UPSC 2021 Notifications: ಯುಪಿಎಸ್​ಸಿ ಐಇಎಸ್​/ಐಎಸ್​ಎಸ್ ಪರೀಕ್ಷೆ ಅಧಿಸೂಚನೆ ಬಿಡುಗಡೆ; ಅರ್ಜಿ ತುಂಬುವ ವಿಧಾನ ಹೀಗಿದೆ

|

Updated on: Apr 07, 2021 | 12:43 PM

ಈ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕೆಂದರೆ ನೀವು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ, ಅನ್ವಯಿಕ ಅರ್ಥಶಾಸ್ತ್ರ, ವ್ಯವಹಾರ ಅರ್ಥಶಾಸ್ತ್ರ, ಅರ್ಥಮಾಪನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

UPSC 2021 Notifications: ಯುಪಿಎಸ್​ಸಿ ಐಇಎಸ್​/ಐಎಸ್​ಎಸ್ ಪರೀಕ್ಷೆ ಅಧಿಸೂಚನೆ ಬಿಡುಗಡೆ; ಅರ್ಜಿ ತುಂಬುವ ವಿಧಾನ ಹೀಗಿದೆ
ಪ್ರಾತಿನಿಧಿಕ ಚಿತ್ರ
Follow us on

ಭಾರತೀಯ ಅರ್ಥಶಾಸ್ತ್ರ ಸೇವೆಗಳು ಮತ್ತು ಭಾರತೀಯ ಸಂಖ್ಯಾಶಾಸ್ತ್ರ ಸೇವೆಗಳ ಪರೀಕ್ಷೆಗಳ ಅಧಿಕೃತ ಅಧಿಸೂಚನೆಯನ್ನು ಕೇಂದ್ರ ಲೋಕಸೇವಾ ಆಯೋಗ (UPSC) ಇಂದು ಬಿಡುಗಡೆ ಮಾಡಿದೆ. UPSC IES/ISS -2021ರ ಪರೀಕ್ಷಾರ್ಥಿಗಳು upsc.gov.in and upsconline.nic.in. ಗೆ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಬಹುದು. UPSC IES/ISS ಪೂರ್ವಭಾವಿ ಪರೀಕ್ಷೆಗಳು ಜುಲೈ 16ರಿಂದ ಪ್ರಾರಂಭವಾಗಲಿದೆ. ಈ ಪರೀಕ್ಷೆಗಳನ್ನು ದೇಶದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಮೂರುದಿನಗಳ ಅವಧಿಗೆ ನಡೆಸಲಾಗುವುದು.

ಪರೀಕ್ಷೆ ಬರೆಯಲು ಅರ್ಹತೆ ಏನಿರಬೇಕು?
ಶೈಕ್ಷಣಿಕ ಅರ್ಹತೆ: ಈ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕೆಂದರೆ ನೀವು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ, ಅನ್ವಯಿಕ ಅರ್ಥಶಾಸ್ತ್ರ, ವ್ಯವಹಾರ ಅರ್ಥಶಾಸ್ತ್ರ, ಅರ್ಥಮಾಪನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿ ಇರುವವರೂ ಸಹ ಪರೀಕ್ಷೆ ಬರೆಯಬಹುದಾಗಿದೆ.

ವಯಸ್ಸಿನ ಮಿತಿ: ಪರೀಕ್ಷಾರ್ಥಿಗಳಿಗೆ 30 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಬಹುದು. ಆದರೆ ಮೀಸಲಾತಿ ವರ್ಗಕ್ಕೆ ಸರ್ಕಾರದ ನಿಯಮದ ಅನ್ವಯ ವಯಸ್ಸಿನ ಮಿತಿಯಿಂದ ರಿಯಾಯಿತಿ ಇರುತ್ತದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ

ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪರೀಕ್ಷಾರ್ಥಿಗಳು ಪಾಸ್​ಪೋರ್ಟ್ ಸೈಜ್ ಫೋಟೋಗಳ ಸ್ಕ್ಯಾನ್ ಕಾಪಿ, ಸಹಿ, ಐಡಿ ಪ್ರೂಫ್​ಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಅರ್ಜಿ ತುಂಬುವ ಪ್ರಕ್ರಿಯೆ ಇಲ್ಲಿದೆ ನೋಡಿ:

  • UPSCಯ upsc.gov.in ವೆಬ್​​ಸೈಟ್​ಗೆ ಭೇಟಿ ನೀಡಿ
  • ಅಲ್ಲಿ ಕಾಣುವ ‘What’s New’ ಎಂಬಲ್ಲಿಗೆ ಹೋಗಿ, ಕೆಳಗೆ ಕಾಣುವ ವೀವ್ ಆಲ್​ ಎಂಬಲ್ಲಿ ಕ್ಲಿಕ್ ಮಾಡಿ. ಅದರಲ್ಲಿ ‘IES/ISS exam 2021’ ಮೇಲೆ ಕ್ಲಿಕ್ ಮಾಡಬೇಕು.
  • ಆಗ ತೆರೆದುಕೊಳ್ಳುವ ಪೇಜ್​ನಲ್ಲಿ link for registration ಎಂಬಲ್ಲಿ ಕ್ಲಿಕ್ ಮಾಡಬೇಕು.
  • ಅಲ್ಲಿ ಕೊಟ್ಟಿರುವ ಸೂಚನೆಗಳನ್ನು ಸರಿಯಾಗಿ ಓದಿಕೊಂಡು ಮುಂದುವರಿಯಿರಿ
  • ನಂತರ ಅಲ್ಲಿ ಕೇಳಿರುವ ಮಾಹಿತಿಗಳನ್ನು ತುಂಬಿ, ನಿಮ್ಮ ಐಡಿ ಮತ್ತು ಪಾಸ್​ವರ್ಡ್​ಗಳನ್ನು ರಚಿಸಿಕೊಳ್ಳಿ
  • ಈ ಐಡಿ ಮತ್ತು ಪಾಸ್​ವರ್ಡ್​ಗಳನ್ನು ಬಳಸಿ ಲಾಗಿನ್ ಆಗಿ. ನಂತರ ಅರ್ಜಿ ತುಂಬುವ ಪ್ರಕ್ರಿಯೆ ನಡೆಸಿ.
  • ಅಗತ್ಯ ಮಾಹಿತಿಗಳನ್ನು ತುಂಬಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
  • UPSC IES/ISS 2021 ಅರ್ಜಿಯನ್ನು ತುಂಬಿದ ನಂತರ ಅದನ್ನು ಡೌನ್​ಲೋಡ್ ಮಾಡಿಕೊಳ್ಳಿ.

ಹೇಗಿರಲಿದೆ ಪರೀಕ್ಷೆ?
ಲಿಖಿತ ಪರೀಕ್ಷೆ 4 ಪೇಪರ್​ಗಳನ್ನು ಹೊಂದಿರುತ್ತದೆ. ಪ್ರತಿ ಪೇಪರ್​ನಲ್ಲಿ 200 ಅಂಕಗಳ ಪ್ರಶ್ನೆಗಳು ಇರುತ್ತವೆ. ಹಾಗೇ 100 ಅಂಕದ ಒಂದು ಜನರಲ್ ಸ್ಟಡೀಸ್ ಪೇಪರ್​ ಇರುತ್ತದೆ. ಹಾಗೇ ಮತ್ತೊಂದು 100 ಅಂಕದ ಇಂಗ್ಲಿಷ್​ ಪ್ರಶ್ನೆ ಪತ್ರಿಕೆ ಇರಲಿದೆ. ಈ ಜಿಎಸ್​ ಮತ್ತು ಇಂಗ್ಲಿಷ್ ಪ್ರಶ್ನೆ ಪತ್ರಿಕೆಗಳು ಐಇಎಸ್​ ಮತ್ತು ಐಎಸ್​ಎಸ್​ ಎರಡಕ್ಕೂ ಒಂದೇ ಇರುತ್ತದೆ. ಇನ್ನು ಈ ಪರೀಕ್ಷೆಗಳ ಬಗ್ಗೆ ಸಮಗ್ರ ಮಾಹಿತಿಗಳನ್ನು ಯುಪಿಎಸ್​ಸಿ ವೆಬ್​​ಸೈಟ್​ನಲ್ಲಿ ನೀಡಲಾಗಿದ್ದು, ಆಕಾಂಕ್ಷಿಗಳು ಒಂದು ಸಲ ಚೆಕ್ ಮಾಡಿಕೊಳ್ಳಿ.

ಇದನ್ನೂ ಓದಿ: ಮುಖ ದೃಢೀಕರಣದ ಮೂಲಕವೂ ಈಗ ಆಧಾರ್​ ಕಾರ್ಡ್​ ಡೌನ್​ಲೋಡ್ ಸಾಧ್ಯ; ಯುಐಡಿಎಐ ವೆಬ್​ಸೈಟ್​ಗೆ ಹೋಗಿ ಈ ಕ್ರಮಗಳನ್ನು ಅನುಸರಿಸಿ

 Paul Ritter: ಹ್ಯಾರಿ ಪಾಟರ್​ ಖ್ಯಾತಿಯ ನಟ ಪೌಲ್​ ರಿಟರ್ ಬ್ರೇನ್​ ಟ್ಯೂಮರ್​ನಿಂದ ನಿಧನ!

ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಕಳಪೆ ಆಹಾರ: ಬಾಣಸಿಗನಿಗೆ ಸಚಿವ ಬಚ್ಚು ಕಡು ಕಪಾಳಮೋಕ್ಷ

Published On - 12:39 pm, Wed, 7 April 21