ದಸರಾ ಆನೆಗಳಿಗೂ ಕೊರೊನಾ ಪರೀಕ್ಷೆ: ಈ ಬಾರಿ ಅಂಬಾರಿ ಹೊರುವವರು ಯಾರು?

ದಸರಾ ಆನೆಗಳಿಗೂ ಕೊರೊನಾ ಪರೀಕ್ಷೆ: ಈ ಬಾರಿ ಅಂಬಾರಿ ಹೊರುವವರು ಯಾರು?

ಮೈಸೂರು: ಕೊರೊನಾ ಆತಂಕದ ನಡುವೆಯೇ ಈ ವರ್ಷ ಕಳೆದುಹೋಗಿದೆ. ಈ ಮಧ್ಯೆ ದಸರಾ ಹಬ್ಬಕ್ಕೂ ಕೊರೊನಾ ಸೋಂಕು ಅಡ್ಡಿಯಾಗಿದ್ದು, ಇಷ್ಟೆಲ್ಲಾ ಅಡ್ಡಿ ಆತಂಕಗಳ ನಡುವೆ ಜಂಬೂಸವಾರಿ ನಡೆಸಲು ಸಿದ್ಧತೆ ನಡೆದಿದೆ. ಮೊದಲಿಗೆ ಅಂಬಾರಿ ಹೊರಲು ಆನೆ ಆಯ್ಕೆ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದರು, ಆದರೆ ಸದ್ಯದ ಪರಿಸ್ಥಿತಿಯಲ್ಲಿ ಗಜರಾಯನಿಗೂ ಕೊರೊನಾ ಪರೀಕ್ಷೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ಬಾರಿ ದಸರಾದಲ್ಲಿ 5 ಆನೆಗಳನ್ನ ಮಾತ್ರ ಬಳಸಿಕೊಳ್ಳಲಾಗುತ್ತಿದೆ..
ಕೊರೊನಾ ಅದೆಷ್ಟರಮಟ್ಟಿಗೆ ಈ ಬಾರಿ ದಸರಾ ಹಬ್ಬದ ಮೇಲೆ ಹೊಡೆತ ಕೊಟ್ಟಿದೆ ಅಂದ್ರೆ, ಜಂಬೂಸವಾರಿಯಲ್ಲೇ ಕಾಂಪ್ರಮೈಸ್‌ ಮಾಡ್ಕೊಳ್ತಿದ್ದಾರೆ. ಕಾಡಿನಿಂದ 5 ಆನೆಗಳನ್ನ ಮಾತ್ರ ಕರೆದುಕೊಂಡು ಬರಲಾಗುತ್ತಿದೆ. ಅಷ್ಟೇ ಅಲ್ಲ, ಮಾವುತರು ಮಾತ್ರವಲ್ಲದೆ, ಅರಣ್ಯ ಇಲಾಖೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆನೆಗಳಿಗೂ ಕೊರೊನಾ ಪರೀಕ್ಷೆ ಮಾಡಿಸೋಕೆ ತಯಾರಿ ಮಾಡ್ಕೊಂಡಿದೆ.

ದಸರಾ ಆನೆಗಳಿಗೂ ಕೊರೊನಾ ಪರೀಕ್ಷೆ..
ಅಷ್ಟಕ್ಕೂ ಅಮೆರಿಕಾದ ಝೂನಲ್ಲಿ ಹುಲಿಗೆ ಕೊರೊನಾ ಕಾಣಿಸಿಕೊಂಡಿದ್ದೇ ಇದಕ್ಕೆ ಕಾರಣ. ಹುಲಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಯಿಂದ ಹುಲಿಗೂ ಕೊರೊನಾ ವಕ್ಕರಿಸಿತ್ತು.ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಆನೆಗಳಿಗೂ ಕೊರೊನಾ ಪರೀಕ್ಷೆ ಮಾಡಿಸಲು ತಜ್ಞರ ಸಲಹೆ ಪಡೆಯಲು ಹಿರಿಯ ಅರಣ್ಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅಲ್ಲಿನ ಸಲಹೆಯನ್ನು ಆಧರಿಸಿ ಕಾಡಿನಿಂದ ಹೊರಟಾಗ ಪರೀಕ್ಷೆ ಮಾಡಿಸಬೇಕಾ ಅಥವಾ ಅರಮನೆಗೆ ಬಂದ ನಂತ್ರ ಪರೀಕ್ಷೆ ಮಾಡಿಸಬೇಕಾ‌ ಎಂಬ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದಂತೆ.

ಈ ಬಾರಿ ಅರ್ಜುನ ಅಂಬಾರಿ ಹೊರುವುದು ಅನುಮಾನ..
ಈ ಬಾರಿ ಅರ್ಜುನ ಆನೆ ಚಿನ್ನದ ಅಂಬಾರಿ ಹೊರುವುದು ಅನುಮಾನ.ಹೀಗಾಗಿ ಈ ಸ್ಥಾನ ಅಭಿಮನ್ಯು ತುಂಬಲಿದ್ದಾನೆ. ಅರಣ್ಯ ಇಲಾಖೆ ಸರ್ಕಾರಕ್ಕೆ ಕಳುಹಿರುವ ಪಟ್ಟಿಯಲ್ಲೂ ಅಂಬಾರಿ ಹೊರಿಸಲು ಅಭಿಮನ್ಯು ಹೆಸರನ್ನೆ ಸೂಚಿಸಲಾಗಿದೆ. ಅಳೆದು ತೂಗಿ ಅಭಿಮನ್ಯು ಹೆಸರೇ ಫೈನಲ್ ಆಗಿದ್ದು, ಉಳಿದ 5 ಆನೆಗಳ‌ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿ‌ಲಾಗಿದೆ. ಒಟ್ಟಾರೆ ಹೇಳೋದಾದರೆ ಈ ಬಾರಿ ಕೊರೊನಾ ಜನರ ಜೀವನದ ಮೇಲೆ ಮಾತ್ರವಲ್ಲದೆ, ಜಂಬೂಸವಾರಿ ಮೇಲೂ ಪರಿಣಾಮ ಬೀರಿದೆ. ಇಷ್ಟೆಲ್ಲಾ ಒತ್ತಡಗಳ ಮಧ್ಯೆ ಜಂಬೂಸವಾರಿಗೆ ಸಿದ್ಧತೆ ನಡೆದಿರೋದು ಕುತೂಹಲ ಕೆರಳಿಸಿದೆ.

Click on your DTH Provider to Add TV9 Kannada