ಬೆಂಗಳೂರಲ್ಲೊಂದು ವಿಶೇಷ ಹೋಟೆಲ್! ಇಲ್ಲಿ ನೀವು ಕೈಯಲ್ಲೇ ತಿಂಡಿ ತಿನ್ಬೇಕು, ಸ್ಪೂನ್, ಫೋರ್ಕ್ ಕೊಡಿ ಎಂದು ಕೇಳಂಗಿಲ್ಲ
ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟಿಗೆ ಊಟ ಮಾಡಲು ಅಥವಾ ತಿಂಡಿ ತಿನ್ನಲು ಹೋದಾಗ ಆಹಾರ ಸರ್ವ್ ಮಾಡುವ ಮೊದಲು ಪ್ಲೇಟ್ ಜೊತೆಗೆ ಫೋರ್ಕ್ ಮತ್ತು ಚಮಚವನ್ನು ಸಹ ತಂದಿಡುತ್ತಾರೆ. ಇನ್ನೂ ಅನೇಕರು ಈ ಚಮಚ, ಫೋರ್ಕ್ ಬಳಸಿಯೇ ತಿಂಡಿ ತಿನ್ನುತ್ತಾರೆ. ಆದ್ರೆ ಇಲ್ಲೊಂದು ಹೋಟೆಲ್ ಇದೆ. ಈ ಹೋಟೆಲಿನ ವಿಶೇಷ ಏನಪ್ಪಾ ಅಂದ್ರೆ, ನಿಮಗೆ ತಿಂಡಿ ತಿನ್ನಲು ಯಾವುದೇ ಚಮಚವನ್ನು ನೀಡಲ್ಲ, ಬದಲಿಗೆ ಇಲ್ಲಿ ನೀವು ಕೈಯಲ್ಲಿಯೇ ತಿನ್ನಬೇಕು. ಬನ್ನಿ ಈ ವಿಶೇಷ ಹೋಟೇಲ್ ಎಲ್ಲಿದೆ ಎಂಬುದನ್ನು ನೋಡೋಣ.
ನಾವು ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟಿಗೆ ಹೋದ್ರೆ, ಊಟ ಮತ್ತು ತಿಂಡಿಗಳನ್ನು ಸರ್ವ್ ಮಾಡುವಾಗ, ಊಟ ತಿನ್ನಲು ಸ್ಪೂನ್ ಮತ್ತು ಫೋರ್ಕ್ ನೀಡುತ್ತಾರೆ. ಇನ್ನೂ ಅನೇಕರು ಹೋಟೆಲ್ನಲ್ಲಿ ಬರೀ ಕೈಯಲ್ಲಿ ಊಟ ಮಾಡಿದ್ರೆ, ನೋಡಿದವರೆಲ್ಲಾ ಕೀಳಾಗಿ ಕಾಣಬಹುದು ಎಂಬ ಮುಟ್ಟಾಳತನದಿಂದ ಸ್ಟೈಲ್ ಆಗಿ ಸ್ಪೂನ್ ಬಳಸಿ ಆಹಾರವನ್ನು ತಿನ್ನುತ್ತಾರೆ. ನೀವು ಕೂಡಾ ತಿಂಡಿ, ಊಟ ತಿನ್ನಲು ಸ್ಪೂನ್ ಉಪಯೋಗಿಸ್ತೀರಾ? ಹಾಗಿದ್ರೆ ಈ ಹೋಟೆಲ್ಗೆ ನೀವೇನಾದ್ರೂ ಹೋದ್ರೆ ತಿಂಡಿ ತಿನ್ನಲು ಸ್ಪೂನ್ ಕೊಡಿ ಎಂದು ಕೇಳೋಕೆ ಹೋಗ್ಬೇಡಿ. ಯಾಕಂದ್ರೆ, ಈ ಹೋಟೆಲಿನಲ್ಲಿ ಒಂದು ಸಂಪ್ರದಾಯವಿದೆ. ಇಲ್ಲಿ ನಿಮಗೆ ತಿಂಡಿ ತಿನ್ನಲು ಯಾವುದೇ ಚಮಚ ನೀಡಲ್ಲ, ನಮ್ಮ ಭಾರತೀಯ ಸಂಸ್ಕೃತಿಯಂತೇ ಕೈಯಲ್ಲಿಯೇ ಆಹಾರದ ರುಚಿಯನ್ನು ಸವಿಯಬೇಕು. ಬನ್ನಿ ಹಾಗಿದ್ರೆ ಈ ಹೋಟೆಲ್ ಎಲ್ಲಿದೆ ಎಂಬುದನ್ನು ನೋಡೋಣ.
ಈ ಹೋಟೆಲಿನ ಹೆಸರು ʼಚಿಕ್ಕಣ ಟಿಫಿನ್ ರೂಮ್ʼ. ಈ ವಿಶೇಷ ಹೋಟೆಲ್ ಇರೋದು ನಮ್ಮ ಬೆಂಗಳೂರಿನ ಚಿಕ್ಕಪೇಟೆಯಲ್ಲಿ. ಇಲ್ಲಿಗೆ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳ ವರೆಗೆ ಯಾರೇ ಬಂದ್ರೂ ಕೈಯಲ್ಲಿಯೇ, ತಿಂಡಿ ತಿನ್ನಬೇಕೇ ವಿನಃ ಚಮಚವನ್ನು ಬಳಸಂಗಿಲ್ಲ. 1965 ರಲ್ಲಿ ಆರಂಭವಾದ ಈ ಒಂದು ಅದ್ಭುತ ಸಂಪ್ರದಾಯವನ್ನು ಇಂದಿಗೂ ಪಾಲಿಸುತ್ತಾ ಬರಲಾಗಿದೆ. ಎಂತಹ ಅದ್ಭುತ ಕಾನ್ಸೆಪ್ಟ್ ಇದಲ್ವಾ.
ವೈರಲ್ ಪೋಸ್ಟ್ ಇಲ್ಲಿದೆ:
ಚಿಕ್ಕಣ್ಣ ಟಿಪಿನ್ ರೂಮ್ (CTR)- ಚಿಕ್ಕಪೇಟೆ ಬೆಂಗಳೂರು.
ರುಚಿ & ಸ್ವಾದಕ್ಕೆ ಹೆಸರುವಾಸಿ ಜೊತೆಗೆ ಮತ್ತೊಂದು ವಿಶೇಷ ವಿಶೇಷವೆಂದರೆ! “ಯಾವುದೇ ತಿಂಡಿ ತಿನ್ನಲು ಚಮಚ ಕೊಡುವುದಿಲ್ಲ”. 1965ರಿಂದಲೂ ಈ ಸಂಪ್ರದಾಯವಿದೆ.
ಸೆಲೆಬ್ರಿಟಿ ಬಂದ್ರೂ ಕೂಡ ಕೈಯಲ್ಲೇ ತಿನ್ನಬೇಕು. pic.twitter.com/aLkMIz3oTP
— ರೇಖಾ ತಿಪಟೂರು/ Rekha Tipaturu (@RekhaBasavaraju) December 15, 2023
ಈ ವಿಶೇಷ ಹೋಟೆಲ್ ಕುರಿತ ಪೋಸ್ಟ್ ಅನ್ನು ರೇಖಾ ತಿಪಟೂರು ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, “ಚಿಕ್ಕಣ್ಣ ಟಿಫಿನ್ ರೂಮ್- ರುಚಿ ಮತ್ತು ಸ್ವಾದಕ್ಕೆ ಹೆಸರುವಾಸಿಯಾಗಿರುವ ಈ ಹೋಟೇಲಿನ ಮತ್ತೊಂದು ವಿಶೇಷವೆಂದರೆ! ಇಲ್ಲಿ ತಿಂಡಿ ತಿನ್ನಲು ಯಾವುದೇ ಚಮಚ ಕೊಡುವುದಿಲ್ಲ. 1965 ರಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಸೆಲೆಬ್ರಿಟಿಗಳು ಬಂದ್ರೂ ಇಲ್ಲಿ ಕೈಯಲ್ಲೇ ತಿಂಡಿ ತಿನ್ನಬೇಕು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬ್ಯಾಕ್ ಬೆಂಚರ್ಸ್ ಅಂದ್ರೆ ಸುಮ್ನೇನಾ.. ನಮ್ಗೂ ಸಖತ್ ಡ್ಯಾನ್ಸ್ ಬರುತ್ತೇ
ಅನೇಕರು ಈ ಪೋಸ್ಟ್ ಅನ್ನು ಮೆಚ್ಚಿ ಲೈಕ್ಸ್ಗಳನ್ನು ನೀಡಿದ್ದಾರೆ. ಒಬ್ಬ ಬಳಕೆದಾರರು “ಇಂತಹ ಅದ್ಭುತ ಮಾಹಿತಿ ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು ಮೇಡಂ” ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು “ಈ ಹೋಟೆಲಲ್ಲಿ ಸಿಗುವ ಚೌ-ಚೌ ಬಾತ್ ಬಹಳ ರುಚಿಕರವಾಗಿರುತ್ತೆ” ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು “ಒಳ್ಳೆಯ ಸಂಪ್ರದಾಯ, ಇಲ್ಲ ಅಂದಿದ್ರೆ ರೀಲ್ಸ್ ಮಾಡೋ ಫುಡ್ ಬ್ಲಾಗರ್ಸ್ಗಳೆಲ್ಲಾ ಅಲ್ಲಿ ಪಲಾವ್ ತಿನ್ನೋಕೆ ಚಾಪ್ ಸ್ಟಿಕ್ ಕೇಳಿರೋರು” ಎಂಬ ಕಮೆಂಟ್ ಅನ್ನು ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: