AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾಗೆ ಮಧುಮೇಹಿಗಳಂದ್ರೆ ಇಷ್ಟವಂತೆ! ಆದ್ರೆ ಈ ವೈದ್ಯರು ಹೇಳೋದೇ ಬೇರೆ?

ಉಡುಪಿ: ಮಹಾಮಾರಿ ಕೊರೊನಾಗೆ ಇಡೀ ವಿಶ್ವವೇ ಪತರಗುಟ್ಟಿಹೋಗಿದೆ. ಯಾವ ದೇಶವೂ ಸಹ ಕೊರೊನಾಗೆ ಔಷಧ ಕಂಡುಹಿಡಿದಿಲ್ಲ. ಆದ್ರೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಕೆನಡಾದಲ್ಲಿರುವ ಕನ್ನಡಿಗ ಹೊಸ ಭರವಸೆ ಮೂಡಿಸಿದ್ದಾರೆ. ಕನ್ನಡಿಗ ಡಾ.ಪ್ರವೀಣ್ ನೆಕ್ಕಾರ್ ನೇತೃತ್ವದಲ್ಲಿ ಕೆನಡಾದ ಪ್ರತಿಷ್ಠಿತ ವಾಟರ್ ಲೂ ಯೂನಿವರ್ಸಿಟಿಯಲ್ಲಿ ಮಹತ್ವದ ಸಂಶೋಧನೆ ನಡೆಯುತ್ತಿದೆ. ಉಡುಪಿಯ ಪೆರಂಪಳ್ಳಿ ನೆಕ್ಕಾರ್ ಮನೆತನಕ್ಕೆ ಸೇರಿದ ಡಾ.ಪ್ರವೀಣ್, ಯೂನಿವರ್ಸಿಟಿಯಲ್ಲಿ ಫಾರ್ಮಸಿ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಮಹಾಮಾರಿ ಕೊರೊನಾಗೆ ಟೈಪ್ 2 ಡಯಾಬಿಟೀಸ್ ಮದ್ದಿನ ಮೇಲೆ ಸಂಶೋಧನೆ ಮಾಡುತ್ತಿದ್ದು, ಕೊವಿಡ್ ತಡೆಗೆ ಸಂಶೋಧನೆಯಲ್ಲಿ […]

ಕೊರೊನಾಗೆ ಮಧುಮೇಹಿಗಳಂದ್ರೆ ಇಷ್ಟವಂತೆ! ಆದ್ರೆ ಈ ವೈದ್ಯರು ಹೇಳೋದೇ ಬೇರೆ?
ಸಾಧು ಶ್ರೀನಾಥ್​
| Edited By: |

Updated on:May 22, 2020 | 1:28 PM

Share

ಉಡುಪಿ: ಮಹಾಮಾರಿ ಕೊರೊನಾಗೆ ಇಡೀ ವಿಶ್ವವೇ ಪತರಗುಟ್ಟಿಹೋಗಿದೆ. ಯಾವ ದೇಶವೂ ಸಹ ಕೊರೊನಾಗೆ ಔಷಧ ಕಂಡುಹಿಡಿದಿಲ್ಲ. ಆದ್ರೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಕೆನಡಾದಲ್ಲಿರುವ ಕನ್ನಡಿಗ ಹೊಸ ಭರವಸೆ ಮೂಡಿಸಿದ್ದಾರೆ.

ಕನ್ನಡಿಗ ಡಾ.ಪ್ರವೀಣ್ ನೆಕ್ಕಾರ್ ನೇತೃತ್ವದಲ್ಲಿ ಕೆನಡಾದ ಪ್ರತಿಷ್ಠಿತ ವಾಟರ್ ಲೂ ಯೂನಿವರ್ಸಿಟಿಯಲ್ಲಿ ಮಹತ್ವದ ಸಂಶೋಧನೆ ನಡೆಯುತ್ತಿದೆ. ಉಡುಪಿಯ ಪೆರಂಪಳ್ಳಿ ನೆಕ್ಕಾರ್ ಮನೆತನಕ್ಕೆ ಸೇರಿದ ಡಾ.ಪ್ರವೀಣ್, ಯೂನಿವರ್ಸಿಟಿಯಲ್ಲಿ ಫಾರ್ಮಸಿ ವಿಭಾಗದ ಮುಖ್ಯಸ್ಥರಾಗಿದ್ದಾರೆ.

