ಚಿಕ್ಕಬಳ್ಳಾಪುರ: ಶಾಸಕರ ಕಾರ್ಯಕ್ರಮದ ಬಳಿಕ ಗ್ರಾ.ಪಂ.ಅಧ್ಯಕ್ಷೆ ಹಾಗೂ ಸ್ಥಳೀಯರು ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿರುವ ಘಟನೆ ಗುಡಿಬಂಡೆ ತಾಲೂಕಿನ ಗೆಗ್ಗಿಲಹಾಳ್ಳಹಳ್ಳಿಯಲ್ಲಿ ನಡೆದಿದೆ. ಗ್ರಾಮದಲ್ಲಿ ನೀರಿನ ಘಟಕದ ಉದ್ಘಾಟನೆಯನ್ನು ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೆರವೇರಿಸಿದರು. ನಂತರ ಅನುದಾನ ಸಂಬಂಧ ಗಲಾಟೆ ನಡೆದಿದೆ.
ಗುತ್ತಿಗೆ ವಿಚಾರದಲ್ಲಿ ಹಣ ಬಿಡುಗಡೆಯಾಗಿಲ್ಲವೆಂದು ಶಾಸಕರಿಗೆ ಸೋಮೇನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ರಜನಿ ಪತಿ ಮಂಜುನಾಥ್ ಹಾಗು ಸ್ಥಳೀಯರು ದೂರು ನೀಡಿದ್ದಾರೆ. ಇದರಿಂದ ಕೋಪಗೊಂಡ ತಾ.ಪಂ. ಅಧ್ಯಕ್ಷೆಯ ಪತಿ ಕೃಷ್ಣೇಗೌಡ, ಶಾಸಕರು ತೆರಳುತ್ತಿದ್ದಂತೆ ಕೆರಳಿದ್ದಾರೆ. ಆಗ ಮಂಜುನಾಥ್ ಮತ್ತು ಕೃಷ್ಣೇಗೌಡ ಮಧ್ಯೆ ಗಲಾಟೆಯಾಗಿದೆ. ಬಳಿಕ ಗಲಾಟೆ ತೀವ್ರ ಸ್ವರೂಪಕ್ಕೆ ತಿರುಗಿ ಗ್ರಾ.ಪಂ.ಅಧ್ಯಕ್ಷೆ ಹಾಗೂ ಸ್ಥಳೀಯರು ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ.