India vs Australia 2020 ಬ್ರಿಸ್ಬೇನ್‌ನಲ್ಲಿ ಕಾಂಗರೂಗಳದ್ದೇ ಕಾರುಬಾರು.. ಇಂಡಿಯಾ ಒಂದೂ ಪಂದ್ಯ ಗೆದ್ದಿಲ್ಲ!
ಬ್ರಿಸ್ಬೇನ್ ಕ್ರಿಕೆಟ್ ಮೈದಾನದಲ್ಲಿ ಟೀಮ್ ಇಂಡಿಯಾದ ಟ್ರ್ಯಾಕ್ ರೆಕಾರ್ಡ್ ಉತ್ತಮವಾಗಿಲ್ಲ. ಟೆಸ್ಟ್ ಕ್ರಿಕೆಟ್ ಪ್ರಾರಂಭವಾದಾಗಿನಿಂದ, ಬ್ರಿಸ್ಬೇನ್‌ನಲ್ಲಿ ಭಾರತ ಒಂದು ಪಂದ್ಯದಲ್ಲೂ ಗೆಲುವು ದಾಖಲಿಸಿಲ್ಲ. ಈಗಾಗಲೇ ಗಾಯದ ಸಮಸ್ಯೆಯಿಂದಾಗಿ ತಂಡದ ಪ್ರಮುಖ ಆಟಗಾರರು ತಂಡದಿಂದ ಹೊರಗುಳಿದಿದ್ದಾರೆ.
ಬ್ರಿಸ್ಬೇನ್: ಇಂಡಿಯಾ- ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಪಂದ್ಯ ಜನವರಿ 15 ರಿಂದ ಶುರುವಾಗಲಿದ್ದು, ಈಗ ಟೀಂ ಇಂಡಿಯಾಕ್ಕೆ ಆಟಗಾರರ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದು ಸಾಲದೆಂಬಂತೆ ಬ್ರಿಸ್ಬೇನ್ ಮೈದಾನದಲ್ಲಿ ಟೀಂ ಇಂಡಿಯಾ ಆಡಿರುವ ಅಷ್ಟೂ ಟೆಸ್ಟ್ ಮ್ಯಾಚ್ಗಳಲ್ಲಿ ಸೋಲಿನ ಕಹಿ ಉಂಡಿದೆ. ಹೀಗಾಗಿ ಈಗಾಗಲೇ ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದ 7 ಆಟಗಾರರು ತಂಡದಿಂದ ಹೊರಗುಳಿದಿರುವುದು ಟೀಂ ಇಂಡಿಯಾಕ್ಕೆ ನುಂಗಲಾರದ ತುತ್ತಾಗಿದೆ.
ಬ್ರಿಸ್ಬೇನ್‌ನಲ್ಲಿ ಆತಿಥೇಯರ ಟ್ರ್ಯಾಕ್ ರೆಕಾರ್ಡ್ ಹೀಗಿದೆ.. ಬ್ರಿಸ್ಬೇನ್‌ನ ಮೈದಾನದಲ್ಲಿ ಆಸಿಸ್ ಪಡೆ ಅಸಾಧಾರಣ ದಾಖಲೆಯನ್ನು ಹೊಂದಿದೆ. ಈ ಮೈದಾನದಲ್ಲಿ ಆಸಿಸ್ ಪಡೆ ಆಡಿದ 55 ಪಂದ್ಯಗಳಲ್ಲಿ 33 ಪಂದ್ಯಗಳನ್ನು ಗೆದ್ದಿದ್ದರೆ, ಎಂಟು ಪಂದ್ಯಗಳಲ್ಲಿ ಮಾತ್ರ ಸೋಲೊಪ್ಪಿಕೊಂಡಿದೆ. ಒಂದು ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದಾರೆ ಉಳಿದ 13 ಪಂದ್ಯಗಳು ಕಾರಣಾಂತರಗಳಿಂದ ಸ್ಥಗಿತಗೊಂಡಿವೆ. ಟೀಂ ಇಂಡಿಯಾಕ್ಕೆ ಆಘಾತಕಾರಿ ಸುದ್ದಿಯೆಂದರೆ, ಆಸ್ಟ್ರೇಲಿಯಾ ತಂಡವು 1988 ರಿಂದ ಇಲ್ಲಿಯವರೆಗೂ ಬ್ರಿಸ್ಬೇನ್‌ನಲ್ಲಿ 28 ಪಂದ್ಯಗಳನ್ನಾಡಿದ್ದು, ಈ 28 ಪಂದ್ಯಗಳಲ್ಲಿ ಗೆಲುವು ದಾಖಲಿಸಿ ದಾಖಲೆ ನಿರ್ಮಿಸಿದೆ. ಹೀಗಾಗಿ ಈ ಮೈದಾನದಲ್ಲಿ ಟೀಂ ಆಸಿಸ್ ಗೆಲ್ಲುವ ಆತ್ಮ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ.
ಇನ್ನು, ಬ್ರಿಸ್ಬೇನ್‌ನಲ್ಲಿ ಟೀಮ್ ಇಂಡಿಯಾದ ಟ್ರ್ಯಾಕ್ ರೆಕಾರ್ಡ್.. ಬ್ರಿಸ್ಬೇನ್ ಕ್ರಿಕೆಟ್ ಮೈದಾನದಲ್ಲಿ ಟೀಮ್ ಇಂಡಿಯಾದ ಟ್ರ್ಯಾಕ್ ರೆಕಾರ್ಡ್ ಉತ್ತಮವಾಗಿಲ್ಲ. ಟೆಸ್ಟ್ ಕ್ರಿಕೆಟ್ ಪ್ರಾರಂಭವಾದಾಗಿನಿಂದ, ಬ್ರಿಸ್ಬೇನ್‌ನಲ್ಲಿ ಭಾರತ ಒಂದು ಪಂದ್ಯದಲ್ಲೂ ಗೆಲುವು ದಾಖಲಿಸಿಲ್ಲ. ಈಗಾಗಲೇ ಗಾಯದ ಸಮಸ್ಯೆಯಿಂದಾಗಿ ತಂಡದ ಪ್ರಮುಖ ಆಟಗಾರರು ತಂಡದಿಂದ ಹೊರಗುಳಿದಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಇಟ್ಟುಕೊಂಡು ಟೀಂ ಇಂಡಿಯಾದ ನಾಯಕ ಅಜಿಂಕ್ಯಾ ರಹಾನೆ ಹೇಗೆ ಪಂದ್ಯಕ್ಕೆ ಸಜ್ಜಾಗಲ್ಲಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಅಂತಿಮ ಟೆಸ್ಟ್ ಪಂದ್ಯವೇನಾದರೂ ಪಲಿತಾಂಶವಿಲ್ಲದೆ ಕೊನೆಗೊಂಡರೆ, ನಾಲ್ಕು ಪಂದ್ಯಗಳ ಸರಣಿ 1-1ರಲ್ಲಿ ಸಮಗೊಳ್ಳುತ್ತದೆ. ಹೀಗಾಗಿ ಟೀಂ ಇಂಡಿಯಾದ ಬಳಿಯಲ್ಲೇ ಬಾರ್ಡರ್-ಗವಾಸ್ಕರ್ ಟ್ರೋಫಿ ಉಳಿದುಕೊಳ್ಳಲ್ಲಿದೆ. 2018-19ರ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-1 ರಿಂದ ಸರಣಿ ಗೆದ್ದಿತ್ತು. ಅಲ್ಲದೆ ಇದು ಆಸ್ಟ್ರೇಲಿಯಾ ನೆಲದಲ್ಲಿ ಟೀಮ್ ಇಂಡಿಯಾದ ಮೊದಲ ಟೆಸ್ಟ್ ಸರಣಿಯ ಗೆಲುವು ಸಹ ಆಗಿತ್ತು.
India vs Australia Test Series | ಟೀಮ್ ಇಂಡಿಯಾಗೆ ಬ್ರಿಸ್ಬೇನ್ಲ್ಲಿ ಸಿಕ್ಕಿದ್ದು ಸೌಲಭ್ಯಗಳಿಲ್ಲದ ಹೋಟೆಲ್
Published On - 11:39 am, Wed, 13 January 21