Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬ್ಯಾಕ್ ಬೆಂಚರ್ಸ್ ಅಂದ್ರೆ ಸುಮ್ನೇನಾ..  ನಮ್ಗೂ ಸಖತ್ ಡ್ಯಾನ್ಸ್ ಬರುತ್ತೇ

ಕಾಲೇಜ್ ಡೇ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ತಂಡವೊಂದು ನೃತ್ಯ ಪ್ರದರ್ಶನ ಮಾಡುತ್ತಿದ್ದಂತಹ ವೇಳೆಯಲ್ಲಿ ಲಾಸ್ಟ್ ಬೆಂಚ್ ವಿದ್ಯಾರ್ಥಿಗಳ ಗುಂಪೊಂದು ನಾವ್ಯಾರಿಗೂ ಕಮ್ಮಿಯಿಲ್ಲ ಎಂದು ಹಿಂದುಗಡೆ ನಿಂತು ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ ಇದೀಗ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಂತಹ ತರ್ಲೆ ತಮಾಷೆಯನ್ನು ಕೇವಲ ಬ್ಯಾಕ್ ಬೆಂಚರ್ಸ್ಗಳಿಂದ ಮಾತ್ರ ಮಾಡಲು ಸಾಧ್ಯ ಎಂದು ನೆಟ್ಟಿಗರು ಹೇಳಿದ್ದಾರೆ.

Viral Video: ಬ್ಯಾಕ್ ಬೆಂಚರ್ಸ್ ಅಂದ್ರೆ ಸುಮ್ನೇನಾ..  ನಮ್ಗೂ ಸಖತ್ ಡ್ಯಾನ್ಸ್ ಬರುತ್ತೇ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 16, 2023 | 12:27 PM

ಬ್ಯಾಕ್  ಬೆಂಚ್ ಸ್ಟೂಡೆಂಟ್ಸ್​​​ಗಳು ಯಾವಾಗಲೂ ತರ್ಲೆ ತುಂಟಾಟ ಮಾಡುತ್ತಾ,  ಇಡೀ ಕ್ಲಾಸ್ ರೂಮನ್ನು ನಗಿಸುವುದರ ಜೊತೆಗೆ, ಶಿಕ್ಷಕರ ಕೈಯಿಂದ ಪ್ರತಿನಿತ್ಯ ಬೈಗುಳ ತಿನ್ನುತ್ತಿರುತ್ತಾರೆ.  ಇಂತಹ ಲಾಸ್ಟ್ ಬೇಂಚ್ ಸ್ಟೂಡೆಂಟ್ಸ್​​ಗಳು  ಕುರಿತ ಮೀಮ್,  ಟ್ರೋಲ್​​ಗಳು  ಪ್ರತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ.  ಈಗಂತೂ ಶಾಲಾ ಕಾಲೇಜು ವಿದ್ಯಾರ್ಥಿಗಳೆಲ್ಲರೂ ನಾವು ಬ್ಯಾಕ್ ಬೆಂಚ್ ಸ್ಟೂಡೆಂಟ್ಸ್ ಎನ್ನುತ್ತಾ ಬಹಳ ಹೆಮ್ಮೆ ಡಾನ್ಗಳ ರೀತಿಯಲ್ಲಿ ತಿರುಗಾಡುತ್ತಿರುತ್ತಾರೆ. ಅದ್ರಲ್ಲೂ ಕಾಲೇಜಿನಲ್ಲಿ ಯಾವುದಾದರೂ ಸಾಂಸ್ಕೃತಿಕ  ಕಾರ್ಯಕ್ರಮಗಳು ನಡೆದ್ರೆ, ಸ್ಟೇಜ್ ಮೇಲೆ ನೃತ್ಯ ಅಥವಾ ನಾಟಕ ಪ್ರದರ್ಶನವನ್ನು  ಮಾಡಲು ಒಲ್ಲೆ ಎನ್ನುವ ಲಾಸ್ಟ್ ಬೆಂಚ್ ಸ್ಟೂಡೆಂಟ್ಗಳು, ಸ್ಟೇಜ್ ಮೇಲೆ  ಇತರೆ ವಿದ್ಯಾರ್ಥಿಗಳು ಡಾನ್ಸ್ ಮಾಡುತ್ತಿರುವಾಗ,  ಹಿಂದೆಯಿಂದ  ಇವರುಗಳು ಜೋರಾಗಿ ಕುರಿಚುತ್ತಾ, ವೇದಿಕೆಯ ಮೇಲೆ ಡಾನ್ಸ್ ಮಾಡುವವರನ್ನು ಇಮಿಟೇಟ್ ಮಾಡುತ್ತಾ ಡಾನ್ಸ್ ಮಾಡುತ್ತಾ, ತರ್ಲೆ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇಂತಹ ಹಲವು ದೃಶ್ಯಗಳನ್ನು ನಾವು ನಮ್ಮ ಕಾಲೇಜು ಜೀವನದಲ್ಲಿ ಹಾಗೂ ಆಗಾಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ನೋಡುತ್ತಿರುತ್ತೇವೆ.  ಅದೇ ರೀತಿಯಲ್ಲಿ ಇಲ್ಲೊಂದು  ಬ್ಯಾಕ್ ಬೆಂಚರ್ಸ್ ತಂಡವೊಂದು, ವೇದಿಕೆಯ ಮೇಲೆ ವಿದ್ಯಾರ್ಥಿನಿಯರು ನೃತ್ಯ ಮಾಡುತ್ತಿರುವ ವೇಳೆ, ಈ ಯುವಕರು  ಸಹ ಹಿಂದೆ ನಿಂತು  ತರ್ಲೆ ತಮಾಷೆ ಮಾಡುತ್ತಾ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು,  ಈ ಬ್ಯಾಕ್ ಬೇಂಚರ್ಸ್ ತರ್ಲೆಗಳನ್ನು ನೋಡಿ ನಗು ತಡೆಯಲಾಗಲಿಲ್ಲ ಎಂದು ಹಲವರು ಹೇಳಿದ್ದಾರೆ.

@alimpashastories ಎಂಬ ಇನ್ಸ್ಟಾಗ್ರಾಮ್ ಪೇಜ್​​ಗಳು ಈ ವೈರಲ್ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ  ವಿದ್ಯಾರ್ಥಿನಿಯರು ವೇದಿಕೆಯ ಮೇಲೆ  ನೃತ್ಯ ಮಾಡುತ್ತಿದ್ದಾಗ ಬ್ಯಾಕ್ ಬೆಂಚರ್ಸ್  ಗ್ಯಾಂಗ್ ಹಿಂದುಗಡೆ ನಿಂತುಕೊಂಡು ತಾವು ಕೂಡಾ ಡಾನ್ಸ್  ಸ್ಟೆಪ್ಸ್ ಹಾಕುವುನ್ನು ಕಾಣಬಹುದು.

ವೈರಲ್​​ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:

ವಿಡಿಯೋದಲ್ಲಿ ಯಾವುದೋ ಒಂದು ಕಾಲೇಜಿನ ಕಾಲೇಜ್ ಡೇ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ತಂಡವೊಂದು ಸ್ಟೇಜ್ ಮೇಲೆ ಮುಕುಂದ ಮುರಾರಿ ಚಿತ್ರದ ಗೋಪಾಲ ಬಾ. ಹಾಡಿಗೆ  ಬಹಳ ಸೊಗಸಾಗಿ ನೃತ್ಯ ನೃತ್ಯ ಮಾಡುತ್ತಿರುತ್ತಾರೆ, ಒಂದಷ್ಟು ವೀಕ್ಷಕರು ವಿದ್ಯಾರ್ಥಿನಿಯರ ಅದ್ಭುತವಾದ ಡಾನ್ಸ್ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರೆ, ಅಲ್ಲೇ ಹಿಂದುಗಡೆ ನಿಂತಿದ್ದ ಯುವಕರು ಈ ವಿದ್ಯಾರ್ಥಿನಿಯರನ್ನೇ ಇಮಿಟೆಟ್ ಮಾಡುತ್ತಾ, ತಾವು ಕೂಡಾ ಕುಣಿಯುತ್ತಾ ತರ್ಲೆ ಮಾಡುತ್ತಿರುವಂತಹ ದೃಶ್ಯವನ್ನು  ಕಾಣಬಹುದು.

ಇದನ್ನೂ ಓದಿ:  ಭಾರತ ರತ್ನ ನಮ್ಮ ಮೋದಿ ಸಾಹೇಬ್ರು, ಹಾಡಿ ಹೊಗಳಿದ ಮೈಸೂರಿನ ತಾತಪ್ಪ 

ಡಿಸೆಂಬರ್ 04 ರಂದು ಹಂಚಿಕೊಳ್ಳಲಾದ ಈ ವಿಡಿಯೋ 382K  ವೀಕ್ಷಣೆಗಳನ್ನು ಹಾಗೂ 30.1K ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಅನೇಕರು ಕಮೆಂಟ್​​​ ಮಾಡಿದ್ದಾರೆ. ಒಬ್ಬ ಬಳಕೆದಾರರು ʼಇಂತಹ ಸಾಹಸಗಳನ್ನು ಕೇವಲ  ಬ್ಯಾಕ್ಬೆಂಚರ್ಸ್ಗಳಿಂದ ಮಾತ್ರ ಮಾಡಲು ಸಾಧ್ಯʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ಯುವಕರ ತರ್ಲೆಯನ್ನು ಕಂಡು ನಕ್ಕು ನಕ್ಕು ಸುಸ್ತಾಗಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ: