ಉಕ್ಕಿ ಹರಿಯುತ್ತಿರುವ ಪಾಪನಾಶಿನಿ ನದಿ, ಮಠದಲ್ಲಿದ್ದ 21 ಹಸುಗಳ ಸ್ಥಳಾಂತರ
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು ಪಾಪನಾಶಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಹೀಗಾಗಿ ಅದಮಾರು ಮಠದ ಜಮೀನಿನಲ್ಲಿದ್ದ 21 ಹಸುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಉಡುಪಿ ಜಿಲ್ಲೆಯ ಪಾಪನಾಶಿನಿ ನದಿ ಉಕ್ಕಿ ಹರಿಯುತ್ತಿದ್ದು, ಉಡುಪಿಯ ಉದ್ಯಾವರ ಗ್ರಾಮದ ವಿಭುದೇಶನಗರ ವ್ಯಾಪ್ತಿಯ ಅದಮಾರು ಮಠದ ಜಮೀನಿನಲ್ಲಿದ್ದ 21 ಹಸುಗಳನ್ನು ಮುಂಜಾಗೃತಾ ಕ್ರಮವಾಗಿ ಮಠದ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಟೆಂಪೊ ಮೂಲಕ ಉಡುಪಿಗೆ ಸ್ಥಳಾಂತರಿಸಲಾಗಿದೆ.

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು ಪಾಪನಾಶಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಹೀಗಾಗಿ ಅದಮಾರು ಮಠದ ಜಮೀನಿನಲ್ಲಿದ್ದ 21 ಹಸುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಉಡುಪಿ ಜಿಲ್ಲೆಯ ಪಾಪನಾಶಿನಿ ನದಿ ಉಕ್ಕಿ ಹರಿಯುತ್ತಿದ್ದು, ಉಡುಪಿಯ ಉದ್ಯಾವರ ಗ್ರಾಮದ ವಿಭುದೇಶನಗರ ವ್ಯಾಪ್ತಿಯ ಅದಮಾರು ಮಠದ ಜಮೀನಿನಲ್ಲಿದ್ದ 21 ಹಸುಗಳನ್ನು ಮುಂಜಾಗೃತಾ ಕ್ರಮವಾಗಿ ಮಠದ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಟೆಂಪೊ ಮೂಲಕ ಉಡುಪಿಗೆ ಸ್ಥಳಾಂತರಿಸಲಾಗಿದೆ.