ಅಕಾಲಿಕ ಮಳೆ ಮತ್ತು ಗಾಳಿ ಕೋಲಾರ ಜಿಲ್ಲೆಯ ಮಾವು ಬೆಳೆಗಾರರ ಪಾಲಿಗೂ ಕಂಟಕವಾಗಿ ಪರಿಣಮಿಸಿದೆ

ಅಕಾಲಿಕ ಮಳೆ ಮತ್ತು ಗಾಳಿ ಕೋಲಾರ ಜಿಲ್ಲೆಯ ಮಾವು ಬೆಳೆಗಾರರ ಪಾಲಿಗೂ ಕಂಟಕವಾಗಿ ಪರಿಣಮಿಸಿದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 10, 2022 | 9:52 PM

ನಮಗೆಲ್ಲ ಗೊತ್ತಿರುವ ಹಾಗೆ ಕೋಲಾರ ಜಿಲ್ಲೆ ಮಾವಿನ ಕಣಜ. ಶ್ರೀನಿವಾಸಪುರ ತಾಲ್ಲೂಕಿನಲ್ಲಂತೂ ಬೇಸಿಗೆ ದಿನಗಳಲ್ಲಿ ನಿಮಗೆ ಮಾವು ಬಿಟ್ಟರೆ ಬೇರೇನೂ ಕಾಣದು. ಮಾವಿನ ಫಸಲು ಬಂದಾಗ ಮಾವು ಬೆಳೆಗಾರರು ಜಗವನ್ನೇ ಗೆದ್ದಂತೆ ಬೀಗುತ್ತಾರೆ. ಈ ವರ್ಷದ ಫಸಲು ಮೊನ್ನೆಯವರೆಗೆ ಚೆನ್ನಾಗಿತ್ತು.

Kolar: ಅಕಾಲಿಕ ಮಳೆಯನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅವಕಾಳಿ ಮಳೆ ಅನ್ನುತ್ತಾರೆ. ಹೇಗೆ ಕರೆದರೂ ಅದು ಮಾಡೋದು ಮಾತ್ರ ಹಾಳು. ಸೋಮವಾರ ನಾವು ಮೈಸೂರು ಕೆ ಆರ್ ಪೇಟೆ (KR Pet) ತಾಲ್ಲೂಕಿನ ಅಂಚೇನಹಳ್ಳಿಯಲ್ಲಿ ಅರೆಕಾಲಿಕ ಮಳೆಯಿಂದ ಒಬ್ಬ ವೃದ್ಧ ರೈತ ಮಹಿಳೆ ಅನುಭವಿಸಿದ ಹಾನಿ ಮತ್ತು ಅವರು ಪಡುತ್ತಿದ್ದ ಯಾತನೆಯನ್ನು ತೋರಿಸಿದೆವು. ಮಹಿಳೆ ಪರಿಹಾರ ಸಿಗದ ಕಾರಣ ಊಟ ನೀರು ಬಿಟ್ಟು ಕೂತಾಗ ಕೆ ಅರ್ ಪೇಟೆಯ ತಹಸೀಲ್ದಾರ ಎಮ್ ವಿ ರೂಪಾ ಸ್ಥಳಕ್ಕೆ ಧಾವಿಸಿ ಮಹಿಳೆಗೆ ಊಟ ಮಾಡಿಸಿ ಪರಿಹಾರ ಒದಗಿಸುವ ಭರವಸೆ ನೀಡಿದ ಮನಮಿಡಿಯುವ ವಿಡಿಯೋ ಅದು. ಇಲ್ಲಿ ನೀವು ನೋಡುತ್ತಿರುವ ವಿಡಿಯೋ ಕೋಲಾರ ಜಿಲ್ಲೆಯ ಶ್ರೀನಿವಾಸಪುರ (Srinivaspura) ತಾಲ್ಲೂಕಿನ ಯಲ್ದೂರು (Yalduru) ಮತ್ತು ರೋಣೂರು (Ronuru) ಗ್ರಾಮಗಳಲ್ಲಿ ಅಕಾಲಿಕ ಮಳೆ ಮತ್ತು ಗಾಳಿಯಿಂದ ಮಾವು ಬೆಳೆಗಾರರು ಅನುಭವಿಸಿರುವ ನಷ್ಟವನ್ನು ಸಾರಿ ಹೇಳುತ್ತದೆ.

ನಮಗೆಲ್ಲ ಗೊತ್ತಿರುವ ಹಾಗೆ ಕೋಲಾರ ಜಿಲ್ಲೆ ಮಾವಿನ ಕಣಜ. ಶ್ರೀನಿವಾಸಪುರ ತಾಲ್ಲೂಕಿನಲ್ಲಂತೂ ಬೇಸಿಗೆ ದಿನಗಳಲ್ಲಿ ನಿಮಗೆ ಮಾವು ಬಿಟ್ಟರೆ ಬೇರೇನೂ ಕಾಣದು. ಮಾವಿನ ಫಸಲು ಬಂದಾಗ ಮಾವು ಬೆಳೆಗಾರರು ಜಗವನ್ನೇ ಗೆದ್ದಂತೆ ಬೀಗುತ್ತಾರೆ. ಈ ವರ್ಷದ ಫಸಲು ಮೊನ್ನೆಯವರೆಗೆ ಚೆನ್ನಾಗಿತ್ತು. ಅದರೆ ಗಾಳಿ ಮತ್ತು ಮಳೆ ಬೆಳೆಗಾರರ ಪಾಲಿಗೆ ಕಂಟಕವಾಗಿವೆ. ಮಾವಿನ ಕಾಯಿ ಮರದಿಂದ ನೆಲಕ್ಕೆ ಉದುರಿವೆ, ಮರಗಳು ಉರುಳಿ ಬಿದ್ದಿವೆ, ಕೆಲ ಕಡೆಗಳಲ್ಲಿ ಕೊಂಬೆಗಳು ಮುರಿದಿವೆ. ರೈತರು ಲಕ್ಷಾಂತರ ರೂಪಾಯಿಗಳ ನಷ್ಟ ಅನುಭವಿಸಿದ್ದಾರೆ.

ಮಾವಿನ ಮರಗಳ ಜೊತೆ ತೆಂಗಿನ ಮರಗಳು ಸಹ ಬುಡಸಮೇತ ಕಿತ್ತು ಬಂದಿರುವದನ್ನು ನೀವು ನೋಡಬಹುದು. ಅದಕ್ಕೇ ನಾವು ಹೇಳಿದ್ದು, ಅಕಾಲಿಕ ಮಳೆ ರೈತರಿಗೆ ಹಾನಿಯುಂಟು ಮಾಡಲು ಮಾತ್ರ ಅಗುತ್ತದೆ, ಬೇರೇನೂ ಇಲ್ಲ.

ಇದನ್ನೂ ಓದಿ:  ಅಂಚೇನಹಳ್ಳಿ ಮಹಿಳೆಯ ಕಷ್ಟ ಕಂಡು ಮಮ್ಮಲ ಮರುಗಿದ ತಹಸೀಲ್ದಾರ್ ರೂಪಾ ಕೂಡಲೇ ನೆರವಿಗೆ ಧಾವಿಸಿದರು