ಬೆಂಗಳೂರು: ಹೊಸ ವರ್ಷವನ್ನು ವಿವಿಧ ರೀತಿಯಲ್ಲಿ ವೆಲ್ಕಂ ಮಾಡೋಕೆ ಎಲ್ಲರೂ ತುದಿಗಾಲಿನಲ್ಲಿ ನಿಂತಿದ್ದಾರೆ. ಅದ್ರಲ್ಲೂ ರಾಜಧಾನಿ ಜನರು ನ್ಯೂ ಇಯರ್ಗಾಗಿ ಹಲವಾರು ಕಾರ್ಯಕ್ರಮಗಳನ್ನ ಪ್ಲ್ಯಾನ್ ಮಾಡ್ಕೊಂಡಿದ್ದಾರೆ. ಆದ್ರೆ, ಪೊಲೀಸರು ಮಾತ್ರ ಜನರಿಗೆ ಭದ್ರತೆ ಕೊಡುವ ಕುರಿತು ಸಿದ್ಧತೆಗಳನ್ನ ನಡೆಸುತ್ತಿದ್ದಾರೆ.
ನಿಮಗೆ ನ್ಯೂ ಇಯರ್ ಸೆಲೆಬ್ರೇಷನ್, ಆದ್ರೆ ಪೊಲೀಸರಿಗೆ 2 ಪಾಳಿಯಲ್ಲಿ ಡ್ಯೂಟಿ!
ಹೊಸ ವರ್ಷದ ಹಿಂದಿನ ರಾತ್ರಿ ನಗರದ 8 ವಿಭಾಗಗಳಲ್ಲೂ ಪೊಲೀಸರು ಭದ್ರತೆ ನೀಡಲಿದ್ದಾರೆ. ರಾತ್ರಿ 10 ಗಂಟೆ ಬಳಿಕ ಬೆಂಗಳೂರಿನ ಎಲ್ಲ ಫ್ಲೈ ಓವರ್ಗಳನ್ನು ಟ್ರಾಫಿಕ್ ಪೊಲೀಸರು ಬಂದ್ ಮಾಡಲಿದ್ದಾರೆ. ಮುಖ್ಯವಾಗಿ ಜನಸಂದಣಿ ಇರುವ ಬ್ರಿಗೇಡ್ ರೋಡ್ ಮತ್ತು ಎಂಜಿ ರೋಡ್, ಕೋರಮಂಗಲ ಮತ್ತು ಇಂದಿರಾನಗರದಲ್ಲಿಯೂ ಹೆಚ್ಚಿನ ಭದ್ರತೆ ಕಲ್ಪಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಅಂದು ಪೊಲೀಸರು ಎರಡು ಶಿಫ್ಟ್ನಲ್ಲಿ ಕೆಲಸ ಮಾಡಲಿದ್ದಾರೆ. ಸಿಸಿಕ್ಯಾಮರಾ, ಬೈನಾಕುಲರ್, ವಾಕಿ ಟಾಕಿ ಮತ್ತು ಡ್ರೋನ್ ಮೂಲಕ ಕಣ್ಗಾವಲು ಇಡಲಿದ್ದಾರೆ. ಈಗಾಗಲೇ ವಿವಿಧೆಡೆ ಒಟ್ಟು 1500ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮಂಗಳೂರಿನ ಗಲಭೆ ವೇಳೆ ಕ್ಯಾಮರಾಗಳನ್ನು ಹಾನಿ ಮಾಡಲಾಗಿತ್ತು. ಹೀಗಾಗಿ ಬೆಂಗಳೂರಿನಲ್ಲಿ ಹೆಚ್ಚು ಹಿಡನ್ ಕ್ಯಾಮರಾ ಪೊಲೀಸರು ಬಳಕೆ ಮಾಡಲಿದ್ದಾರೆ.
ಮಾದಕ ವಸ್ತು ಪತ್ತೆಗೆ ವಿಶೇಷ ತಂಡ:
ಗಾಂಜಾ ಮತ್ತು ಮಾದಕ ವಸ್ತುಗಳನ್ನು ಪತ್ತೆಮಾಡಲು ವಿಷೇಶ ತಂಡ ರಚಿಸಲಾಗಿದೆ. ಸ್ಟಾರ್ ಹೋಟೆಲ್ಗಳಿಗೆ ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಯಲಿದೆ. ಭದ್ರತೆಗೆ ಖಾಸಗಿ ಸೆಕ್ಯುರಿಟಿಗಳನ್ನು ಸಹ ಪೊಲೀಸರು ಬಳಸಲಿದ್ದಾರೆ. ಆಯ್ದ ಭಾಗಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಳನ್ನೂ ಮಾಡಲಾಗುವುದು. ಅದನ್ನು ಸೇಫ್ ಐಲೆಂಡ್ ಎಂದು ಕರೆಯಲಾಗುತ್ತದೆ.
ಮಹಿಳೆಯರ ಭದ್ರತೆಗೆ ವಿಶೇಷ ಕಾಳಜಿ:
ಮಹಿಳೆಯರ ಭದ್ರತೆಗೆ ವಿಶೇಷ ಕಾಳಜಿ ವಹಿಸಲಾಗುವುದು. ಈಗಾಗಲೇ ಓಲಾ ಮತ್ತು ಊಬರ್ ಜೊತೆ ಪೊಲೀಸರ ಮಾತುಕತೆ ನಡೆದಿದೆ. ಮಹಿಳೆಯರ ಭದ್ರತೆ ಕುರಿತು ಸೂಚಿಸಲಾಗಿದೆ. ಬಿಎಂಟಿಸಿ ಮತ್ತು ನಮ್ಮ ಮೆಟ್ರೋ ಸೇವೆ ತಡರಾತ್ರಿ 2 ಗಂಟೆವರೆಗೆ ಇರಲಿದೆ. ರ್ಯಾಶ್ ಡ್ರೈವಿಂಗ್ ಹಾಗು ವೀಲಿಂಗ್ಗೆ ಅವಕಾಶವಿಲ್ಲ.
ನಂಬಿಕಸ್ಥರ ಜೊತೆ ಮಾತ್ರ ಹೆಣ್ಣುಮಕ್ಕಳು ಹೊರಗೆ ಬನ್ನಿ. ಅಪರಿಚಿತರು ನೀಡಿದ್ದನ್ನು ಯಾವುದೇ ಕಾರಣಕ್ಕೂ ಪಡೆಯಬೇಡಿ. ಯಾರಾದ್ರು ಡ್ರಗ್ಸ್ ಆಫರ್ ಮಾಡಿದ್ರೆ ಪಡೆಯಲೇಬಾರದು. ಪ್ರಯಾಣಿಕರನ್ನು ಆಟೋ ರಿಕ್ಷಾಗಳು ಮತ್ತು ಕ್ಯಾಬ್ಗಳು ಸತಾಯಿಸುವಂತಿಲ್ಲ. ಹೆಚ್ಚಿನ ಹಣ ಕೇಳುವಂತಿಲ್ಲ. ಒಂದು ವೇಳೆ ಏನಾದ್ರು ಆದ್ರೆ ಕಂಟ್ರೋಲ್ ರೂಮ್ಗೆ ಕರೆ ಮಾಡಲು ಭಾಸ್ಕರ್ ರಾವ್ ಸೂಚಿಸಿದ್ದಾರೆ.
Published On - 11:52 am, Sat, 28 December 19