Budget 2021: ವಿದ್ಯುತ್ ಹಂಚಿಕೆಗೆ ಹೆಚ್ಚಿನ ಮೂಲಸೌಕರ್ಯ ಒದಗಿಸಬೇಕಿದೆ ಎಂದ ತಜ್ಞರು
Union Budget 2021: ನವೀಕರಿಸಬಹುದಾದ ವಿದ್ಯುತ್ ಯೋಜನೆಗೆ ಸರ್ಕಾರ ಒತ್ತು ನೀಡಬೇಕು. ಇದಕ್ಕಾಗಿ ದೀರ್ಘಾವಧಿ ಪಾಲಿಸಿಗಳನ್ನು ಸರ್ಕಾರ ಜಾರಿಗೊಳಿಸಲು ಒತ್ತು ನೀಡಬೇಕು ಎಂದು ಐಸಿಆರ್ಎ ತಜ್ಞರು ಹೇಳಿದ್ದಾರೆ.

ಈ ಬಾರಿಯ ಬಜೆಟ್ನಲ್ಲಿ ವಿದ್ಯುತ್ ಹಂಚಿಕೆಗೆ ಹೆಚ್ಚಿನ ಮೂಲಸೌಕರ್ಯ ಒದಗಿಸಲು ಕೇಂದ್ರ ಸರ್ಕಾರ ಒತ್ತು ನೀಡುವ ಅಗತ್ಯ ಇದೆ ಎಂದು ಈ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಐಸಿಆರ್ಎ, ಈ ಬಾರಿಯ ಬಜೆಟ್ನಲ್ಲಿ ವಿದ್ಯುತ್ ಹಂಚಿಕೆಗೆ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಅಗತ್ಯವಿದೆ. ಇದಕ್ಕಾಗಿ ಹೆಚ್ಚಿನ ಅನುದಾನ ನೀಡಬೇಕು. ಈ ಮೂಲಕ ವಿದ್ಯುತ್ ವಿತರಣಾ ವಿಭಾಗದ ಆರ್ಥಿಕತೆಯನ್ನು ಸುಧಾರಿಸಬೇಕಿದೆ. ನವೀಕರಿಸಬಹುದಾದ ವಿದ್ಯುತ್ ಸಾಮರ್ಥ್ಯದ ಗುರಿಗಳನ್ನು ಸಾಧಿಸುವ ಉದ್ದೇಶದಿಂದ ನಿಧಿ ಲಭ್ಯತೆಯನ್ನು ಹೆಚ್ಚಿಸಬೇಕು ಮತ್ತು ಭೂಸ್ವಾಧೀನ ಸವಾಲುಗಳನ್ನು ಸರಾಗಗೊಳಿಸುವ ಸಲುವಾಗಿ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮನೆಯ ಮೇಲೆ ಸೋಲಾರ್ ಅಳವಡಿಸುವುದಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದೆ.
ನವೀಕರಿಸಬಹುದಾದ ವಿದ್ಯುತ್ ಯೋಜನೆಯತ್ತ ಸರ್ಕಾರ ಗಮನಹರಿಸಬೇಕಿದೆ. ಇದಕ್ಕಾಗಿ ದೀರ್ಘಾವಧಿ ಪಾಲಿಸಿಗಳನ್ನು ಸರ್ಕಾರ ಜಾರಿಗೊಳಿಸಲು ಒತ್ತು ನೀಡಬೇಕು. ಇದರಿಂದ ವಿದ್ಯುತ್ ಕೇಂದ್ರದ ಅಭಿವೃದ್ಧ ಸಾಧ್ಯ ಎಂದು ಐಸಿಆರ್ಎ ತಜ್ಞರು ಒತ್ತಾಯಿಸಿದ್ದಾರೆ.
ವಿದ್ಯುತ್ ಕ್ಷೇತ್ರ ನಿಧಾನವಾಗಿ ಕೊರೊನಾದಿಂದ ಚೇತರಿಕೆ ಕಾಣುತ್ತಿದೆ. ಹೀಗಾಗಿ, 2021-22ನೇ ಬಜೆಟ್ನಲ್ಲಿ ಈಗಿರುವ ಸಮಸ್ಯೆಗಳನ್ನು ಬಗೆಹರಿಸಿ, ಹೊಸ ರೀತಿಯ ಯೋಜನೆಗೆ ಆದ್ಯತೆ ನೀಡುವಂತೆ ಆಗಬೇಕು. ಅದರಲ್ಲೂ, ವಿತರಣೆ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ಸಿಗಬೇಕಿದೆ. ವಿದ್ಯುತ್ ಹಂಚಿಕೆಗೆ ಬಲ ಸಿಕ್ಕರೆ, ಪೂರೈಕೆ ಪ್ರಮಾಣ ಹೆಚ್ಚಲಿದೆ. ಇದರಿಂದ ನಾವು ನಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
Budget 2021 | ಸುಲಭದ ಗೃಹ ಸಾಲ, ತೆರಿಗೆ ವಿನಾಯ್ತಿ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ವಲಯ