ದೇವ ಗುರು ಬೃಹಸ್ಪತಿಯ ಆಶೀರ್ವಾದದಿಂದ ಶಿಕ್ಷಣ ಕ್ಷೇತ್ರದಲ್ಲಿ ಈ ಎರಡು ರಾಶಿಯ ಜನ ರಾಶಿರಾಶಿ ಹೆಸರು, ಸಂಪತ್ತು ಗಳಿಸುತ್ತಾರೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿ ದೇವರು ಬೃಹಸ್ಪತಿಯಾಗಿದ್ದಾರೆ. ಹಾಗಾಗಿಯೇ ಈ ರಾಶಿಯ ಜನರ ಮೇಲೆ ಬೃಹಸ್ಪತಿಯ ಆಶೀರ್ವಾದ ಸದಾ ಇರುತ್ತದೆ. ಬೃಹಸ್ಪತಿಯನ್ನು ದೇವ ಗುರು ಎಂದು ಕರೆಯಲಾಗುತ್ತದೆ. ಹಾಗಾಗಿ ಈ ದೇವರ ಪ್ರಭಾವ ಹೊಂದಿರುವ ಧನು ರಾಶಿ ಮತ್ತು ಮೀನ ರಾಶಿಯ ಜನ ಕುಶಾಗ್ರಮತಿಗಳಾಗಿರುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ರಾಶಿಗೂ ಒಬ್ಬೊಬ್ಬ ಸ್ವಾಮಿ ಗ್ರಹ ಇರುತ್ತದೆ. ಆ ಗ್ರಹದ ಪ್ರಭಾವವು ನಿರ್ದಿಷ್ಟವಾಗಿ ಆಯಾ ರಾಶಿಯ ಜನರ ಮೇಲೆ ಇರುತ್ತದೆ. 12 ರಾಶಿಗಳ ಪೈಕಿ ಎರಡು ರಾಶಿಗಳ ಮೇಲೆ ದೇವ ಗುರು ಬೃಹಸ್ಪತಿಯ ನೇರ ಆಶೀರ್ವಾದ ಇರುತ್ತದೆ. ಜ್ಯೋತಿಷ್ಯದ ಪ್ರಕಾರ ಪ್ರತಿ ವ್ಯಕ್ತಿಯ ಸಂಬಂಧವು 12 ರಾಶಿಗಳಲ್ಲಿ ಯಾವುದಾದರೂ ಒಂದು ರಾಶಿಯ ಜೊತೆಗೆ ಮಿಳಿತವಾಗಿರುತ್ತದೆ. ಆಯಾ ರಾಶಿಗೆ ಒಬ್ಬ ಅಧಿ ದೇವರು ಇರುತ್ತಾರೆ. ಆ ಗ್ರಹದ ಪ್ರಭಾವ ಆ ರಾಶಿಯ ಜನರೊಂದಿಗೆ ಸಂಬಂಧ ಹೊಂದಿರುತ್ತದೆ. ಹೀಗಾಗಿಯೇ ಯಾವುದೇ ವ್ಯಕ್ತಿ ಜನ್ಮತಹ ಅನೇಕ ಗುಣಾವಗುಣಗಳನ್ನು ಹೊಂದಿರುತ್ತಾರೆ. ಅವು ಜೀವನಪರ್ಯಂತ ಆ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತಾ ಇರುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿ ದೇವರು ಬೃಹಸ್ಪತಿಯಾಗಿದ್ದಾರೆ. ಹಾಗಾಗಿಯೇ ಈ ರಾಶಿಯ ಜನರ ಮೇಲೆ ಬೃಹಸ್ಪತಿಯ ಆಶೀರ್ವಾದ ಸದಾ ಇರುತ್ತದೆ. ಬೃಹಸ್ಪತಿಯನ್ನು ದೇವ ಗುರು ಎಂದು ಕರೆಯಲಾಗುತ್ತದೆ. ಹಾಗಾಗಿ ಈ ದೇವರ ಪ್ರಭಾವ ಹೊಂದಿರುವ ಧನು ರಾಶಿ ಮತ್ತು ಮೀನ ರಾಶಿಯ ಜನ ಕುಶಾಗ್ರಮತಿಗಳಾಗಿರುತ್ತಾರೆ. ಹಾಗಾಗಿಯೇ ಇಂತಹವರು ವಿದ್ಯಾ ಕ್ಷೇತ್ರದಲ್ಲಿ ಅಪಾರವಾಗಿರುವುದನ್ನೆ ಸಾಧಿಸುತ್ತಾರೆ. ಹಾಗಾದರೆ ಈ ಎರಡು ರಾಶಿಯ ಜನರ ಬಗ್ಗೆ ತಿಳಿಯೋಣ ಬನ್ನೀ…
ಧನು ರಾಶಿಯ ಜನ (Sagittarius):
ಧನಸ್ಸು ರಾಶಿಯ ಜನ ಧಾರ್ಮಿಕವಾಗಿಯೂ ಮತ್ತು ಶಾಂತ ಸ್ವಭಾವದವರೂ ಆಗಿರುತ್ತಾರೆ. ಇಂತಹ ವ್ಯಕ್ತಿಗಳು ಸದಾ ಏನಾದರೊಂದು ಕಲಿಕೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಿರುತ್ತಾರೆ, ಉತ್ಸಾಹ ತೋರಿಸುತ್ತಾರೆ. ಇಂತಹವರು ಯಾವುದೇ ವಿಷಯವನ್ನು ಅಧ್ಯಯನ ಮಾಡಲು ಕುಳಿತರೆ ಇವರ ತಲೆಯಲ್ಲಿ ಅದೇ ವಿಷಯ ಲಂಗರು ಹಾಕುತ್ತಾ ಕುಳಿತು ಬಿಡುತ್ತೆ. ಅವುಗಳಿಗೆ ತಕ್ಕ ಉತ್ತರ ಕಂಡುಕೊಳ್ಳಲು ಹಾತೊರೆಯುತ್ತಾರೆ. ಇವರು ತಮ್ಮನ್ನು ಕಾಡುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಪಡೆಯುವವರೆಗೂ ಚಡಪಡಿಸುತ್ತಿರುತ್ತಾರೆ.
ಸ್ವಭಾವತಃ ಇಂತಹವರು ಧೈರ್ಯಶಾಲಿಗಳಾಗಿರುತ್ತಾರೆ. ಗೌರವಯುತವಾಗಿಯೂ ಇರುತ್ತಾರೆ. ಜ್ಞಾನ ಸಂಪತ್ತು ಅರ್ಜನೆ ಮಾಡಿಕೊಳ್ಲುವುದರಲ್ಲಿ ಕುಶಾಗ್ರಮತಿಗಳಾಗಿರುತ್ತಾರೆ. ಮುಂದೆ ಸಾಕಷ್ಟು ಹೆಸರು ಸಹ ಗಳಿಸುತ್ತಾರೆ. ಮತ್ತು ಈ ರಾಶಿಯವರಿಗೆ ಇಂತಹುದೆ ಜನರು ಇಷ್ಟವಾಗುತ್ತಾರೆ. ಮೋಸಗಾರರನ್ನು ಕಂಡರೆ ಇವರಿಗೆ ಆಗಿಬರುವುದಿಲ್ಲ. ಇವರು ಒಮ್ಮೆ ಏನಾದರೂ ಒಂದು ಮಾತು ಕೊಟ್ಟರೆ ಅದನ್ನು ಪೂರೈಸಿಯೇ ತೀರುತ್ತಾರೆ. ಜೀವನವನ್ನು ಸಮಾನಸ್ಥಿತಿಯಲ್ಲಿ, ಸಮಚಿತ್ತದಿಂದ ನಿಭಾಯಿಸುತ್ತಾರೆ. ಜೀನವನ್ನು ಆಸ್ವಾದಿಸುತ್ತಾರೆ.
ಮೀನ ರಾಶಿಯ ಜನ (pisces):
ಇನ್ನು ಮೀನ ರಾಶಿಯ ಜನರ ಮೇಲೆಯೂ ಸಹ ದೇವ ಗುರು ಬೃಹಸ್ಪತಿಯ ಕೃಪಾಶೀರ್ವಾದ ವಿಶೇಷವಾಗಿ ಇರುತ್ತದೆ. ಈ ರಾಶಿಯ ಜನರೂ ಸಹ ಬಹಳಷ್ಟು ಗೌರವಾನ್ವಿತರಾಗಿರುತ್ತಾರೆ. ಕೆಚ್ಚೆದೆಯವರಾಗಿರುತ್ತಾರೆ. ಇವರ ಮೇಲೆ ಬಹಳಷ್ಟು ಭರವಸೆ ಹೊಂದಬಹುದು. ಈ ಮೀನ ರಾಶಿಯ ಜನ ಒಳ್ಳೆ ಮನಸ್ಸಿನವರಾಗಿರುತ್ತಾರೆ. ಯಾರನ್ನೇ ಆಗಲಿ ಇವರು ಇಷ್ಟಪಟ್ಟರೆ ಹೃದಯತುಂಬಾ ಇಷ್ಟಪಡುತ್ತಾರೆ.
ತೋರಿಕೆಗಷ್ಟೇ ಇವರ ಪ್ರೀತಿ ಸೀಮಿತವಾಗುವುದಿಲ್ಲ. ಹಾಗಾಗಿಯೇ ಇವರಿಗೂ ತೋರಿಕೆಯ ಜನ ಇಷ್ಟವಾಗುವುದಿಲ್ಲ. ಈ ರಾಶಿಯ ಜನ ಶಿಕ್ಷಣದಲ್ಲಿ ಬಹಳ ಮುಂದಿರುತ್ತಾರೆ. ಶಿಕ್ಷಣದ ಎಲ್ಲಾ ರಂಗಗಳಲ್ಲೂ ಇವರು ಜಯ ಸಾಧಿಸಬಲ್ಲರು. ಶಿಸ್ತುಬದ್ಧ ಜೀವನವನ್ನು ಇವರು ಇಷ್ಟ ಪಡುತ್ತಾರೆ. ಮೀನ ರಾಶಿಯ ಈ ಜನ ಜೀವನದಲ್ಲಿ ಬಹಳ ಹೆಸರು ಮತ್ತು ಪ್ರತಿಷ್ಠೆಯನ್ನು ಸಂಪಾದಿಸುತ್ತಾರೆ.
(these two zodiac sign people earn lot of fame in education due to devaguru brihaspati or jupiter blessings)