ವಿಮಾನದಲ್ಲಿ.. ಮಾಸ್ಕ್ ಹಾಕೋಲ್ಲ ಎಂದ ಲೇಡಿ ಕಥೆ ಏನಾಯ್ತು ಗೊತ್ತಾ?
ಈಗ ಎಲ್ಲಿ ನೋಡಿದ್ರೂ ಮುಖಕ್ಕೆ ಮಾಸ್ಕ್ ಹಾಕಿದವರೇ ಕಾಣುತ್ತಾರೆ. ಇಡೀ ವಿಶ್ವಕ್ಕೆ ವಿಶ್ವವೇ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುತ್ತಿದೆ. ಇದಕ್ಕೆ ಕಾರಣ ಕೊರೊನಾ ಭಯ. ಅಂಥಾದ್ರಲ್ಲಿ ಮಾಸ್ಕ್ ಹಾಕದೇ ವಿಮಾನ ಹತ್ತಿದ್ದ ಮಹಿಳೆಯೊಬ್ಬಳನ್ನ ವಿಮಾನದಿಂದಲೇ ಕೆಳಗಿಳಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ. ಹೌದು ಜುಲೈ 19ರಂದು ಅಮೆರಿಕದ ಓಹೈವೋ ನಗರದಿಂದ ನಾರ್ಥ್ ಕ್ಯಾರೋಲಿನಾಗೆ ಹೋಗುವ ವಿಮಾನದಲ್ಲಿ ಮಹಿಳೆಯೊಬ್ಬಳು ಮುಖಕ್ಕೆ ಮಾಸ್ಕ್ ಹಾಕದೆ ಹತ್ತಿದ್ದಾಳೆ. ಆದ್ರೆ ವಿಮಾನ ಸಿಬ್ಬಂದಿ ಈ ಮಹಿಳೆಗೆ ಕೊರೊನಾ ಸಂಕಷ್ಟದ ಸಮಯವಿದೆ, ಹೀಗಾಗಿ ಮುಖಕ್ಕೆ ಮಾಸ್ಕ್ ಧರಿಸಿ […]
ಈಗ ಎಲ್ಲಿ ನೋಡಿದ್ರೂ ಮುಖಕ್ಕೆ ಮಾಸ್ಕ್ ಹಾಕಿದವರೇ ಕಾಣುತ್ತಾರೆ. ಇಡೀ ವಿಶ್ವಕ್ಕೆ ವಿಶ್ವವೇ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುತ್ತಿದೆ. ಇದಕ್ಕೆ ಕಾರಣ ಕೊರೊನಾ ಭಯ. ಅಂಥಾದ್ರಲ್ಲಿ ಮಾಸ್ಕ್ ಹಾಕದೇ ವಿಮಾನ ಹತ್ತಿದ್ದ ಮಹಿಳೆಯೊಬ್ಬಳನ್ನ ವಿಮಾನದಿಂದಲೇ ಕೆಳಗಿಳಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ.
ಹೌದು ಜುಲೈ 19ರಂದು ಅಮೆರಿಕದ ಓಹೈವೋ ನಗರದಿಂದ ನಾರ್ಥ್ ಕ್ಯಾರೋಲಿನಾಗೆ ಹೋಗುವ ವಿಮಾನದಲ್ಲಿ ಮಹಿಳೆಯೊಬ್ಬಳು ಮುಖಕ್ಕೆ ಮಾಸ್ಕ್ ಹಾಕದೆ ಹತ್ತಿದ್ದಾಳೆ. ಆದ್ರೆ ವಿಮಾನ ಸಿಬ್ಬಂದಿ ಈ ಮಹಿಳೆಗೆ ಕೊರೊನಾ ಸಂಕಷ್ಟದ ಸಮಯವಿದೆ, ಹೀಗಾಗಿ ಮುಖಕ್ಕೆ ಮಾಸ್ಕ್ ಧರಿಸಿ ಎಂದು ತಿಳಿಸಿದ್ದಾರೆ. ಆದ್ರೆ ಈ ಮಹಿಳೆ ಇದಕ್ಕೆ ನಿರಾಕರಿಸಿದ್ದಾಳೆ. ಅಷ್ಟೇ.. ಹಾಗಿದ್ರೆ ವಿಮಾನದಿಂದ ಕೆಳಗಿಳಿಯಿರಿ, ಮಾಸ್ಕ್ ಧರಿಸದೆ ನಿಮ್ಮನ್ನು ವಿಮಾನದಲ್ಲಿ ಕರೆದೊಯ್ಯುವುದಿಲ್ಲ ಅಂತಾ ಸಿಬ್ಬಂದಿ ತಿಳಿಸಿದೆ.
ಆಗ ಈ ಮಹಿಳೆ ವಿಮಾನದಿಂದ ಕೆಳಗಿಳಿಯುತ್ತೇನೆಯೇ ವಿನಃ ಮುಖಕ್ಕೆ ಮಾಸ್ಕ್ ಹಾಕುವುದಿಲ್ಲ ಅಂತಾ ತನ್ನೆಲ್ಲಾ ಬ್ಯಾಗ್‌ಗಳ ಸಮೇತ ವಿಮಾನದಿಂದ ಹೊರನಡೆದಿದ್ದಾಳೆ. ಈಕೆಯ ಈ ಉದ್ದಟತನ ಸಹ ಪ್ರಯಾಣಿಕರಿಗೆ ಸರಿ ಕಂಡಿಲ್ಲ. ಹೀಗಾಗಿ ಈಕೆ ಲಗೇಜ್ ಸಮೇತ ಹೊರಹೋಗಲು ರೆಡಿಯಾಗುತ್ತಿದ್ದಂತೆ ಚಪ್ಪಾಳೆ ಹೊಡೆದು ವಿಮಾನ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ. ಆಗ ಮಹಿಳೆ ಕೊಂಚ ಸಿಟ್ಟಿನಿಂದಲೇ ಹೊರನಡೆದಿದ್ದಾಳೆ. ಹೀಗೆ ಮಹಿಳೆಯನ್ನ ವಿಮಾನದಿಂದ ಹೊರಕಳುಹಿಸಿದ ವಿಡಿಯೋ ಈಗ ವಿಶ್ವಾದ್ಯಂತ ವೈರಲ್ ಆಗಿದೆ.
https://www.instagram.com/p/CC_cnnalI-f/
Published On - 6:32 pm, Fri, 24 July 20