ಮೆಜೆಸ್ಟಿಕ್ ನಿಲ್ದಾಣಕ್ಕೆ 8 ಬಿಎಂಟಿಸಿ ಬಸ್‌ಗಳ ಆಗಮನ.. ಶಿವಾಜಿನಗರದಲ್ಲೂ ಬಸ್ ಸಂಚಾರ
ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣಕ್ಕೆ 3 ಬಿಎಂಟಿಸಿ ಬಸ್‌ಗಳು ಆಗಮಿಸಿದ್ದು ಪೊಲೀಸ್ ಬಂದೋಬಸ್ತ್‌ನಲ್ಲಿ ಸಂಚಾರ ನಡೆಸಲಿವೆ. ಹಾಗೂ ಶಿವಾಜಿನಗರ ನಿಲ್ದಾಣಕ್ಕೆ ಒಂದು ಬಸ್ ಆಗಮಿಸಿದೆ. ಅದು ಸದ್ಯ ಈಗ ಶಿವಾಜಿನಗರದಿಂದ ಹೆಬ್ಬಾಳಕ್ಕೆ ತೆರಳಿದೆ.
ಬೆಂಗಳೂರು: ಕಳೆದ ಮೂರು ದಿನಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ನಿಂತಲ್ಲೇ ಬಸ್‌ಗಳು ನಿಂತಿವೆ. ಇಂದು ಸಾರಿಗೆ ನೌಕರರ ಪ್ರತಿಭಟನೆ 4ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಪ್ರಯಾಣಿಕರಿಗೆ ಕೊಂಚ ಖುಷಿಯಾಗುವಂತ ಬೆಳವಣಿಗೆ ನಡೆದಿದೆ.
ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣಕ್ಕೆ 8 ಬಿಎಂಟಿಸಿ ಬಸ್‌ಗಳು ಆಗಮಿಸಿದ್ದು ಪೊಲೀಸ್ ಬಂದೋಬಸ್ತ್‌ನಲ್ಲಿ ಸಂಚಾರ ನಡೆಸಲಿವೆ. ಹಾಗೂ ಶಿವಾಜಿನಗರ ನಿಲ್ದಾಣಕ್ಕೆ ಒಂದು ಬಸ್ ಆಗಮಿಸಿದೆ. ಅದು ಸದ್ಯ ಈಗ ಶಿವಾಜಿನಗರದಿಂದ ಹೆಬ್ಬಾಳಕ್ಕೆ ತೆರಳಿದೆ. ಆದ್ರೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೇ ಇಲ್ಲ. ಪೂರ್ತಿ ನಿಲ್ದಾಣ ಖಾಲಿ ಖಾಲಿಯಾಗಿದೆ.
ಮೆಜೆಸ್ಟಿಕ್‌ಗೆ ಒಂದೊಂದಾಗಿ ಬಸ್‌ಗಳು ಆಗಮಿಸುತ್ತಿದ್ದು ಈವರೆಗೆ ನಿಲ್ದಾಣಕ್ಕೆ 8 ಬಿಎಂಟಿಸಿ ಬಸ್‌ಗಳು ಬಂದಿವೆ. ಯಲಹಂಕ, ವಿಜಯನಗರ, ಕೆಂಗೇರಿ, ಹೊಸಕೆರೆಹಳ್ಳಿ, ತಾವರೆಕೆರೆ ಸೇರಿ ಹಲವೆಡೆ ತೆರಳುವ ಬಸ್‌ಗಳ ಆಗಮಿಸಿವೆ.
ಬೆಂಗಳೂರಿನ ಸ್ಯಾಟಲೈಟ್ ನಿಲ್ದಾಣದಿಂದ ಮೈಸೂರಿಗೆ 2 ಸರ್ಕಾರಿ ಬಸ್‌ಗಳು ಸಂಚಾರ ಆರಂಭಿಸಿವೆ. ಐರಾವತ, ಸುವರ್ಣ ಸಾರಿಗೆ ಬಸ್ ಸಂಚಾರ ಆರಂಭವಾಗಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲಕ್ಕೆ ಬಸ್ ಓಡಾಟ ಶುರು ಮಾಡಿದೆ.
ಕಲಬುರಗಿ, ಬೆಳಗಾವಿಯಲ್ಲಿ ರೈಟ್ ರೈಟ್ ಎಂದ KRSTC.. ಪೊಲೀಸ್ ಭದ್ರತೆಯಲ್ಲಿ ಸಂಚಾರ ಶುರು
Published On - 7:48 am, Mon, 14 December 20