Pulitzer Prize 2022 : ಡ್ಯಾನಿಷ್ ಸಿದ್ದಿಕಿಗೆ ಎರಡನೇ ಬಾರಿ ಪುಲಿಟ್ಝರ್ ಪ್ರಶಸ್ತಿ

Danish Siddiqui ಭಾರತೀಯ ಛಾಯಾಗ್ರಹಕರಾದ ಡ್ಯಾನಿಷ್ ಸಿದ್ದಿಕಿ ಸೇರಿದಂತೆ ಅದನ್ ಅಬೀದಿ, ಸನ್ನಾ ಇರ್ಷಾದ್ ಮಟ್ಟೂ, ಅಮಿತ್ ದೇವ್ ‘ಫೀಚರ್ ಫೋಟೋಗ್ರಫಿ’ ವಿಭಾಗದಲ್ಲಿ 2022ನೇ ಸಾಲಿನ ಪುಲಿಟ್ಝರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

Pulitzer Prize 2022 : ಡ್ಯಾನಿಷ್ ಸಿದ್ದಿಕಿಗೆ ಎರಡನೇ ಬಾರಿ ಪುಲಿಟ್ಝರ್ ಪ್ರಶಸ್ತಿ
ಎರಡನೇ ಬಾರಿ ಪುಲಿಟ್ಝರ್ ಪ್ರಶಸ್ತಿ ಪಡೆದ ಛಾಯಾಗ್ರಾಹಕ ಡ್ಯಾನಿಶ್ ಸಿದ್ದಿಕಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 10, 2022 | 12:08 PM

Pulitzer Prize 2022 :  ಪ್ರಸಕ್ತ ಸಾಲಿನ ಪ್ರತಿಷ್ಠಿತ ಪುಲಿಟ್ಝರ್ ಪ್ರಶಸ್ತಿ ಘೋಷಿಸಲಾಗಿದೆ. ಅಫ್ಗಾನಿಸ್ತಾನ ಯುದ್ಧದ ಸಂದರ್ಭದಲ್ಲಿ ಹತ್ಯೆಗೀಡಾಗಿದ್ದ ರಾಯಟರ್ಸ್ ಸುದ್ದಿ ಸಂಸ್ಥೆಯ ಭಾರತೀಯ ಛಾಯಾಗ್ರಾಹಕ ಡ್ಯಾನಿಷ್ ಸಿದ್ದಿಕಿ ಸೇರಿದಂತೆ ಅವರ ಸಹೋದ್ಯೋಗಿ ಛಾಯಾಗ್ರಹಕರಾದ ಅದನ್ ಅಬೀದಿ, ಸನ್ನಾ ಇರ್ಷಾದ್ ಮಟ್ಟೂ, ಅಮಿತ್ ದೇವ್ ‘ಫೀಚರ್ ಫೋಟೋಗ್ರಫಿ’ ವಿಭಾಗದಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದನ್ ಅಬೀದಿ, ಸನ್ನಾ ಇರ್ಷಾದ್ ಮಟ್ಟು, ಅಮಿತ್ ದೇವ ಅವರುಗಳು ಕೊವಿಡ್ ಸಂದರ್ಭದ ಭಾರತವನ್ನು ತಮ್ಮ ಕ್ಯಾಮೆರಾಗಳಲ್ಲಿ ಹಿಡಿದಿಟ್ಟ ರೀತಿ ಅತ್ಯಂತ ಮಾರ್ಮಿಕವಾಗಿದ್ದು ಅನ್ಯೋನ್ಯ ಭಾವ ಮತ್ತು ವಿನಾಶದ ಭೀತಿಯನ್ನು ಹಿಡಿದಿಟ್ಟ ಬಗೆ ಯಾರನ್ನೂ ಪ್ರಭಾವಿಸದೆ ಇರಲಾರವು. ಈ ಛಾಯಾಚಿತ್ರಗಳ ಒಳನೋಟ, ಆಳಅರ್ಥಗಳು ಗಂಭೀರಭಾವವನ್ನು ಹುಟ್ಟುಹಾಕುತ್ತವೆ ಎಂದು ಪುಲಿಟ್ಝರ್ ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ.

2021ರ ಜುಲೈನಲ್ಲಿ ಅಫ್ಗಾನಿಸ್ತಾನ್ ಮತ್ತು ತಾಲಿಬಾನಿಗಳ ನಡುವೆ ನಡೆಯುತ್ತಿದ್ದ ಯುದ್ಧದ ಸಂದರ್ಭದಲ್ಲಿ ಡ್ಯಾನಿಷ್ ಸಿದ್ದಿಕಿ ಆ ಪ್ರದೇಶಗಳಿಗೆ ತೆರಳಿದ್ದರು. ಮುಂಬೈ ಮೂಲದ ಸಿದ್ದಿಕಿ ಕಂದಾಹಾರ್ ನಲ್ಲಿ ನಡೆದ ತೀವ್ರ ಸಂಘರ್ಷದ ಮಧ್ಯೆ ವರದಿ ಮಾಡುವಾಗ ಹತ್ಯೆಗೀಡಾದ್ದನ್ನು ಇಲ್ಲಿ ಸ್ಮರಿಸಬಹುದು. ಇವರಿಗೆ 2018ರಲ್ಲಿಯೂ ಫೀಚರ್ ಫೋಟೋಗ್ರಫಿ ವಿಭಾಗದಲ್ಲಿ ಪುಲಿಟ್ಝರ್ ಪ್ರಶಸ್ತಿ ಮೊದಲ ಬಾರಿಗೆ ದೊರೆತಿತ್ತು.

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಇವರು 2007ರಲ್ಲಿ ಎಜೆಕೆ ಸಮೂಹ ಸಂವಹನ ಸಂಶೋಧನಾ ಕೇಂದ್ರದಿಂದ ಸಮೂಹ ಸಂವಹನದಲ್ಲಿಯೂ ಪದವಿ ಪಡೆದಿದ್ದರು. ಎಲೆಕ್ಟ್ರಾನಿಕ್ ಮೀಡಿಯಾ ಮೂಲಕ ವರದಿಗಾರರಾಗಿ ವೃತ್ತಿಜೀವನ ಪ್ರಾರಂಭಿಸಿದ ಇವರು 2010ರಲ್ಲಿ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಫೋಟೋ ಜರ್ನಲಿಸ್ಟ್ ಆಗಿ ಸೇರ್ಪಡೆಗೊಂಡದ್ದನ್ನು ಇಲ್ಲಿ ನೆನೆಯಬಹುದು.

ಇದನ್ನೂ ಓದಿ : Danish Siddiqui ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸ್ಮಶಾನದಲ್ಲಿ ಡ್ಯಾನಿಶ್ ಸಿದ್ಧಿಕಿ ಅಂತ್ಯ ಸಂಸ್ಕಾರ

ಉಕ್ರೇನ್-ರಷ್ಯಾ ಯುದ್ದ ಸಂದರ್ಭವನ್ನು ಅತ್ಯಂತ ವಸ್ತುನಿಷ್ಠವಾಗಿ ವರದಿ ಮಾಡುವಲ್ಲಿ ಉಕ್ರೇನ್ ಪತ್ರಕರ್ತರು ಅತ್ಯಂತ ತಾಳ್ಮೆ, ಧೈರ್ಯವನ್ನು ಮೈಗೂಡಿಸಿಕೊಂಡು ವೃತ್ತಿಪರವಾಗಿ ಕಾರ್ಯನಿರ್ವಹಿಸಿರುವ ಹಿನ್ನಲೆಯಲ್ಲಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉಕ್ರೇನ್ ಪತ್ರಕರ್ತರಿಗೆ ವಿಶೇಷ ಪ್ರಶಸ್ತಿ ನೀಡಲಾಗುವುದು ಎಂದು ಸಮಿತಿಯ ಮರ್ಜೋರ್ ಮಿಲ್ಲರ್ ತಿಳಿಸಿದ್ದಾರೆ. ಸಾರ್ವಜನಿಕ ಸೇವಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಾಷಿಂಗ್ಟನ್ ಪೋಸ್ಟ್​ಗೆ ಪುಲಿಟ್ಝರ್ ಪ್ರಶಸ್ತಿ ಲಭಿಸಿದೆ.

ಸುದ್ದಿ ವಿಭಾಗದಲ್ಲಿ ನ್ಯೂಯಾರ್ಕ್ ಟೈಮ್ಸ್​ ಮೂರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಮಧ್ಯೆಪ್ರಾಚ್ಯದಲ್ಲಿ ಅಮೆರಿಕ ನಡೆಸಿದ ದಾಳಿ ಸಂದರ್ಭದಲ್ಲಿ ಸಂಭವಿಸಿದ ಸಾವುನೋವು ಕುರಿತಾದ ವರದಿಗಾಗಿ ನ್ಯೂಯಾರ್ಕ್​ ಟೈಮ್ಸ್​ ಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಕೊಡಲಾಗಿದೆ.

ಇದನ್ನೂ ಓದಿ : Danish Siddiqui: ಪತ್ರಕರ್ತ ಡ್ಯಾನಿಶ್ ಸಿದ್ಧಿಕಿಯನ್ನು ಬೇಕೆಂದೇ ಕ್ರೂರವಾಗಿ ಕೊಂದಿದ್ದರು ತಾಲಿಬಾನ್ ಉಗ್ರರು; ಶಾಕಿಂಗ್ ಮಾಹಿತಿ ಬಯಲು

Published On - 11:57 am, Tue, 10 May 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