ಈ ಯುವತಿ ತಾನೊಬ್ಬ ಹೆಣ್ಣು ಅನ್ನುವುದನ್ನೂ ಮರೆತು ವಿನಾಕಾರಣ ಕ್ಯಾಬಿಯೊಬ್ಬನನ್ನು ಥಳಿಸುತ್ತಿದ್ದಾಳೆ!

ಈ ಯುವತಿ ತಾನೊಬ್ಬ ಹೆಣ್ಣು ಅನ್ನುವುದನ್ನೂ ಮರೆತು ವಿನಾಕಾರಣ ಕ್ಯಾಬಿಯೊಬ್ಬನನ್ನು ಥಳಿಸುತ್ತಿದ್ದಾಳೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Aug 03, 2021 | 9:45 PM

ಅವಳ ಎಳದಾಟಕ್ಕೆ ಕ್ಯಾಬಿಯ ಫೋನು ಕೆಳಗೆ ಬಿದ್ದು ಒಡೆದುಹೋಗಿದೆ. ಅದು ನನ್ನ ಮಾಲೀಕನಿಗೆ ಸೇರಿದ್ದು, ಅವನಿಗೆ ಏನು ಹೇಳಲಿ ಅಂತ ಅವು ಗೋಗರೆಯುತ್ತಿದ್ದರೆ, ಕಾಳಿಯ ಅವತಾರವೆತ್ತಂತೆ ವರ್ತಸುತ್ತಿರುವ ಹೆಂಗಸು ಅವನಿಗೆ ಹೊಡಯುವುದನ್ನು ಮಾತ್ರ ನಿಲ್ಲುಸುತ್ತಿಲ್ಲ. ಅವಳಲ್ಲಿ ಮಾನವೀಯತೆಯ ಅಂಶವೇ ಕಾಣುತ್ತಿಲ್ಲ.

ಈ ವಿಡಿಯೋ ನೋಡುತ್ತಿರುವ ಹೆಂಗಳೆಯರು ಸಹ ಇಲ್ಲಿ ಕಾಣುತ್ತಿರುವ ಯುವತಿಯ ವರ್ತನೆಯನ್ನು ಸಹಿಸಲಾರರು. ಅವಳು ಅದ್ಹೇಗೆ ಒಬ್ಬ ಕ್ಯಾಬಿಯನ್ನು ಜನನಿಬಿಡ ರಸ್ತೆಯಲ್ಲಿ ಥಳಿಸುತ್ತಿದ್ದಾಳೆ ಅಂತ ಒಮ್ಮೆ ನೋಡಿ. ಕ್ಯಾಬ್ ಡ್ರೈವರ್ ಆಕೆಯನ್ನು ಛೇಡಿಸುಬಹುದು ಅಂತ ನೀವು ಭಾವಿಸುತ್ತಿದ್ದೀರಾ? ಖಂಡಿತಾ ಇಲ್ಲ. ಅವನದ್ದೇನೂ ತಪ್ಪಿಲ್ಲ. ಈ ವಿಡಿಯೋವನ್ನು ಕೊನೇವರೆಗೂ ನೋಡಿದರೆ ನಿಮಗೆ ಯುವತಿಯ ದರ್ಪ ಅರ್ಥವಾಗುತ್ತದೆ. ತಾನು ಹೆಣ್ಣು ಎಂಬ ಒಂದೇ ಕಾರಣಕ್ಕೆ ಅವಳು ತನ್ನ ಉದ್ಧಟತನ, ಅಹಂಕಾರ, ದರ್ಪ, ಮತ್ತು ಕ್ರೌರ್ಯ ಮೆರೆಯುತ್ತಿದ್ದಾಳೆ. ಅಷ್ಟೆಲ್ಲ ಜನರೆದರು ಹಾಗೆ ಏಟು ತಿಂದು ಅಪಮಾನಕ್ಕೊಳಗಾದರೂ ಕ್ಯಾಬಿ ಅಕೆಯೊಂದಿಗೂ ಒಂದಿನಿತೂ ಒರಟಾಗಿ, ಕೆಟ್ಟದ್ದಾಗಿ ವರ್ತಿಸುತ್ತಿಲ್ಲ. ಭಾರತದ ಸಂಪ್ರದಾಯವನ್ನು ಅವನು ಪ್ರದರ್ಶಿಸುತ್ತಿದ್ದಾನೆಯೇ ಹೊರತು ಈ ಹೆಂಗಸಲ್ಲ. ಗಮನಿಸಿಬೇಕಾದ ಸಂಗತಿಯೆಂದರೆ, ಇವಳ ಹುಚ್ಚಾಟವನ್ನು ತಮಾಷೆಯ ಹಾಗೆ ನೋಡುತ್ತಿರುವವರಲ್ಲಿ ಮಹಿಳೆಯರೂ ಇದ್ದಾರೆ. ಆದರೆ, ಯಾಕೆ ಅವನಿಗೆ ಹೊಡೆಯತ್ತಿದ್ದಿಯಾ ಅಂತ ಯಾರೂ ಕೇಳುತ್ತಿಲ್ಲ.

