ಕೇಸ್ ದಾಖಲಿಸುವುದಾದ್ರೆ ಶ್ರೀನಿವಾಸಮೂರ್ತಿಗೆ ವಿಹಿಂಪ ಅಖಂಡ ಬೆಂಬಲ
ಬೆಳಗಾವಿ: ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಅಖಂಡ ಶ್ರೀನಿವಾಸಮೂರ್ತಿ ಬೆಂಬಲಕ್ಕೆ ವಿಶ್ವ ಹಿಂದು ಪರಿಷತ್ ಇರುತ್ತೆ ಎಂದು ವಿಹೆಚ್‌ಪಿ ಮುಖಂಡ ಕೃಷ್ಣ ಭಟ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಈ ಸಂಬಂಧ ಮಾತನಾಡಿರುವ ವಿಹೆಚ್‌ಪಿ ಮುಖಂಡ ಕೃಷ್ಣ ಭಟ್, ತಪ್ಪು ಮಾಡಿದವರ ವಿರುದ್ಧ ಶ್ರೀನಿವಾಸಮೂರ್ತಿ ಕೇಸ್ ದಾಖಲಿಸಲಿ. ದಲಿತ ಮುಖಂಡರಾಗಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅವರಿಗೆ ಸಹಕಾರ ನೀಡಲಿ. ಅನ್ಯಾಯ ಯಾರೇ ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು ಎಂದು ಕೃಷ್ಣ ಭಟ್ ಆಗ್ರಹಿಸಿದ್ದಾರೆ. ಈ […]

ಬೆಳಗಾವಿ: ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಅಖಂಡ ಶ್ರೀನಿವಾಸಮೂರ್ತಿ ಬೆಂಬಲಕ್ಕೆ ವಿಶ್ವ ಹಿಂದು ಪರಿಷತ್ ಇರುತ್ತೆ ಎಂದು ವಿಹೆಚ್‌ಪಿ ಮುಖಂಡ ಕೃಷ್ಣ ಭಟ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಈ ಸಂಬಂಧ ಮಾತನಾಡಿರುವ ವಿಹೆಚ್‌ಪಿ ಮುಖಂಡ ಕೃಷ್ಣ ಭಟ್, ತಪ್ಪು ಮಾಡಿದವರ ವಿರುದ್ಧ ಶ್ರೀನಿವಾಸಮೂರ್ತಿ ಕೇಸ್ ದಾಖಲಿಸಲಿ. ದಲಿತ ಮುಖಂಡರಾಗಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅವರಿಗೆ ಸಹಕಾರ ನೀಡಲಿ. ಅನ್ಯಾಯ ಯಾರೇ ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು ಎಂದು ಕೃಷ್ಣ ಭಟ್ ಆಗ್ರಹಿಸಿದ್ದಾರೆ.
ಈ ಸಂಬಂಧ ಉತ್ತರ ಪ್ರದೇಶ ಮಾದರಿಯಲ್ಲಿ ಕಾಯ್ದೆ ತರಬೇಕು. ಗಲಭೆ ನಡೆಸಿದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಘಟನೆಗೆ ಸಂಬಂಧಿಸಿದಂತೆ SDPI ಮತ್ತು PFI ಸಂಘಟನೆಗಳನ್ನು ನಿಷೇಧಿಸಬೇಕು ಎಂದು ವಿಹೆಚ್‌ಪಿ ಮುಖಂಡ ಕೃಷ್ಣ ಭಟ್ ಒತ್ತಾಯಿಸಿದ್ದಾರೆ.



