ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ, ಜಿಲ್ಲಾ ನ್ಯಾಯಾಲಯದ ತೀರ್ಪು

ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ, ಜಿಲ್ಲಾ ನ್ಯಾಯಾಲಯದ ತೀರ್ಪು
ಉದ್ಯಮಿ ಭಾಸ್ಕರ್‌ ಶೆಟ್ಟಿ ಅವರನ್ನು ಸ್ವಾರ್ಥಕ್ಕಾಗಿ, ಅಮಾನವೀಯವಾಗಿ ಹತ್ಯೆ ಮಾಡಿದ್ದ ಅವರ ಪತ್ನಿ ರಾಜೇಶ್ವರಿ ಮತ್ತು ಪುತ್ರ ನವನೀತ್ ಶೆಟ್ಟಿ

Udupi businessman bhaskar shetty murder case: ದುಬೈನಲ್ಲಿ ಉದ್ಯಮಿಯಾಗಿದ್ದ ಭಾಸ್ಕರ್‌ ಶೆಟ್ಟಿ ಅವರನ್ನು ಸ್ವಾರ್ಥಕ್ಕಾಗಿ, ಅಮಾನವೀಯವಾಗಿ ಅವರ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಮತ್ತು ರಾಜೇಶ್ವರಿ ಗೆಳೆಯ, ಅರ್ಚಕ ನಿರಂಜನ್ ಭಟ್ ಹೋಮಕುಂಡದಲ್ಲಿ ಸುಟ್ಟು ಹತ್ಯೆ ಮಾಡಿದ್ದರು.

TV9kannada Web Team

| Edited By: sadhu srinath

Jun 08, 2021 | 2:26 PM

ಉಡುಪಿ: ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳು ದೋಷಿಗಳು ಎಂದು ಸಾಬೀತಾಗಿದ್ದು ಮೂವರಿಗೂ ಜೀವಾವಧಿ ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಜೆ.ಎನ್. ಸುಬ್ರಹ್ಮಣ್ಯ ತೀರ್ಪು ನೀಡಿದ್ದಾರೆ.

ದುಬೈನಲ್ಲಿ ಉದ್ಯಮಿಯಾಗಿದ್ದ ಭಾಸ್ಕರ್‌ ಶೆಟ್ಟಿ ಅವರನ್ನು ಸ್ವಾರ್ಥಕ್ಕಾಗಿ, ಅಮಾನವೀಯವಾಗಿ ಅವರ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಮತ್ತು ರಾಜೇಶ್ವರಿ ಗೆಳೆಯ, ಅರ್ಚಕ ನಿರಂಜನ್ ಭಟ್ ಹೋಮಕುಂಡದಲ್ಲಿ ಸುಟ್ಟು ಹತ್ಯೆ ಮಾಡಿದ್ದರು. ಈ ಮೂವರ ವಿರುದ್ಧವೂ ಆರೋಪ ಸಾಬೀತು ಆಗಿದ್ದು, ಐದನೇ ಆರೋಪಿ ಚಾಲಕ ರಾಘವೇಂದ್ರ ಖುಲಾಸೆಗೊಂಡಿದ್ದರೆ ಎ4 ಶ್ರೀನಿವಾಸ್ ಭಟ್ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.

Udupi businessman bhaskar shetty murder case

ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಸ್ವಾರ್ಥ, ಕುತಂತ್ರದಿಂದ ಅಮಾನುಷವಾಗಿ ಹತ್ಯೆಗೀಡಾಗಿದ್ದ ಉದ್ಯಮಿ ಭಾಸ್ಕರ್‌ ಶೆಟ್ಟಿ

ಅನಿವಾಸಿ ಭಾರತೀಯ ಉದ್ಯಮಿ ಭಾಸ್ಕರ್​ ಶೆಟ್ಟಿ ಅವರನ್ನು ಜುಲೈ 16, 2016 ರಂದು ಅವರ ಉದುಪಿ ಮನೆಯಲ್ಲಿ ಆರೋಪಿಗಳು ಭೀಕರವಾಗಿ ಸಾಯಿಸಿದ್ದರು. ಬಳಿಕ, ಸಾಕ್ಷ್ಯ ನಾಶ ಮಾಡಲು ಭಾಸ್ಕರ್​ ಶೆಟ್ಟಿ ಅವರ ದೇಹವನ್ನು ಹೋಮ ಕುಂಡದಲ್ಲಿ ಹಾಕಿ ಸುಟ್ಟುಹಾಕಿದ್ದರು. ಪ್ರಕರಣ ಭಾರೀ ಸಂಚಲನ ಮೂಡಿಸಿತ್ತು. ಭಾಸ್ಕರ್​ ಶೆಟ್ಟಿ ಹತ್ಯೆಗೆ ಇಡೀ ನಾಡು ಮಮ್ಮಲಮರುಗಿತ್ತು.

ಅದಾದ ಮೇಲೆ ಭಾಸ್ಕರ್​ ಶೆಟ್ಟಿ ಅವರ ಅಸ್ಥಿ ಮತ್ತು ಮೂಳೆಗಳನ್ನು ನದಿ ನೀರಿನಲ್ಲಿ ಹಾಕಿದ್ದರು. ಆದರೆ ತನಿಖೆ ಕೈಗೆತ್ತಿಗೊಂಡ ಪೊಲೀಸರು ಭಾಸ್ಕರ್​ ಶೆಟ್ಟಿ ಅವರ ಮೂಳೆಗಳನ್ನು ಸಂಗ್ರಹಿಸಿ, ಆರೋಪಿ ಪತ್ನಿ ಮತ್ತು ಪುತ್ರನ ಡಿಎನ್​ಎ ಪರೀಕ್ಷೆ ನಡೆಸಿದ್ದರು. ಅದೂ ಹತ್ಯೆ ಬಗ್ಗೆ ಖಚಿತ ಸುಳಿವು ನೀಡಿತ್ತು. ಹಿರಿಯ ವಕೀಲ, ಪಬ್ಲಿಕ್​ ಪ್ರಾಸಿಕ್ಯೂಟರ್ ಎಂ ಶಾಂತಾರಾಮ್​ ಶೆಟ್ಟಿ ಅವರು ವಾದ ಮಂಡಿಸಿದ್ದರು.

(Udupi businessman bhaskar shetty murder case 3 accused pronounced guilty by district court)

ಪತಿಯನ್ನು ಸುಟ್ಟು ಹಾಕಿದ್ದ ರಾಜೇಶ್ವರಿ ಶೆಟ್ಟಿ ವಿರುದ್ಧ ವೇಶ್ಯಾವಾಟಿಕೆ ಆರೋಪ.. ಕೇಸ್ ದಾಖಲು, ರಾಜೇಶ್ವರಿ ನಾಪತ್ತೆ!

Follow us on

Related Stories

Most Read Stories

Click on your DTH Provider to Add TV9 Kannada