‘ದಿ ಲ್ಯಾಂಡ್ ಆಫ್ ರಿಚ್ ಸ್ಪೈಸಸ್’ ಕೂಡ್ಲಿಗಿ ಯಾರ ಪಾಲಾಗಲಿದೆ.. ಕಾದು ನೋಡಬೇಕಿದೆ!
ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವಿಂಗಡಣೆಗೆ ಕರ್ನಾಟಕ ಸಚಿವ ಸಂಪುಟವು ಅಸ್ತು ಅನ್ನುತ್ತಿದ್ದಂತೆಯೇ ಒಂದಷ್ಟು ವಿವಾದಗಳು ಹತ್ತಿಕೊಂಡಿವೆ. ರಾಜ್ಯದ 31ನೇ ಜಿಲ್ಲೆ ರಚನೆಯಾಗಲಿರುವ ಬಗ್ಗೆ, ಸ್ವಾಗತ ಮತ್ತು ವಿರೋಧ ಎರಡೂ ವಿಧದ ಅಭಿಪ್ರಾಯಗಳು ಕೇಳಿಬಂದಿವೆ. ವಿಜಯನಗರಕ್ಕೆ ಒಳಪಡಲಿರುವ ಜನರು ಸಂತಸ ವ್ಯಕ್ತಪಡಿಸಿದ್ದರೆ, ಬಳ್ಳಾರಿ ಭಾಗದ ಜನರು ಅಸಮಾಧಾನ ತೋರಿದ್ದಾರೆ. ವಿಜಯನಗರ ಮತ್ತು ಬಳ್ಳಾರಿ ಅಖಂಡವಾಗಿರಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಈ ನಿರ್ಧಾರವು ವಿಜಯನಗರಕ್ಕೆ ಸಿಹಿ-ಬಳ್ಳಾರಿಗೆ ಕಹಿ ಎಂಬಂತಾಗಿದೆ. ಯಾವ್ಯಾವ ತಾಲೂಕುಗಳು ಯಾರು ಯಾರ ಪಾಲು? ಹೊಸಪೇಟೆ, […]
ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವಿಂಗಡಣೆಗೆ ಕರ್ನಾಟಕ ಸಚಿವ ಸಂಪುಟವು ಅಸ್ತು ಅನ್ನುತ್ತಿದ್ದಂತೆಯೇ ಒಂದಷ್ಟು ವಿವಾದಗಳು ಹತ್ತಿಕೊಂಡಿವೆ. ರಾಜ್ಯದ 31ನೇ ಜಿಲ್ಲೆ ರಚನೆಯಾಗಲಿರುವ ಬಗ್ಗೆ, ಸ್ವಾಗತ ಮತ್ತು ವಿರೋಧ ಎರಡೂ ವಿಧದ ಅಭಿಪ್ರಾಯಗಳು ಕೇಳಿಬಂದಿವೆ. ವಿಜಯನಗರಕ್ಕೆ ಒಳಪಡಲಿರುವ ಜನರು ಸಂತಸ ವ್ಯಕ್ತಪಡಿಸಿದ್ದರೆ, ಬಳ್ಳಾರಿ ಭಾಗದ ಜನರು ಅಸಮಾಧಾನ ತೋರಿದ್ದಾರೆ. ವಿಜಯನಗರ ಮತ್ತು ಬಳ್ಳಾರಿ ಅಖಂಡವಾಗಿರಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಈ ನಿರ್ಧಾರವು ವಿಜಯನಗರಕ್ಕೆ ಸಿಹಿ-ಬಳ್ಳಾರಿಗೆ ಕಹಿ ಎಂಬಂತಾಗಿದೆ.
