ರಾಯಚೂರು:ಈಗಾಗಲೇ ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು ಹಲವೆಡೆ ಭಾರಿ ಮಳೆಯಾಗುತ್ತಿದೆ. ಜೊತೆಗೆ ಭಾರಿ ಮಳೆಯಿಂದ ಕೆಲವೆಡೆ ಪ್ರವಾಹ ಭೀತಿ ಎದುರಾಗಿದ್ದು, ಇನ್ನೂ ಕೆಲವೆಡೆ ಗುಡ್ಡ ಕುಸಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಇಲ್ಲೂ ಅದೇ ರೀತಿಯ ಘಟನೆ ಸಂಭವಿಸಿದ್ದು ಬಂಡೆ ಉರುಳಿಬಿದ್ದು ಇಬ್ಬರು ಮಕ್ಕಳು ಸಾವನಪ್ಪಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆ ದೇವದುರ್ಗ ಪಟ್ಟಣದ ಗೌರಮ್ ಪೇಟೆ ಬಡಾವಣೆಯ ವಿರೇಶ (13) ಮತ್ತು ರಮೇಶ (10) ಮೃತ ದುರ್ದೈವಿಗಳಾಗಿದ್ದಾರೆ. ಈಗಾಗಲೇ ರಾಯಚೂರಿನಲ್ಲಿ ಅಧಿಕ ಮಳೆಯಾಗುತ್ತಿದ್ದು, ಈ ಕಾರಣದಿಂದಾಗಿ ಗುಡ್ಡದ ಮೇಲಿದ್ದ ಬಂಡೆ ಉರುಳಿಬಿದ್ದು ಬಾಲಕರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.