ಸ್ವಂತ ಅತ್ತೆ ಮನೆಯಲ್ಲೇ ಕನ್ನ ಹಾಕಿ ಕಬ್ಬಿನ ಗದ್ದೆಯಲ್ಲಿ ಚಿನ್ನ ಹೂತಿಟ್ಟಿದ್ರು.. ಇಬ್ಬರು ಆರೋಪಿಗಳು ಅರೆಸ್ಟ್

ಬಂಧಿತ ಆರೋಪಿಗಳಾದ ಪುನೀತ್ ಮತ್ತು ಲೋಕೇಶ್, ನಾಗೇಶಮ್ಮ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದರು. ನಾಗೇಶಮ್ಮ ಆರೋಪಿ ಪುನೀತ್ ಸೋದರ ಅತ್ತೆ. ಸ್ವಂತ ಅತ್ತೆ ಮನೆಯಲ್ಲೆ ಆರೋಪಿ ಪುನೀತ್ ಕನ್ನ ಹಾಕಿದ್ದ. ಮನೆಯಲ್ಲಿ ಯಾರು ಇಲ್ಲದ ವೇಳೆ ಪುನೀತ್ ಮತ್ತು ಲೋಕೇಶ್, ನಾಗೇಶಮ್ಮನ ಮನೆಯ ಹೆಂಚು ತೆಗೆದು ಒಳಗೆ ನುಗ್ಗಿ ಚಿನ್ನಾಭರಣ ದೋಚಿದ್ದರು.

  • TV9 Web Team
  • Published On - 9:21 AM, 27 Jan 2021
ಸ್ವಂತ ಅತ್ತೆ ಮನೆಯಲ್ಲೇ ಕನ್ನ ಹಾಕಿ ಕಬ್ಬಿನ ಗದ್ದೆಯಲ್ಲಿ ಚಿನ್ನ ಹೂತಿಟ್ಟಿದ್ರು.. ಇಬ್ಬರು ಆರೋಪಿಗಳು ಅರೆಸ್ಟ್
ಹುಲ್ಲಹಳ್ಳಿ ಪೊಲೀಸರಿಂದ ಖತರ್ನಾಕ್ ಕಳ್ಳರ ಬಂಧನ

ಮೈಸೂರು: ಜಿಲ್ಲೆಯ ಶಿರಮಳ್ಳಿಯಲ್ಲಿ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಹುಲ್ಲಹಳ್ಳಿ ಪೊಲೀಸರಿಂದ ಖತರ್ನಾಕ್ ಕಳ್ಳರ ಬಂಧನವಾಗಿದೆ. ಪುನೀತ್, ಲೋಕೇಶ್‌ ಬಂಧಿತ ಆರೋಪಿಗಳು. ಬಂಧಿತರಿಂದ ₹7 ಲಕ್ಷ ಮೌಲ್ಯದ 159 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.

ಘಟನೆ ಹಿನ್ನಲೆ
ಬಂಧಿತ ಆರೋಪಿಗಳಾದ ಪುನೀತ್ ಮತ್ತು ಲೋಕೇಶ್, ನಾಗೇಶಮ್ಮ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದರು. ನಾಗೇಶಮ್ಮ ಆರೋಪಿ ಪುನೀತ್ ಸೋದರ ಅತ್ತೆ. ಸ್ವಂತ ಅತ್ತೆ ಮನೆಯಲ್ಲೆ ಆರೋಪಿ ಪುನೀತ್ ಕನ್ನ ಹಾಕಿದ್ದ. ಮನೆಯಲ್ಲಿ ಯಾರು ಇಲ್ಲದ ವೇಳೆ ಪುನೀತ್ ಮತ್ತು ಲೋಕೇಶ್, ನಾಗೇಶಮ್ಮನ ಮನೆಯ ಹೆಂಚು ತೆಗೆದು ಒಳಗೆ ನುಗ್ಗಿ ಚಿನ್ನಾಭರಣ ದೋಚಿದ್ದರು.

ಕದ್ದ ಆಭರಣಗಳನ್ನ ಲೋಕೇಶ್ ಮಾವನಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿ ಆರೋಪಿ ಪುನೀತ್ ನಾಪತ್ತೆಯಾಗಿದ್ದ. ಮನೆ ಕಳ್ಳತನದ ಬಳಿಕ ನಾಗೇಶಮ್ಮ ಹುಲ್ಲಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಹಾಗೂ ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ್ದ ಚಿನ್ನಾಭರಣವನ್ನೂ ವಶಕ್ಕೆ ಪಡೆದಿದ್ದಾರೆ.

ಭಿಕ್ಷುಕರ ವೇಷದಲ್ಲಿ ಬಂದು, ಮನೆಯಲ್ಲಿ ಯಾರು ಇಲ್ಲದ ವೇಳೆ ಕೋಳಿ ಕದಿಯುವ ಕಳ್ಳರು..