ಭೀಮಾ ನದಿಗೆ ಕಾಯಿನ್ ಹಾಕ್ತಿನಿ ಅಂತಾ ಸೇತುವೆ ಬಳಿ ಬಂದವಳು ವಾಪಸ್​ ಬರಲೇ ಇಲ್ಲ..

ವಿಜಯಪುರ: ಸೇತುವೆ ಮೇಲಿಂದ ಭೀಮಾ ನದಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ್ ಸೇತುವೆ ಬಳಿ ನಡೆದಿದೆ. ಧಾರವಾಡ ಜಿಲ್ಲೆಯ ನವಲಗುಂದದ ನಿವಾಸಿ ಐಶ್ವರ್ಯ ಶ್ರೀಪಾಲ್ ಕಬ್ಬಿನ(20) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ತಿಳಿದುಬಂದಿದೆ. ಕಲಬುರಗಿ ಜಿಲ್ಲೆಯ ಗಾಣಗಾಪುರದಲ್ಲಿರುವ ದತ್ತಾತ್ರೇಯ ದೇಗುಲಕ್ಕೆ ಹೋಗುವಾಗ ದಾರಿ ಮಧ್ಯೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಐಶ್ವರ್ಯ ತನ್ನ ಅಕ್ಕ-ಭಾವ, ತಾಯಿ ಮತ್ತು ಇತರೆ ಸಂಬಂಧಿಕರ ಜೊತೆ ದೇವಸ್ಥಾನಕ್ಕೆ ಹೋಗುತ್ತಿದ್ದಳು. ಇದೇ ವೇಳೆ ನದಿಗೆ ಕಾಯಿನ್ ಹಾಕಬೇಕು […]

ಭೀಮಾ ನದಿಗೆ ಕಾಯಿನ್ ಹಾಕ್ತಿನಿ ಅಂತಾ ಸೇತುವೆ ಬಳಿ ಬಂದವಳು ವಾಪಸ್​ ಬರಲೇ ಇಲ್ಲ..

Updated on: Oct 25, 2020 | 1:34 PM

ವಿಜಯಪುರ: ಸೇತುವೆ ಮೇಲಿಂದ ಭೀಮಾ ನದಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ್ ಸೇತುವೆ ಬಳಿ ನಡೆದಿದೆ. ಧಾರವಾಡ ಜಿಲ್ಲೆಯ ನವಲಗುಂದದ ನಿವಾಸಿ ಐಶ್ವರ್ಯ ಶ್ರೀಪಾಲ್ ಕಬ್ಬಿನ(20) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ತಿಳಿದುಬಂದಿದೆ.
ಕಲಬುರಗಿ ಜಿಲ್ಲೆಯ ಗಾಣಗಾಪುರದಲ್ಲಿರುವ ದತ್ತಾತ್ರೇಯ ದೇಗುಲಕ್ಕೆ ಹೋಗುವಾಗ ದಾರಿ ಮಧ್ಯೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಐಶ್ವರ್ಯ ತನ್ನ ಅಕ್ಕ-ಭಾವ, ತಾಯಿ ಮತ್ತು ಇತರೆ ಸಂಬಂಧಿಕರ ಜೊತೆ ದೇವಸ್ಥಾನಕ್ಕೆ ಹೋಗುತ್ತಿದ್ದಳು. ಇದೇ ವೇಳೆ ನದಿಗೆ ಕಾಯಿನ್ ಹಾಕಬೇಕು ಎಂದು ಕುಟುಂಬಸ್ಥರ ಬಳಿ ವಾಹನ ನಿಲ್ಲಿಸಿದ್ದ ಐಶ್ವರ್ಯ ನೋಡನೋಡುತ್ತಿದ್ದಂತೆಯೇ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂದು ತಿಳಿದುಬಂದಿಲ್ಲ. ಸ್ಥಳದಲ್ಲಿ ಯುವತಿಯ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತು.