AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿಯನ್ನು ಸುಟ್ಟು ಹಾಕಿದ್ದ ರಾಜೇಶ್ವರಿ ಶೆಟ್ಟಿ ವಿರುದ್ಧ ವೇಶ್ಯಾವಾಟಿಕೆ ಆರೋಪ.. ಕೇಸ್ ದಾಖಲು, ರಾಜೇಶ್ವರಿ ನಾಪತ್ತೆ!

ರಾಜೇಶ್ವರಿ ಶೆಟ್ಟಿಗೆ ಸೇರಿದ ಖಾಸಗಿ ಹೋಟೆಲ್​ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಡಿಸಿಐಬಿ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಇನ್ನು ಬಂಧಿತರಿಂದ ಮೊಬೈಲ್ ಫೋನ್ ನಗದು ವಶಕ್ಕೆ ಪಡೆಯಲಾಗಿದೆ.

ಪತಿಯನ್ನು ಸುಟ್ಟು ಹಾಕಿದ್ದ ರಾಜೇಶ್ವರಿ ಶೆಟ್ಟಿ ವಿರುದ್ಧ ವೇಶ್ಯಾವಾಟಿಕೆ ಆರೋಪ.. ಕೇಸ್ ದಾಖಲು, ರಾಜೇಶ್ವರಿ ನಾಪತ್ತೆ!
ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾದವರು
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on: Mar 18, 2021 | 12:41 PM

Share

ಉಡುಪಿ: ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ರಾಜೇಶ್ವರಿ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ. ರಾಜೇಶ್ವರಿ ಶೆಟ್ಟಿ ಮಾಲೀಕತ್ವದ ಖಾಸಗಿ ಹೋಟೆಲ್​ನಲ್ಲಿ ಈ ದಂಧೆ ನಡೆಯುತ್ತಿತ್ತು. ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಶೇಖರ್ ಶೆಟ್ಟಿ, ಜಾನ್ಸನ್ ಡಿ ಅಲ್ಮೇಡಾ, ಹರ್ಷಿತ್ ಶೆಟ್ಟಿ ಬಂಧಿತರು. ಇನ್ನು ರಾಜೇಶ್ವರಿ ಶೆಟ್ಟಿ ಸೇರಿದಂತೆ ಮೂವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ರಾಜೇಶ್ವರಿ ಶೆಟ್ಟಿಗೆ ಸೇರಿದ ಖಾಸಗಿ ಹೋಟೆಲ್​ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಡಿಸಿಐಬಿ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಇನ್ನು ಬಂಧಿತರಿಂದ ಮೊಬೈಲ್ ಫೋನ್ ನಗದು ವಶಕ್ಕೆ ಪಡೆದಿದ್ದು ಈ ಸಂಬಂಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಯಾರು ಈ ರಾಜೇಶ್ವರಿ ಶೆಟ್ಟಿ? ಕಳೆದ ನಾಲ್ಕೈದು ವರ್ಷಗಳ ಹಿಂದೆ ಇಡೀ ಮನು ಕುಲವನ್ನೇ ಬೆಚ್ಚಿಬೀಳಿಸಿದ್ದ ಕೊಲೆ ಕೇಸ್​ನ ಆರೋಪಿ ರಾಜೇಶ್ವರಿ ಶೆಟ್ಟಿ. ಹಣದ ಆಸೆಗಾಗಿ ತನ್ನ ಪತಿಯನ್ನೇ ಭೀಕರವಾಗಿ ಕೊಂದಿದ್ದಳು. ನಾಲ್ಕೈದು ವರ್ಷಗಳ ಹಿಂದೆ ದುಬೈನಲ್ಲಿ ಉದ್ಯಮಿಯಾಗಿದ್ದ, ಉಡುಪಿ ಮೂಲದ ಭಾಸ್ಕರ ಶೆಟ್ಟಿಯ ಹೋಮಕುಂಡ ಹತ್ಯೆ ಪ್ರಕರಣ ಭಾರಿ ಸಂಚಲನ ಮೂಡಿಸಿತ್ತು. ಈ ಕೇಸ್​ನ ಪ್ರಮುಖ ಆರೋಪಿಯಾಗಿದ್ದ ರಾಜೇಶ್ವರಿ ಶೆಟ್ಟಿ ಈಗ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾಳೆ.

ಏನಿದು ಹೋಮಕುಂಡ ಹತ್ಯೆ ಪ್ರಕರಣ? ನಾಲ್ಕೈದು ವರ್ಷಗಳ ಹಿಂದೆ ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಎಂಬುವವರನ್ನು ಹೋಮಕುಂಡದಲ್ಲಿ ಹಾಕಿ ಸುಟ್ಟು ಕೊಲೆ ಮಾಡಲಾಗಿತ್ತು. ಸ್ವತಃ ತನ್ನ ಪತ್ನಿ ರಾಜೇಶ್ವರಿ ಶೆಟ್ಟಿ ಮತ್ತು ಮಗ ನವನೀತ್ ಭಾಸ್ಕರ ಶೆಟ್ಟಿಯವರನ್ನು ಕೊಲೆಗೆ ಸ್ಕೆಚ್ ಹಾಕಿದ್ದರು. ಭಾಸ್ಕರ ಶೆಟ್ಟಿಯ ಮನೆಯ ಪುರೋಹಿತ ನಿರಂಜನ್ ಭಟ್​ಗೆ ಹಾಗೂ ರಾಜೇಶ್ವರಿ ಶೆಟ್ಟಿ ನಡುವೆ ಸಂಬಂಧವಿತ್ತು ಎಂದು ಭಾಸ್ಕರ್​ಗೆ ಗೊತ್ತಿತ್ತು.

ಹೀಗಾಗಿ ಆತ ತನ್ನ ಆಸ್ತಿಯನ್ನು ತನ್ನ ಸಂಬಂಧಿಕರ ಹೆಸರಲ್ಲಿ ವಿಲ್ ಬರೆದಿದ್ದರು. ನನ್ನ ಹೆಂಡತಿ ಮತ್ತು ಮಗನಿಗೆ ಆಸ್ತಿಯಲ್ಲಿ ಯಾವುದೇ ಪಾಲು ಸಿಗಬಾರದು. ನನ್ನ ತಾಯಿ ಹಾಗೂ ಸಹೋದರ, ಸಹೋದರಿಯರಿಗೆ ಆಸ್ತಿ ಸೇರಬೇಕು. ನಾನು ಅಕಾಲಿಕ ಮರಣಹೊಂದಿದ ಬಳಿಕ ವಿಲ್ ಜಾರಿಗೆ ಬರಲಿದೆ ಎಂದು ವಿಲ್​ನಲ್ಲಿ ಉಲ್ಲೇಖಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಪತಿ-ಪತ್ನಿ ನಡುವೆ ಜಗಳವಾಗಿತ್ತು. ಆಸ್ತಿಯನ್ನು ಮಗನ ಹೆಸರಿಗೂ ಬರೆಯದೆ, ಪತ್ನಿಯ ಹೆಸರಿಗೂ ಬರೆಯದೆ ಹೀಗೆ ಏಕೆ ಮಾಡಿದಿರಿ ಎಂದು ಕೆಂಡಾಮಂಡಲಳಾಗಿದ್ದಳು. ಹೀಗಾಗಿ ಭಾಸ್ಕರ್ ಹೋಟೆಲ್​ವೊಂದರಲ್ಲಿ ಉಳಿದುಕೊಂಡಿದ್ದಾಗ ವಿಲ್ ಬರೆದ 13 ದಿನಗಳ ನಂತರ ಭಾಸ್ಕರ್ ಕೊಲೆಯಾಗಿದ್ದರು.

ಭಾಸ್ಕರ್ ಪುತ್ರ ನವನೀತ್ ತನ್ನ ಅಪ್ಪನೇ ಕೊಡಿಸಿದ್ದ ಐಫೋನ್​ನಲ್ಲೇ ಗೂಗಲ್ ಸಹಾಯದಿಂದ ಕೊಲೆ ಮಾಡುವುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದ. ಹೇಗೆ ಕೊಲೆ ಮಾಡುವುದು ಹಾಗೂ ಅದನ್ನು ಹೇಗೆ ಮುಚ್ಚಿ ಹಾಕಬೇಕು ಎಂಬುದರ ಬಗ್ಗೆ ತಿಳಿದುಕೊಂಡಿದ್ದ! ಬಳಿಕ ತಾಯಿ-ಮಗ ಸೇರಿ ಭಾಸ್ಕರ್ ಕೊಲೆಗೆ ಪುರೋಹಿತನ ಮೂಲಕ ಮುಹೂರ್ತ ಇಟ್ಟಿದ್ದರು. ಪುರೋಹಿತ ನಿರಂಜನ್ ಭಟ್ ಕೂಡ ಈ ಕೊಲೆಯಲ್ಲಿ ಶಾಮೀಲು ಆಗಿದ್ದ. ಭಾಸ್ಕರ್​ ಅವರನ್ನು ಕೊಲೆ ಮಾಡಿ ಹೋಮಕುಂಡಕ್ಕೆ ಶವ ಹಾಕಿ ಸುಟ್ಟು ಭಸ್ಮ ಮಾಡಲಾಗಿತ್ತು. ಬಳಿಕ ಆರೋಪಿಗಳು ಸಿಕ್ಕಿಬಿದ್ದಿದ್ದರು. ಪ್ರಕರಣದಲ್ಲಿ ಬೇಲ್ ಪಡೆದು ರಾಜೇಶ್ವರಿ ಶೆಟ್ಟಿ ಹೊರಬಂದಿದ್ದಳು.

ಇದನ್ನೂ ಓದಿ: ಚಾಕುವಿನಿಂದ ಚುಚ್ಚಿ ಚುಚ್ಚಿ.. ಪತ್ನಿಯನ್ನು ಕೊಂದ ಪತಿರಾಯ ನೇಣಿಗೆ ಶರಣು

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