ಮಹಾಮಾರಿ ಕೊರೊನಾಗೆ ಟೈಪ್ 2 ಡಯಾಬಿಟೀಸ್ ಮದ್ದಿನ ಮೇಲೆ ಸಂಶೋಧನೆ ಮಾಡುತ್ತಿದ್ದು, ಕೊವಿಡ್ ತಡೆಗೆ ಸಂಶೋಧನೆಯಲ್ಲಿ ಆರಂಭಿಕ ಯಶಸ್ಸು ಸಿಕ್ಕಿದೆ. Dpp-4 ಇನ್ಹಿಬೀಟರ್ ಇನ್ ಟೈಪ್ 2 ಡಯಾಬಿಟೀಸ್ ಮೇಲೆ ಸಂಶೋಧನೆ ಮಾಡಲಾಗುತ್ತಿದ್ದು, 6 ಪಿಹೆಚ್​ಡಿ ವಿದ್ಯಾರ್ಥಿಗಳ ತಂಡದ ಜೊತೆ ಡಾ ಪ್ರವೀಣ್ ರಾವ್ ಸಂಶೋಧನೆಯಲ್ಲಿ ತೊಡಗಿದ್ದಾರೆ.

ಮಧುಮೇಹಿಗಳು, ರಕ್ತದೊತ್ತಡ ವ್ಯತ್ಯಯ ಇರುವವರು ಕೊರೊನಾಗೆ ಬಹುಬೇಗನೆ ಬಲಿಯಾಗುತ್ತಾರೆ ಎಂಬ ಮಾತಿದೆ. ಆದ್ರೆ ಮಧುಮೇಹಿಗಳು ತೆಗೆದುಕೊಳ್ಳುವ ಮೆಡಿಸಿನ್, ಕೊರೊನಾಗೆ ದಿವ್ಯೌಷಧವಾಗಲಿದೆ ಎಂಬುದು ಕುತೂಹಲಕಾರಿಯಾಗಿದೆ.

ಔಷಧ ಕಂಡು ಹಿಡಿಯಲು 10-15 ವರ್ಷ ಆಗುತ್ತೆ: ಈ ಸಂಶೋಧನೆಗೆ ಕೆನಡಾ ಸರ್ಕಾರ ಅನುದಾನ ನೀಡುತ್ತಿದೆ. ಕೊರೊನಾಗೆ ಹೊಸ ಔಷಧವನ್ನ ಕಂಡು ಹಿಡಿಯಲು 10-15 ವರ್ಷ ತಗುಲುತ್ತದೆ. ಅದಕ್ಕೆ ನೂರು ಕೋಟಿ ಡಾಲರ್​ಗೂ ಅಧಿಕ ಖರ್ಚಾಗುತ್ತದೆ. ಈಗಾಗಲೇ ನಾವು ಕಂಡುಹಿಡಿದಿರುವ 5 ಸಾವಿರ ಔಷಧ ಫಾರ್ಮುಲಾ ಇದೆ. ಈ ಫಾರ್ಮುಲಾಗಳ ಸಂರಚನೆಯನ್ನು ಬಳಸಿಕೊಂಡು ವೈರಸ್ ವಿರುದ್ಧ ಹೋರಾಡಬೇಕು.

ಟೈಪ್ 2 ಡಯಾಬಿಟೀಸ್ ಮದ್ದಿನಲ್ಲಿ ಕೊರೊನಾದ ವ್ಯಾಪಕ ಹರಡುವಿಕೆಯನ್ನ ತಡೆಯುವ ಶಕ್ತಿ ಇದೆ. ಇದು ಈಗಾಗಲೇ ವೈದ್ಯಕೀಯ ಪ್ರಯೋಗಗಳಿಂದ ದೃಢಪಟ್ಟಿದೆ. ಇದನ್ನು ಕೊರೊನಾ ಸೋಂಕಿತರ ಮೇಲೆ ಪ್ರಯೋಗ ಮಾಡಿ ನೋಡುವುದು ಮಾತ್ರ ಬಾಕಿ ಇದೆ ಎಂದು ಸಂಶೋಧಕ ಡಾ.ಪ್ರವೀಣ್ ರಾವ್ ತಿಳಿಸಿದ್ದಾರೆ.

Published On - 12:32 pm, Fri, 22 May 20