ವಾಹನ ಸಂಚಾರ ಸ್ಥಗಿತ, ರಾಷ್ಟ್ರೀಯ ಹೆದ್ದಾರಿ 169A ರಂಜದ ಕಟ್ಟೆ ಸೇತುವೆಯಲ್ಲಿ ಬಿರುಕು

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ಹಾಗೂ ಆಗುಂಬೆ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169A ಯಲ್ಲಿರುವ ರಂಜದ ಕಟ್ಟೆ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಸೇತುವೆಯ ತಡೆಗೋಡೆ ಹಾಗೂ ರಸ್ತೆಯ ಮೇಲೆ ಬಿರುಕು ಕಾಣಿಸಿಕೊಂಡು ಹಿನ್ನೆಲೆಯಲ್ಲಿ ಪೊಲೀಸರು ಬ್ಯಾರಿಕೇಡ್​ಗಳನ್ನು ಅಳವಡಿಸಿದ್ದಾರೆ. ಜೊತೆಗೆ, ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ. ಹಾಗಾಗಿ, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ನೀಡಲಾಗಿದೆ. ತೀರ್ಥಹಳ್ಳಿಯಿಂದ ಸಾಗರ ರಸ್ತೆಯ ಬೊಬ್ಬಿ ಮಾರ್ಗವಾಗಿ ಬಿಳಾಲುಕೊಪ್ಪದ ಸಮೀಪ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ವಾಹನ ಸಂಚಾರ ಸ್ಥಗಿತ, ರಾಷ್ಟ್ರೀಯ ಹೆದ್ದಾರಿ 169A ರಂಜದ ಕಟ್ಟೆ ಸೇತುವೆಯಲ್ಲಿ ಬಿರುಕು
Edited By: ಸಾಧು ಶ್ರೀನಾಥ್​

Updated on: Sep 24, 2020 | 11:58 AM

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ಹಾಗೂ ಆಗುಂಬೆ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169A ಯಲ್ಲಿರುವ ರಂಜದ ಕಟ್ಟೆ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.

ಸೇತುವೆಯ ತಡೆಗೋಡೆ ಹಾಗೂ ರಸ್ತೆಯ ಮೇಲೆ ಬಿರುಕು ಕಾಣಿಸಿಕೊಂಡು ಹಿನ್ನೆಲೆಯಲ್ಲಿ ಪೊಲೀಸರು ಬ್ಯಾರಿಕೇಡ್​ಗಳನ್ನು ಅಳವಡಿಸಿದ್ದಾರೆ. ಜೊತೆಗೆ, ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ.

ಹಾಗಾಗಿ, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ನೀಡಲಾಗಿದೆ. ತೀರ್ಥಹಳ್ಳಿಯಿಂದ ಸಾಗರ ರಸ್ತೆಯ ಬೊಬ್ಬಿ ಮಾರ್ಗವಾಗಿ ಬಿಳಾಲುಕೊಪ್ಪದ ಸಮೀಪ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

KUSHAL V
Loading...
Unable to load recommendations.
Follow Us