ಅವಳ ಎಳದಾಟಕ್ಕೆ ಕ್ಯಾಬಿಯ ಫೋನು ಕೆಳಗೆ ಬಿದ್ದು ಒಡೆದುಹೋಗಿದೆ. ಅದು ನನ್ನ ಮಾಲೀಕನಿಗೆ ಸೇರಿದ್ದು, ಅವನಿಗೆ ಏನು ಹೇಳಲಿ ಅಂತ ಅವು ಗೋಗರೆಯುತ್ತಿದ್ದರೆ, ಕಾಳಿಯ ಅವತಾರವೆತ್ತಂತೆ ವರ್ತಸುತ್ತಿರುವ ಹೆಂಗಸು ಅವನಿಗೆ ಹೊಡಯುವುದನ್ನು ಮಾತ್ರ ನಿಲ್ಲುಸುತ್ತಿಲ್ಲ. ಅವಳಲ್ಲಿ ಮಾನವೀಯತೆಯ ಅಂಶವೇ ಕಾಣುತ್ತಿಲ್ಲ.

ಕೊನೆಗೆ ಮತ್ತೊಬ್ಬ ಯುವಕ ಕ್ಯಾಬಿಯ ಸಹಾಯಕ್ಕೆ ಬಂದಾಗ ಅವಳು, ‘ನೀನ್ಯಾವನಲೇ..?’ ಎಂದು ಅಬ್ಬರಿಸಿ ಕ್ಯಾಬಿಯನ್ನು ಬಿಟ್ಟು ಇವೆನ ಶರ್ಟ್ ಹಿಡಿದು ಎಳೆಯುತ್ತಾಳೆ ಮತ್ತು ಅವನ ಕೆನ್ನೆಗೂ ಬಾರಿಸುತ್ತಾಳೆ. ಈ ವಿಡಿಯೋವನ್ನು ನೋಡಿರುವ ನೆಟ್ಟಿಗರು ಅಹಂಕಾರವೇ ಮೂರ್ತವೆತ್ತಂತಿರುವ ಈ ಹೆಂಗಸಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲೇಬೇಕು ಅನ್ನುತ್ತಿದ್ದಾರೆ.

ಅಂದ ಹಾಗೆ ನೀವು ನೋಡುತ್ತಿರುವ ಈ ದೃಶ್ಯ ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದು. ಯುವತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Viral Video: ಮದುವೆಗೆ ತಯಾರಾಗಲು ವರನಿಗೆ ಸಹಾಯ ಮಾಡುತ್ತಿರುವ ವಧು! ಇಬ್ಬರ ನವಿರಾದ ಕ್ಷಣದ ವಿಡಿಯೋ ವೈರಲ್

Published on: Aug 03, 2021 07:17 PM