ಭಾರತಕ್ಕೆ ಕಾಲಿಡೋಕೆ ಸಿದ್ಧವಾಯ್ತು ಟೆಸ್ಲಾ ಕಾರು: ಇದರ ಬೆಲೆ ಎಷ್ಟು ಗೊತ್ತಾ?
ಇನ್ನು ಭಾರತದ ಮಾರುಕಟ್ಟೆಗೆ ಟೆಸ್ಲಾ ಮಾಡೆಲ್ 3 ಲಭ್ಯವಾಗುತ್ತಿದೆ. ಜನವರಿಯಲ್ಲಿ ಬುಕಿಂಗ್ ಆರಂಭಗೊಳ್ಳಲಿದ್ದು, ನಂತರದ ಮೂರು ತಿಂಗಳ ಒಳಗಾಗಿ ಕಾರು ಡೆಲಿವರಿ ಸಿಗುವ ಸಾಧ್ಯತೆ ಇದೆ.
ನಮ್ಮ ದೇಶದಲ್ಲಿ ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳು ಹೆಚ್ಚುತ್ತಿವೆ. ಇದೇ ಸಂದರ್ಭದಲ್ಲಿ ಎಲೆಕ್ಟ್ರಿಕ್ ಕಾರು ನಿರ್ಮಾಣ ಸಂಸ್ಥೆ ಟೆಸ್ಲಾ ಭಾರತಕ್ಕೆ ಕಾಲಿಡಲು ಸಿದ್ಧವಾಗಿದೆ. ಮುಂದಿನ ವರ್ಷದ ಆರಂಭದಿಂದ ಟೆಸ್ಲಾ ಬುಕಿಂಗ್ ಭಾರತದಲ್ಲಿ ಆರಂಭವಾಗಲಿದೆ. ಈ ಮೂಲಕ ಈ ಸಂಸ್ಥೆಯ ಕಾರು ಭಾರತದ ಮಾರುಕಟ್ಟೆಯಲ್ಲಿ ಯಾವಾಗ ಲಾಂಚ್ ಆಗಲಿದೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ.
ನಮ್ಮಲ್ಲಿ ಸಿಗುವ ಮಾಡೆಲ್ಗಳಾವವು? ಟೆಸ್ಲಾ ಸಂಸ್ಥೆ ಈ ಮೊದಲಿನಿಂದಲೂ ಭಾರತದ ಮಾರುಕಟ್ಟೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಬಂದಿದೆ. 2016ರರಲ್ಲೇ ಸಂಸ್ಥೆ ಪ್ರೀ ಬುಕಿಂಗ್ ಆರಂಭಿಸಿತ್ತು. ಈ ವೇಳೆ ಪೇಟಿಎಂ ಸ್ಥಾಪಕ ವಿಜಯ್ ಶೇಖರ್ ಶರ್ಮಾ, ವೂನಿಕ್ ಮುಖ್ಯಸ್ಥ ಸುಜಯತ್ ಅಲಿ, ಪಿನ್ಸ್ಟಾರ್ಮ್ ಮುಖ್ಯಸ್ಥ ಮಹೇಶ್ ಮೂರ್ತಿ ಟೆಸ್ಕಾ ಎಲೆಕ್ಟ್ರಿಕ್ ಕಾರನ್ನು ಬುಕ್ ಮಾಡಿದ್ದರು.
ಈಗ ದೊಡ್ಡ ಪ್ರಮಾಣದಲ್ಲಿ ಬುಕಿಂಗ್ ಆರಂಭಗೊಂಡಿದೆ. ಭಾರತದ ಮಾರುಕಟ್ಟೆಗೆ ಟೆಸ್ಲಾ ಮಾಡೆಲ್ 3 ಲಭ್ಯವಾಗುತ್ತಿದೆ. ಜನವರಿಯಲ್ಲಿ ಬುಕಿಂಗ್ ಆರಂಭಗೊಳ್ಳಲಿದ್ದು, ನಂತರದ ಮೂರು ತಿಂಗಳ ಒಳಗಾಗಿ ಕಾರು ಡೆಲಿವರಿ ಸಿಗುವ ಸಾಧ್ಯತೆ ಇದೆ.
ಭಾರತದಲ್ಲಿ ಟೆಸ್ಲಾ ಘಟಕ? ಭಾರತದ ಕಾರು ಮಾರುಕಟ್ಟೆ ದಿನೇ ದಿನೇ ದೊಡ್ಡದಾಗಿ ಬೆಳೆಯುತ್ತಿದೆ. ಜನರು ಎಲೆಕ್ಟ್ರಿಕ್ ಕಾರಿನತ್ತ ಒಲವು ತೋರುತ್ತಿದ್ದಾರೆ. ಈ ಕಾರಣಕ್ಕೆ ಟೆಸ್ಲಾ ಭಾರತದಲ್ಲಿ ಕಾರು ನಿರ್ಮಾಣ ಘಟಕ ಸ್ಥಾಪಿಸುವ ಆಲೋಚನೆ ಇಟ್ಟುಕೊಂಡಿದೆ. ಇದಕ್ಕೆ ಈಗಾಗಲೇ ನೀಲನಕ್ಷೆ ಸಿದ್ಧಗೊಂಡಿದ್ದು, ಮುಂದಿನ ವರ್ಷಗಳಲ್ಲಿ ಇದು ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ.
ಮಾಡೆಲ್ 3 ವಿಶೇಷತೆ ಏನು? ಮಾಡೆಲ್ 3 ಟೆಸ್ಲಾದ ಪ್ರಾಥಮಿಕ ಮಾದರಿಯಾಗಿದೆ. ಈ ಕಾರಿನ ಬ್ಯಾಟರಿ ಗಾತ್ರ 50 kWh ನಿಂದ 75 kWh ಇದೆ. ಈ ಕಾರು ಸದ್ಯ ಸ್ಟ್ಯಾಂಡರ್ಡ್ ರೇಂಜ್ (RWD), ಸ್ಟ್ಯಾಂಡರ್ಡ್ ರೇಂಜ್ ಪ್ಲಸ್ (RWD), ಲಾಂಗ್ ರೇಂಜ್ (AWD) ಮತ್ತು ಲಾಂಗ್ ರೇಂಜ್ ಪರ್ಫಾರ್ಮೆನ್ಸ್ (AWD) ವಿಧದಲ್ಲಿ ಲಭ್ಯವಿದೆ. ಒಮ್ಮೆ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದರೆ, 381-580 ಕಿ.ಮೀವರೆಗೆ ಚಲಿಸಬಹುದಾಗಿದೆ. ಈ ಲಕ್ಸುರಿ ಕಾರಿನ ಬೆಲೆ ಭಾರತದ ಮಾರುಕಟ್ಟೆಯಲ್ಲಿ 55 ಲಕ್ಷ ರೂಪಾಯಿ.
ಧರ್ಮಸ್ಥಳದ ದೇಸಿ ಕಾರ್ ಮುಂದೆ ಟೆಸ್ಲಾದ ಎಲೆಕ್ಟ್ರಿಕ್ ಕಾರೂ ಮಂಡಿಯೂರುವುದೇ! ಕಾಲೆಳೆದ ಆನಂದ್ ಮಹೀಂದ್ರಾ
Published On - 3:02 pm, Sun, 27 December 20