ಡಬಲ್ಸ್ನಲ್ಲಿ ಹಿಂದೊಮ್ಮೆ ವಿಶ್ವದ ನಂಬರ್ ವನ್ ಆಟಗಾರ್ತಿಯಾಗಿದ್ದ ಸಾನಿಯಾ ಮಿರ್ಜಾ ಒಲಂಪಿಕ್ಸ್ನಲ್ಲಿ ನಾಲ್ಕನೇ ಬಾರಿ ಭಾಗವಹಿಸಿರುವ ಮೂವರು ಭಾರತೀಯ ಮಹಿಳಾ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ ಅಂತ ಅವರ ಲಕ್ಷಾಂತರ ಅಭಿಮಾನಿಗಳಿಗೆ ಗೊತ್ತಿರಬಹುದು. ಅವರಲ್ಲಿ ಮೊದಲನೆಯವರೆಂದರೆ ಮಾಜಿ ಸ್ಪ್ರಿಂಟರ್ ಶೈನಿ ವಿಲ್ಸನ್. ಸಾನಿಯಾ ಈ ಬಾರಿ ಅಂಕಿತಾ ರಾಯ್ ಅವರೊಂದಿಗೆ ಜೊತೆಗೂಡಿ ಮಹಿಳೆಯರ ಟೆನಿಸ್ ಡಬಲ್ಸ್ ಈವೆಂಟ್ನಲ್ಲಿ ಆಡಲಿದ್ದಾರೆ. ಡಿಸ್ಕಸ್ ಎಸೆತಗಾತಿ ಸೀಮಾ ಪೂನಿಯಾ ಸಹ ನಾಲ್ಕನೆ ಬಾರಿಗೆ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಟೆನಿಸ್ ಸ್ಪರ್ಧೆಗಳು ಇನ್ನೂ ಆರಂಬವಾಗಬೇಕಿರುವುದರಿಂದ, ಸಾನಿಯಾ ಇನ್ಸ್ಟಾಗ್ರಾಮ್ನಲ್ಲಿ ಪೋಟೋಗಳನ್ನು ಪೋಸ್ಟ್ ಮಾಡುತ್ತಾ ಟೊಕಿಯೋದಲ್ಲಿ ತಮ್ಮ ಬಿಡುವಿನ ಸಮಯವನ್ನು ಕಳೆಯುತ್ತಿದ್ದಾರೆ.
ಒಂದು ಚಿತ್ರದಲ್ಲಿ ಅವರು ಒಲಂಪಿಕ್ ರಿಂಗ್ಗಳ ಮುಂದೆ ಕೂತು ಮುಗುಳ್ನಗುತ್ತಿದ್ದಾರೆ. ತಾನು ಅಭ್ಯಾಸ ನಡೆಸುತ್ತಿರುವ ಒಂದು ಇಮೇಜನ್ನು ಸಹ ಅವರು ಪೋಸ್ಟ್ ಮಾಡಿದ್ದಾರೆ. ಆರು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರಿರುವ ಸಾನಿಯಾ ಮತ್ತೊಂದಲ್ಲಿ ಫೋಟೋದಲ್ಲಿ ಭಾರತದ ಟೊಕಿಯೋ ಒಲಂಪಿಕ್ಸ್ ಕಿಟ್ನೊಂದಿಗಿದ್ದಾರೆ.
ಎಂದಿನಂತೆ ಅವರ ಅಭಿಮಾನಿಗಳು ಎಲ್ಲ ಪೋಸ್ಟ್ಗಳನ್ನು ಲೈಕ್ ಮಾಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಸಾನಿಯಾ ಅವರು ಒಲಂಪಿಕ್ ಗ್ರಾಮದ ಹಲವಾರು ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಒಂದು ಚಿತ್ರದಲ್ಲಿ ಅವರು ರಿಯೋ ಒಲಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ನಲ್ಲಿ ಬೆಳ್ಳಿಪದಕ ಪಡೆದ ಪಿವಿ ಸಿಂಧೂ ಅವರ ಜೊತೆ ಇದ್ದಾರೆ.
ಬೇರೆ ಸ್ಟೊರಿಗಳಲ್ಲಿ ಅವರು, ಭಾರತದ ಮಾಜಿ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಕಳಿಸಿದ ಸಂದೇಶವನ್ನು ಶೇರ್ ಮಾಡಿದ್ದಾರೆ. ಆ ಸಂದೇಶ ಹೀಗಿದೆ: ‘ಅತ್ಯಂತ ಅನುಭವಿ ಮತ್ತು ಭಾರತದ ಹೆಮ್ಮೆ ಸಾನಿಯಾ ಮಿರ್ಜಾ ಮತ್ತು ಯುವ ಪ್ರತಿಭೆ, ಅಂಕಿತಾ ರೈನಾ ಮಹಿಳೆಯರ ಡಬಲ್ಸ್ ಪಂದ್ಯಗಳನ್ನು ಆಡಲು ಸಿದ್ಧರಾಗಿದ್ದಾರೆ.’
ಇತ್ತೀಚಿನ ದಿನಗಳಲ್ಲಿ ಭಾರತೀಯ ಟೆನಿಸ್ನಲ್ಲಿ ಸದ್ದು ಮಾಡುತ್ತಿರುವ ಸುಮಿತ್ ನಗಲ್, ಸಾನಿಯಾ ಅವರನ್ನು ಕೊಂಡಾಡುತ್ತಾ ಹೇಳಿರುವುದನ್ನು ಸಹ ಹೈದರಾಬಾದಿನ ಸುಂದರಿ ಶೇರ್ ಮಾಡಿದ್ದಾರೆ.
Mother of Izhaan Mirza Malik, former ? #☝️ and now, a 4x #Olympian@MirzaSania is #GOALS ??❤️??#AITATennis ??? #Tokyo2020 #Tennis #Cheer4India pic.twitter.com/1s6tdD7Xkj
— All India Tennis Association (@AITA__Tennis) July 24, 2021
‘ನನಗೆ ಗೊತ್ತಿರುವ ಹಾಗೆ ಅವರ ವಯಸ್ಸು ಈಗ 34, ಒಂದು ಮಗುವಿನ ತಾಯಿಯಾಗಿ, ಬಹಳ ವರ್ಷಗಳ ಕಾಲ ಟೆನಿಸ್ನಿಂದ ದೂರವಿದ್ದು, ಗಾಯದಿಂದ ಚೇತರಿಸಿಕೊಂಡು ಒಲಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸುವುದು ಸಾಮಾನ್ಯ ಮಾತಲ್ಲ. ದೇಶದ ಅನೇಕ ಜನರಲ್ಲಿ ಅವರು ಖಂಡಿತವಾಗಿಯೂ ಸ್ಫೂರ್ತಿ ತುಂಬುತ್ತಿದ್ದಾರೆ, ಅಂತ ಸಾನಿಯಾ ಬೀರಿರುವ ಪ್ರಭಾವದ ಬಗ್ಗೆ ಕೇಳಿದಾಗ ನಗಲ್ ಹಾಗೆ ಹೇಳಿದ್ದರು.
"It’s incredible what she’s doing. I’m pretty sure she’s motivating a lot of people back home." ??@nagalsumit speaks out about @Mirzasania's legacy ahead of Olympic bid#Tokyo2020 #Tennis
— ITF (@ITFTennis) July 23, 2021
ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಮತ್ತು ಅಂಕಿತಾ ರೈನಾ ಉಕ್ರೇನಿನ ಲುಡ್ಮಿಲಾ ಕಿಚನೊಕ್ ಮತ್ತಯ ನಾದಿಯಾ ಕಿಚನೊಕ್ ಅವರನ್ನು ಎದುರಿಸಲಿದ್ದಾರೆ.
Published On - 9:12 pm, Sat, 24 July 21