‘ಡಿಕೆಶಿ ನಾಯಕತ್ವ ಬೇಕು ಅಂತಾ ಕಾಂಗ್ರೆಸ್ನ ಒಬ್ರೂ ಹೇಳಲ್ಲ.. ಸಿದ್ದರಾಮಯ್ಯನೇ ಬೇಕು ಅಂತಾರೆ’
ಬೆಂಗಳೂರು: ನಾನು 10 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಇದ್ದೆ. ಆಗ ಡಿ.ಕೆ. ಸಹೋದರರಿಗೆ ಈ ಮುನಿರತ್ನ ಒಳ್ಳೆಯವನಾಗಿದ್ದ. ಈಗ ಮುನಿರತ್ನ ಇವರಿಗೆ ಅಷ್ಟೊಂದು ಕಹಿಯಾಗಿ ಬಿಟ್ನಾ? ಎಂದು ಡಿ.ಕೆ. ಸಹೋದರರಿಗೆ R.R.ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಟಾಂಗ್ ಕೊಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ಕೆಂಪೇಗೌಡ ಅಧ್ಯಯನ ಪೀಠದ ಉದ್ಘಾಟನೆ ದಿನ ನನ್ನನ್ನೂ ಹೊಗಳಿದ್ರು. ಎಲ್ಲರನ್ನೂ ಒಟ್ಟಿಗೆ ಇಟ್ಕೊಂಡು ಹೋಗಿ. ನಾಡಪ್ರಭು ಕೆಂಪೇಗೌಡರ ಇತಿಹಾಸ ಓದಿ. ಕೆಂಪೇಗೌಡರ ಇತಿಹಾಸ ಓದದೆ ನೀವು ರಾಜಕೀಯ ಮಾಡೋಕೆ ಆಗಲ್ಲ. ನೀವು […]
ಬೆಂಗಳೂರು: ನಾನು 10 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಇದ್ದೆ. ಆಗ ಡಿ.ಕೆ. ಸಹೋದರರಿಗೆ ಈ ಮುನಿರತ್ನ ಒಳ್ಳೆಯವನಾಗಿದ್ದ. ಈಗ ಮುನಿರತ್ನ ಇವರಿಗೆ ಅಷ್ಟೊಂದು ಕಹಿಯಾಗಿ ಬಿಟ್ನಾ? ಎಂದು ಡಿ.ಕೆ. ಸಹೋದರರಿಗೆ R.R.ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಟಾಂಗ್ ಕೊಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ಕೆಂಪೇಗೌಡ ಅಧ್ಯಯನ ಪೀಠದ ಉದ್ಘಾಟನೆ ದಿನ ನನ್ನನ್ನೂ ಹೊಗಳಿದ್ರು. ಎಲ್ಲರನ್ನೂ ಒಟ್ಟಿಗೆ ಇಟ್ಕೊಂಡು ಹೋಗಿ. ನಾಡಪ್ರಭು ಕೆಂಪೇಗೌಡರ ಇತಿಹಾಸ ಓದಿ. ಕೆಂಪೇಗೌಡರ ಇತಿಹಾಸ ಓದದೆ ನೀವು ರಾಜಕೀಯ ಮಾಡೋಕೆ ಆಗಲ್ಲ. ನೀವು ಬೆಳೆಯಬೇಕು ಅಂದ್ರೆ ಕೆಂಪೇಗೌಡರ ಇತಿಹಾಸ ಓದಿ ಎಂದು ಮುನಿರತ್ನ ಹೇಳಿದರು.
‘ಕಾಂಗ್ರೆಸ್ನ 65 ಶಾಸಕರಿಗೆ ಕೆಲಸ ಇಲ್ಲ’ ಜೊತೆಗೆ, ಕಾಂಗ್ರೆಸ್ನ 65 ಶಾಸಕರಿಗೆ ಕೆಲಸ ಇಲ್ಲ. ಸಿದ್ದರಾಮಯ್ಯ ಜೊತೆ 64 ಶಾಸಕರು ಇದ್ದಾರೆ. ಡಿಕೆಶಿ ಜೊತೆ ಕುಣಿಗಲ್ ರಂಗನಾಥ್ ಮಾತ್ರ ಇದ್ದಾರೆ. ಹಾಗಾಗಿ, ಡಿಕೆಶಿ ಬಳಿ ಒಬ್ಬರೇ ಶಾಸಕ ಇರೋದು. ಉಳಿದವರೆಲ್ಲ ಸಿದ್ದರಾಮಯ್ಯ ಜೊತೆಗಿದ್ದಾರೆ ಎಂದು ಮುನಿರತ್ನ ಹೇಳಿದ್ದಾರೆ.
ಕಾಂಗ್ರೆಸ್ನ ಶಾಸಕರು ನಮಗೆ ಸಿದ್ದರಾಮಯ್ಯ ನಾಯಕತ್ವ ಬೇಕು ಅಂತಾರೆ. ಡಿಕೆಶಿ ನಾಯಕತ್ವ ಬೇಕು ಅಂತಾ ಕಾಂಗ್ರೆಸ್ನ ಒಬ್ಬರೂ ಹೇಳಲ್ಲ. ಇದು ಕಾಂಗ್ರೆಸ್ನಲ್ಲಿ ಡಿ.ಕೆ.ಶಿವಕುಮಾರ್ರ ಈಗಿನ ಪರಿಸ್ಥಿತಿ ಎಂದು ಮುನಿರತ್ನ ಕಾಲೆಳೆದಿದ್ದಾರೆ. ಕೈ ಶಾಸಕರಿಗೆ ಸಿದ್ದರಾಮಯ್ಯರೇ ಬೇಕು ಅನ್ನೋ ‘ಮುನಿ’ ಏಟಿಗೆ ಡಿಕೆಶಿ ತಿರುಗೇಟು!
Published On - 2:35 pm, Sun, 25 October 20