Kannada News Latest news UPSC Recruitment 2021: ಕೇಂದ್ರ ಲೋಕಸೇವಾ ಆಯೋಗದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಹೀಗೆ ಅಪ್ಲೈ ಮಾಡಿ
UPSC Recruitment 2021: ಕೇಂದ್ರ ಲೋಕಸೇವಾ ಆಯೋಗದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಹೀಗೆ ಅಪ್ಲೈ ಮಾಡಿ
UPSC Recruitment 2021: ಕೇಂದ್ರ ಲೋಕಸೇವಾ ಆಯೋಗದ ಹುದ್ದೆ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಮಾರ್ಚ್ 18ರ ಮೊದಲು ಅರ್ಜಿ ತುಂಬಬಹುದಾಗಿದೆ. ಅಪ್ಲಿಕೇಶನ್ ಫಾರ್ಮ್ಗಳು UPSCಯ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿದೆ.
ದೆಹಲಿ: ಕೇಂದ್ರ ಲೋಕಸೇವಾ ಆಯೋಗವು (Union Public Service Commission – UPSC) ಕೇಂದ್ರೀಯ ತನಿಖಾ ದಳದ (Central Bureau of Investigation – CBI) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ದೆಹಲಿ ಸರ್ಕಾರದ ವಿಧಿವಿಜ್ಞಾನ ಪ್ರಯೋಗಾಲಯ, ಕೃಷಿ ಸಚಿವಾಲಯ ಹಾಗೂ ಇತರ ವಿಭಾಗಗಳಿಗೆ ಮತ್ತು ಸಚಿವಾಲಯಗಳಿಗೂ ಈ ಬಾರಿ ಉದ್ಯೋಗಾವಕಾಶ ಲಭ್ಯವಿದೆ. ಕೆಲಸಕ್ಕೆ ಸೇರಲು ಬೇಕಾದ ಅಪ್ಲಿಕೇಶನ್ ಫಾರ್ಮ್ಗಳು UPSCಯ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿದೆ. ಕೇಂದ್ರ ಲೋಕಸೇವಾ ಆಯೋಗದ ಹುದ್ದೆ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಮಾರ್ಚ್ 18ರ ಮೊದಲು ಅರ್ಜಿ ತುಂಬಬಹುದಾಗಿದೆ.
ಯಾವೆಲ್ಲಾ ಹುದ್ದೆಗಳಿಗೆ ಅವಕಾಶವಿದೆ ಎಂಬ ವಿವರ ಇಲ್ಲಿದೆ:
ಆರ್ಥಿಕ ಅಧಿಕಾರಿ: ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ, ಕೃಷಿ ಇಲಾಖೆ, ಸಹಕಾರ ಮತ್ತು ರೈತ ಕಲ್ಯಾಣ, ಕೃಷಿ ಮತ್ತು ರೈತ ಸಚಿವಾಲಯಗಳಲ್ಲಿ ಆರ್ಥಿಕ ಅಧಿಕಾರಿ ಹುದ್ದೆಗೆ ಅವಕಾಶವಿದೆ. ಒಬ್ಬ ಅಭ್ಯರ್ಥಿ ಬೇಕಾಗಿದ್ದಾರೆ.
ಕಾರ್ಮಿಕರ ರಾಜ್ಯ ವಿಮಾ ಸಂಘ, ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯಲ್ಲಿ 10 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (Civil) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ ಜಲ ಮಂಡಳಿ, ಜಲ ಸಂಪನ್ಮೂಲ ಇಲಾಖೆ, ನದಿ ಅಭಿವೃದ್ಧಿ ಮತ್ತು ಗಂಗಾನದಿ ಪುನಶ್ಚೇತನ ಮಂಡಳಿ, ಜಲಶಕ್ತಿ ಸಚಿವಾಲಯದಲ್ಲಿ ಒಂದು ಪ್ರೋಗ್ರಾಮರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರೀಯ ತನಿಖಾ ದಳ, ಸಿಬ್ಬಂದಿ ಮತ್ತು ತರಬೇತಿ ವಿಭಾಗ, ಸಿಬ್ಬಂದಿ ಸಚಿವಾಲಯ, ಸಾರ್ವಜನಿಕ ಸಮಸ್ಯೆಗಳು ಮತ್ತು ಮಾಸಾಶನ ವಿಭಾಗದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗೆ 43 ಅಭ್ಯರ್ಥಿಗಳು ಬೇಕಾಗಿದ್ದಾರೆ.
ಕೇಂದ್ರೀಯ ತನಿಖಾ ದಳ, ಸಿಬ್ಬಂದಿ ಮತ್ತು ತರಬೇತಿ ವಿಭಾಗ, ಸಿಬ್ಬಂದಿ ಸಚಿವಾಲಯ, ಸಾರ್ವಜನಿಕ ಸಮಸ್ಯೆಗಳು ಮತ್ತು ಮಾಸಾಶನ ವಿಭಾಗದಲ್ಲಿ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗೆ 26 ಅಭ್ಯರ್ಥಿಗಳು ಬೇಕಾಗಿದ್ದಾರೆ
ವಿಧಿ ವಿಜ್ಞಾನ ಪ್ರಯೋಗಾಲಯ, ಗೃಹ ಇಲಾಖೆ, ದೆಹಲಿ ಸರ್ಕಾರದ NCTಗೆ 1 ಹಿರಿಯ ವಿಜ್ಞಾನ ಅಧಿಕಾರಿ (Ballistics) ಹುದ್ದೆ ಅವಕಾಶವಿದೆ.
ವಿಧಿ ವಿಜ್ಞಾನ ಪ್ರಯೋಗಾಲಯ, ಗೃಹ ಇಲಾಖೆ, ದೆಹಲಿ ಸರ್ಕಾರದ NCTಗೆ ತಲಾ 2 ಹಿರಿಯ ವಿಜ್ಞಾನ ಅಧಿಕಾರಿ (Biology, Chemistry, Documents) ಹುದ್ದೆಗಳಿಗೆ ಅವಕಾಶವಿದೆ. Biology, Chemistry, Documents ವಿಭಾಗದಲ್ಲಿ ತಲಾ 2 ಹಿರಿಯ ವಿಜ್ಞಾನ ಅಧಿಕಾರಿ ಹುದ್ದೆಗಳಿಗೆ ಅವಕಾಶವಿದೆ.
ವಿಧಿ ವಿಜ್ಞಾನ ಪ್ರಯೋಗಾಲಯ, ಗೃಹ ಇಲಾಖೆ, ದೆಹಲಿ ಸರ್ಕಾರದ NCTಗೆ 1 ಹಿರಿಯ ವಿಜ್ಞಾನ ಅಧಿಕಾರಿ (Lie-Detection) ಹುದ್ದೆ ಅವಕಾಶವಿದೆ.