AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕರ್ಮ ಯಾರನ್ನೂ ಬಿಡಲ್ಲ: ಲಿಫ್ಟ್ ಒಳಗಡೆ ಮೂತ್ರ ವಿಸರ್ಜನೆ ಮಾಡಿದ ಬಾಲಕನ ಗತಿ ಏನಾಯ್ತು ನೋಡಿ?

ಈ ಕೆಲವು ಪುಂಡ ಹುಡುಗ್ರು ತರ್ಲೆ ಕಿತಾಪತಿ ಮಾಡೋದ್ರಲ್ಲಿ ಎತ್ತಿದ್ದ ಕೈ. ಯಾರಿಗಾದ್ರೂ, ಏನಾದ್ರೂ ಒಂದು ತೊಂದರೆ ಕೊಡುತ್ತಲೇ ಇರುತ್ತಾರೆ. ಅದೇ ರೀತಿ ಇಲ್ಲೊಬ್ಬ ಪುಂಡ ಬಾಲಕ ಬೇಕು ಬೇಕಂತಲೇ ಲಿಫ್ಟ್ ಒಳಗಡೆ ಮೂತ್ರವಿಸರ್ಜನೆ ಮಾಡಿ, ಕೊನೆಗೆ ಪಜೀತಿಗೆ ಸಿಳುಕಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಕರ್ಮ ಯಾರನ್ನು ಸುಮ್ಮನ್ನೆ ಬಿಡೊಲ್ಲ ಎಂಬುದಕ್ಕೆ ಇದೇ ಉತ್ತಮ ಉದಾಹರಣೆ ಅಂತ ನೆಟ್ಟಿಗರು ಹೇಳಿದ್ದಾರೆ.

Viral Video: ಕರ್ಮ ಯಾರನ್ನೂ ಬಿಡಲ್ಲ: ಲಿಫ್ಟ್ ಒಳಗಡೆ ಮೂತ್ರ ವಿಸರ್ಜನೆ ಮಾಡಿದ ಬಾಲಕನ ಗತಿ ಏನಾಯ್ತು ನೋಡಿ?
ವೈರಲ್​​ ವಿಡಿಯೋ
TV9 Web
| Edited By: |

Updated on: Dec 16, 2023 | 5:52 PM

Share

ಕೆಲವೊಬ್ರು ಪುಂಡ ಹುಡುಗ್ರು ಇರ್ತಾರೆ. ಅವರಿಗೆ ಪ್ರತಿನಿತ್ಯ ಏನಾದ್ರೂ  ಒಂದು ತರ್ಲೆ, ಪುಂಡಾಟಿಕೆಯ ಕೆಲಸ ಮಾಡದಿದ್ದರೆ, ತಿಂದ ಅನ್ನ ಅರಗಲ್ಲ. ಬೇಕು ಬೇಕಂತಲೇ ಪಕ್ಕದ ಮನೆಯವರ ಕಿಟಕಿ ಬಾಗಿಲಿಗೆ ಕಲ್ಲು ಎಸೆಯುವುವುದು, ಶಾಲೆಯಲ್ಲಿ ಸಹಪಾಟಿಗಳ ಜೊತೆ ಜಗಳವಾಡುವುದು, ಸಾರ್ವಜನಿಕ ಮತ್ತು ಇತರರ ವಸ್ತುಗಳನ್ನು ಹಾಳು ಮಾಡುವುದು ಈ ರೀತಿಯ ಪುಂಡಾಟಿಕೆಗಳನ್ನೆಲ್ಲಾ ಮಾಡುತ್ತಿರುತ್ತಾರೆ. ಇಂತಹ ಪುಂಡಾಟಿಕೆಯ ಮಕ್ಕಳನ್ನು ನಾವೆಲ್ಲರೂ ಸಹ ನಮ್ಮ ಜೀವನದಲ್ಲಿ ನೋಡಿರುತ್ತೇವೆ. ಅದೇ ರೀತಿ ಇಲ್ಲೊಂದು ವಿಡಿಯೋ ಭಾರೀ ವೈರಲ್​​ ಆಗಿದೆ, ಬಾಲಕನೊಬ್ಬ ಪುಂಡಾಟ ಮೆರೆದು ಕೊನೆಗೆ ಆತನೇ ಪಜೀತಿಗೆ ಸಿಲುಕಿದ್ದಾನೆ. ಹೌದು ಈ ಬಾಲಕ ಬೇಕು ಬೇಕಂತಲೇ ಲಿಫ್ಟ್ ಒಳಗಡೆಯೇ ಮೂತ್ರವಿಸರ್ಜನೆ ಮಾಡಿ ದುರ್ವರ್ತನೆ ತೋರಿದ್ದಾನೆ, ಈತನ ತಪ್ಪಿಗೆ ತಕ್ಕ ಶಿಕ್ಷೆ ಎಂಬಂತೆ ಕೊನೆಗೆ ಲಿಫ್ಟ್ ನಿಂತು ಹೋಗಿ ಹುಡುಗ ಪಜೀತಿಗೆ ಸಿಳುಕಿಹಾಕಿಕೊಂಡಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಕರ್ಮ ಯಾರನ್ನೂ ಸುಮ್ಮನೆ ಬಿಡೋದಿಲ್ಲ ಅನ್ನೊದ್ದಕ್ಕೆ ಇದೇ ಉತ್ತಮ ಉದಾಹರಣೆ ನೋಡಿ ಅಂತ ನೆಟ್ಟಿಗರು ಹೇಳಿದ್ದಾರೆ.

@NoContextHumans ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ, 22 ಸೆಕೆಂಡುಗಳ ಈ ವಿಡಿಯೋದಲ್ಲಿ ಲಿಫ್ಟ್ ಒಳಗಡೆ ನಿಂತಿದ್ದ ಬಾಲಕನೊಬ್ಬ ಇದ್ದಕ್ಕಿದ್ದಂತೆ ಪ್ಯಾಂಟ್ ಜಿಪ್ ಓಪನ್ ಮಾಡಿ ಇಲೆವೇಟರ್ ಕಂಟ್ರೋಲ್ ಪ್ಯಾನಲ್ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ, ಕೊನೆಯಲ್ಲಿ ಈತನ ದುರ್ವರ್ತನೆಗೆ ತಕ್ಕ ಪಾಠ ಎಂಬಂತೆ ಲಿಫ್ಟ್ ಒಳಗೆ ಲೈಟ್ಸ್ ಆನ್ ಆಫ್ ಆಗಿ ಲಿಫ್ಟ್ ನಿಂತುಹೋಗುವ ದೃಶ್ಯವಾವಳಿಯನ್ನು ಕಾಣಬಹುದು.

ಇದನ್ನೂ ಓದಿ: ಬ್ಯಾಕ್ ಬೆಂಚರ್ಸ್ ಅಂದ್ರೆ ಸುಮ್ನೇನಾ..  ನಮ್ಗೂ ಸಖತ್ ಡ್ಯಾನ್ಸ್ ಬರುತ್ತೇ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಡಿಸೆಂಬರ್ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6.2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ ಗಳನ್ನು ಸಹ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ಕರ್ಮ ಎಂದರೆ ಇದೇ ನೋಡಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಕರ್ಮ ಈಸ್ ರಿಯಲ್ʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಆತನನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

Follow Us
TV9 Web
TV9 Web

TV9 Kannada

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