2 ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ ಹೆದ್ದಾರಿಯಲ್ಲಿ ಉರುಳಿ ಬಿದ್ದ ಲಾರಿ, ಫುಲ್ ಟ್ರಾಫಿಕ್ ಜಾಮ್.. ಎಲ್ಲಿ?
2 ಲಾರಿ ಮಧ್ಯೆ ಡಿಕ್ಕಿಯಾಗಿ ಅದರ ರಭಸಕ್ಕೆ ಲಾರಿ ಹೆದ್ದಾರಿಯಲ್ಲಿ ಉರುಳಿ ಬಿದ್ದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕು ವ್ಯಾಪ್ತಿಯ ಅತ್ತೆಬೆಲೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಆನೇಕಲ್: ತುಂತುರು ಮಳೆಯಲ್ಲಿ ಎರಡು ಲಾರಿಗಳ ಮಧ್ಯೆ ಅಪಘಾತ ಸಂಭವಿಸಿದೆ. 2 ಲಾರಿ ಮಧ್ಯೆ ಡಿಕ್ಕಿಯಾಗಿ ಅದರ ರಭಸಕ್ಕೆ ಲಾರಿ ಹೆದ್ದಾರಿಯಲ್ಲಿ ಉರುಳಿ ಬಿದ್ದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕು ವ್ಯಾಪ್ತಿಯ ಅತ್ತೆಬೆಲೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದೆಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಲಾರಿಯೊಂದು ಡಿವೈಡರ್ ಹತ್ತಿ ರಸ್ತೆ ಮಧ್ಯ ಪಲ್ಟಿ ಹೊಡೆದಿದೆ. ಗುಜರಿ ಸಾಮಾನು ಹೊತ್ತೊಯ್ಯುತ್ತಿದ್ದ ಲಾರಿ ಪಲ್ಟಿ ಹೊಡೆದಿದ್ದು ರಸ್ತೆ ಮೇಲೆ ಸಾಮಾನು ಚಲಾಪಿಲ್ಲಿಯಾಗಿದೆ. ಲಾರಿ ಚಾಲಕ, ನಿರ್ವಾಹಕನಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನು ಘಟನೆಯಿಂದಾಗಿ ಬೆಂಗಳೂರಿನಿಂದ ತಮಿಳುನಾಡು ಕಡೆ ತೆರಳೋ ರಸ್ತೆ ಸಂಪೂರ್ಣ ಜಾಮ್ ಆಗಿದೆ. ಹೆದ್ದಾರಿಯಲ್ಲಿ ಸುಮಾರು 3 ಕಿಲೋಮೀಟರ್ ಟ್ರಾಫಿಕ್ ಜಾಮ್ ಕಂಡು ಬಂದಿದೆ. ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಿಯುಸಿ ಅಡ್ಮಿಷನ್ ಮುಗಿಸಿ ಬರುತ್ತಿದ್ದ ವಿದ್ಯಾರ್ಥಿ.. ಲಾರಿ ಅಪಘಾತಕ್ಕೆ ಬಲಿ
Published On - 9:21 am, Thu, 7 January 21