ಯಾವ್ಯಾವ ತಾಲೂಕುಗಳು ಯಾರು ಯಾರ ಪಾಲು? ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಳ್ಳಿ, ಕೊಟ್ಟೂರು, ಹೂವಿನಹಡಗಲಿ, ಹರಪನಹಳ್ಳಿ ಈ ಆರು ತಾಲೂಕುಗಳು ನೂತನ ವಿಜಯನಗರ ಜಿಲ್ಲೆಯ ಭಾಗವಾಗುತ್ತವೆ. ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಸಂಡೂರು, ಕೂಡ್ಲಿಗಿ ಈ ಐದು ತಾಲೂಕುಗಳು ಬಳ್ಳಾರಿ ಜಿಲ್ಲೆಗೆ ಉಳಿದುಕೊಳ್ಳಲಿವೆ. 2011ರ ಜನಗಣತಿಯ ಪ್ರಕಾರ 24.5 ಲಕ್ಷ ಜನಸಂಖ್ಯೆ ಹೊಂದಿರುವ ಜಿಲ್ಲೆಯು ಎರಡು ವಿಭಾಗಗಳಾದರೆ, 10 ಲಕ್ಷದಷ್ಟು ಜನಸಂಖ್ಯೆ ವಿಜಯನಗರದ ಪಾಲಾಗಲಿದೆ. ಉಳಿದ ಜನರು ಬಳ್ಳಾರಿಗೆ ಸೇರಿಕೊಳ್ಳಲಿದ್ದಾರೆ.
ಕೂಡ್ಲಿಗಿ ತಾಲೂಕು ಯಾರ ಪಾಲಾಗಬೇಕು ಎಂಬ ಬಗ್ಗೆ ವಿವಾದಗಳಿದ್ದು, ಎರಡೂ ಭಾಗದಿಂದ ಕೂಡ್ಲಿಗಿಯನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವಂತೆ ಆಗ್ರಹ ಕೇಳಿಬಂದಿದೆ. ಕೂಡ್ಲಿಗಿ-ಹೊಸಪೇಟೆ ಮತ್ತು ಕೂಡ್ಲಿಗಿ-ಬಳ್ಳಾರಿ ನಡುವಿನ ಪ್ರಯಾಣದ ದೂರವನ್ನು ಗಮನಿಸಿದರೆ, ಕೂಡ್ಲಿಗಿ ತಾಲೂಕಿಗೆ ಹೊಸಪೇಟೆಯೇ ಸಮೀಪವಾಗಿದೆ. ಈ ನಿಟ್ಟಿನಲ್ಲಿ ಕೂಡ್ಲಿಗಿಯನ್ನು ತಮ್ಮೊಂದಿಗೆ ಸೇರಿಸುವಂತೆ ವಿಜಯನಗರ ಜನರ ಊಗು ಕೇಳಿಬಂದಿದೆ. ಬಹುತೇಕ ಕೂಡ್ಲಿಗಿ ಜನರ ಅಭಿಪ್ರಾಯವೂ ಇದೇ ಆಗಿದೆ. ’ದ ಲ್ಯಾಂಡ್ ಆಫ್ ರಿಚ್ ಸ್ಪೈಸಸ್’ ಎಂದು ಕರೆಸಿಕೊಂಡಿದ್ದ ಕೂಡ್ಲಿಗಿ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಜಿಲ್ಲೆಯ ವಿಂಗಡಣೆಯು ಕೇವಲ ಭೌಗೋಳಿಕ ವಿಭಜನೆ ಮಾತ್ರ ಆಗಿರದೆ, ಆರ್ಥಿಕ, ಸಾಂಸ್ಕೃತಿಕ, ಐತಿಹಾಸಿಕ ಪ್ರದೇಶಗಳ ವಿಭಜನೆಯೂ ಆಗಿರಲಿದೆ. ಇತಿಹಾಸ ಮರೆಯಲಾರದ ಹಂಪಿ, ವಿಜಯನಗರ, ತುಂಗಭದ್ರಾ, ಬೊಮ್ಮಘಟ್ಟ, ತಿಮ್ಮಲಾಪುರ ಮುಂತಾದ ಪುರಾತನ ಸ್ಥಳಗಳು ಎರಡು ಜಿಲ್ಲೆಯ ಪಾಲಾಗಲಿವೆ. ಕಬ್ಬಿಣ, ಮ್ಯಾಂಗನೀಸ್, ಚಿನ್ನ, ತಾಮ್ರ ಮುಂತಾದ ಅದಿರು ವಹಿವಾಟುಗಳು ಹಂಚಿಹೋಗಲಿವೆ.