
ಕೊಪ್ಪಳ: ಜಿಲ್ಲೆಯಲ್ಲಾದ ಕರ್ನಾಟಕ ಗ್ರಾಮೀಣ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಕೊನೆಗೂ ಬ್ಯಾಂಕ್ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್ ಮತ್ತು ಹರಿದಾಸ್ ಬಂಧಿತರು. ಆರೋಪಿಗಳಿಂದ 370 ಗ್ರಾಂ ಬಂಗಾರ 65 ಸಾವಿರ ನಗದು, ಎರಡು ಕಾರ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಸಪ್ಟೆಂಬರ್ 24 ರಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಕಳ್ಳತನ ನಡೆದಿತ್ತು. ಈ ವೇಳೆ 21,75,572 ನಗದು, 1, 24,80,353 ಮೊತ್ತದ ಬಂಗಾರ ಸೇರಿ 1,46,55,905 ಮೊತ್ತದಷ್ಟು ಕಳ್ಳತನವಾಗಿತ್ತು. 10 ಜನ ಆರೋಪಿಗಳು ಸೇರಿ ಕಂಟ್ರಿ ಪಿಸ್ತೂಲ್ ಸಮೇತ ಬಂದು ಬ್ಯಾಂಕ್ ದರೋಡೆ ಮಾಡಿದ್ದರು.
10 ಜನರ ಪೈಕಿ ಮಹಾರಾಷ್ಟ್ರ ಮೂಲದ ಇಬ್ಬರು ಆರೋಪಿಗಳು ಮಹಾರಾಷ್ಟ್ರ ಗಡಿಯ ಜಳಕಿ ಚೆಕ್ ಪೋಸ್ಟ್ ಬಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ 370 ಗ್ರಾಂ ಬಂಗಾರ 65 ಸಾವಿರ ನಗದು, ಎರಡು ಕಾರ್ಗಳನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನುಳಿದ 8 ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಕೊಪ್ಪಳ ಎಸ್ಪಿ ಜೆ ಸಂಗೀತಾ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕೊಪ್ಪಳ ಗ್ರಾಮೀಣ ಬ್ಯಾಂಕ್‌ನಲ್ಲಿ ಬೃಹತ್ ದರೋಡೆ: 1 ಕೋಟಿ ರೂ. ಮೌಲ್ಯದ ನಗದು, ಆಭರಣ ಲೂಟಿ