಟು ನಡೆಸುತ್ತಿವೆ. ಇಲ್ಲಿವೆ ಟಾಟಾ ಸಮೂಹದ ಲಿಸ್ಟೆಡ್ ಕಂಪೆನಿಗಳ ವಿವರ: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟೈಟಾನ್ ಕಂಪೆನಿ, ಟಾಟಾ ಕೆಮಿಕಲ್ಸ್, ಟಾಟಾ ಪವರ್, ಇಂಡಿಯನ್ ಹೋಟೆಲ್ಸ್, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್, ಟಾಟಾ ಕಮ್ಯುನಿಕೇಷನ್ಸ್, ವೊಲ್ಟಾಸ್, ಟ್ರೆಂಟ್ ಲಿಮಿಟೆಡ್, ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ಸ್ ಲಿಮಿಟೆಡ್, ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್, ಟಾಟಾ ಮೆಟಾಲಿಕ್ಸ್, ಟಾಟಾ ಎಲಾಕ್ಸಿ, ನೆಲ್ಕೋ, ಟಾಟಾ ಕಾಫೀ. ಎನ್ಎಸ್ಇಯಲ್ಲಿ ಇದರ ಬೆಲೆ ವಿವರ ಹೀಗಿದೆ.
ಟಾಟಾ ಸಮೂಹದ 17 ಲಿಸ್ಟಿಂಗ್ ಕಂಪೆನಿಗಳ ಒಂದು ವರ್ಷದಲ್ಲಿನ ಗಳಿಕೆ | ||||
ಕಂಪೆನಿ ಹೆಸರು | 2020ರ ಮಾರ್ಚ್ ಕನಿಷ್ಠ ದರ | 2021 ಮಾರ್ಚ್ 4ರ ದರ | ವಾರ್ಷಿಕ ಗರಿಷ್ಠ | ಶೇಕಡಾವಾರು ಗಳಿಕೆ |
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ | 1506.05 | 3071.1 | 3,339.80 | 103.85 |
ಟಾಟಾ ಸ್ಟೀಲ್ | 250.85 | 765 | 782.5 | 204.96 |
ಟಾಟಾ ಮೋಟಾರ್ಸ್ | 63.5 | 344.05 | 357 | 441.81 |
ಟೈಟಾನ್ ಕಂಪೆನಿ | 720.9 | 1481.95 | 1621.35 | 105.56 |
ಟಾಟಾ ಕೆಮಿಕಲ್ಸ್ | 197 | 779.15 | 792.05 | 295.5 |
ಟಾಟಾ ಪವರ್ | 27 | 109.35 | 114 | 305 |
ಇಂಡಿಯನ್ ಹೋಟೆಲ್ಸ್ | 62.1 | 129.2 | 139.25 | 108.05 |
ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ | 213.7 | 632.95 | 654 | 196.18 |
ಟಾಟಾ ಕಮ್ಯುನಿಕೇಷನ್ಸ್ | 200 | 1230.3 | 1342.15 | 515.15 |
ವೊಲ್ಟಾಸ್ (ಮೇ 6, 2020) | 427.45 | 1079.55 | 1132 | 152.55 |
ಟ್ರೆಂಟ್ ಲಿಮಿಟೆಡ್ | 365 | 922.2 | 944 | 152.65 |
ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ಸ್ ಲಿಮಿಟೆಡ್ | 164 | 711.55 | 875 | 333.87 |
ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ | 591 | 1,141.70 | 1,163 | 93.18 |
ಟಾಟಾ ಮೆಟಾಲಿಕ್ಸ್ | 308 | 823.55 | 934 | 167.38 |
ಟಾಟಾ ಎಲಾಕ್ಸಿ | 499.95 | 2,706.00 | 3050 | 441.25 |
ನೆಲ್ಕೋ | 115 | 218.55 | 239.45 | 90.04 |
ಟಾಟಾ ಕಾಫೀ | 48 | 135.9 | 137.85 | 183.12 |
ಹೆಚ್ಚು ಲಾಭ ತಂದುಕೊಟ್ಟಿರುವ ಟಾಪ್ 5 ಕಂಪೆನಿಗಳು
ಹೂಡಿಕೆದಾರರಿಗೆ ಕಳೆದ ಒಂದು ವರ್ಷದಲ್ಲಿ ಹೆಚ್ಚಿನ ಲಾಭ ತಂದುಕೊಟ್ಟಿರುವ ಟಾಪ್ 5 ಷೇರುಗಳು ಯಾವುವು ಅಂತ ನೋಡುವುದಾದರೆ, ಟಾಟಾ ಕಮ್ಯುನಿಕೇಷನ್ಸ್, ಟಾಟಾ ಮೋಟಾರ್ಸ್, ಟಾಟಾ ಎಲಾಕ್ಸಿ, ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ಸ್ ಲಿಮಿಟೆಡ್ ಹಾಗೂ ಟಾಟಾ ಕೆಮಿಕಲ್ಸ್ ಮುಖ್ಯವಾಗಿ ಕಾಣುತ್ತವೆ. ಹೂಡಿಕೆಯಲ್ಲಿ ವೈವಿಧ್ಯ ಕಾಯ್ದುಕೊಳ್ಳಬೇಕು ಎಂದು ಬಯಸುವವರಿಗೆ ನಾನಾ ಉದ್ಯಮದಲ್ಲಿ ತೊಡಗಿಕೊಂಡಿರುವ ಕಂಪೆನಿಗಳು ಟಾಟಾ ಸಮೂಹದಲ್ಲೇ ಕಂಡುಬರುತ್ತವೆ. ಬ್ಯಾಂಕ್ಗಳಲ್ಲಿ ಎಫ್.ಡಿ. ದರ ಆರೆಂಟು ಪರ್ಸೆಂಟ್ ಇರುವ ಕಾಲಘಟ್ಟದಲ್ಲಿ ವರ್ಷದಲ್ಲಿ ಮುನ್ನೂರು- ನಾನೂರು ಪರ್ಸೆಂಟ್ ಗಳಿಕೆ ತಂದುಕೊಟ್ಟಿರುವ ಈ ಕಂಪೆನಿಗಳು ಹೂಡಿಕೆದಾರರ ಪಾಲಿಗೆ ಅಲಾವುದ್ದೀನ್ನ ಕಥೆಯಲ್ಲಿ ಬರುವ ಅದ್ಭುತ ದೀಪದಂತೆಯೇ ಕಂಡುಬರಬಹುದು. ಅದರ ಜತೆಗೆ ಮಾರುಕಟ್ಟೆ ಅನಿಶ್ಚಿತತೆ ಎಂಬ ಕ್ರೂರ ಮಾಂತ್ರಿಕನ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು, ಅಷ್ಟೇ.
ಇದನ್ನೂ ಓದಿ: ಷೇರು ಮಾರ್ಕೆಟ್ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್
ಇದನ್ನೂ ಓದಿ: Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?
My best wishes to all the Tata group companies, the employees & their families on the birth anniversary of our founder, Mr. Jamsetji Tata, who has inspired us with his kindness over the years.
This founder’s day has special emotions for me, reminding me of my mentor Mr. JRD Tata pic.twitter.com/GUZCqj9ESk
— Ratan N. Tata (@RNTata2000) March 3, 2021
Published On - 6:04 pm, Thu, 4 March 21