ದತ್ತಾಂಶ ಸುರಕ್ಷತಾ ಕಾನೂನು ರೂಪಿಸುತ್ತೇವೆ: ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್
ಬೆಂಗಳೂರು: ಸದ್ಯದಲ್ಲೇ ದತ್ತಾಂಶ ಸುರಕ್ಷತೆಗೆ ಸಂಬಂಧಿಸಿದ ಕಾನೂನು ಜಾರಿಗೆ ತರಲಾಗುವುದು ಎಂದು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಸಚಿವ ಮತ್ತು ರವಿ ಶಂಕರ್ ಪ್ರಸಾದ್ ತಿಳಿಸಿದರು. ಅವರು ಬೆಂಗಳೂರು ತಂತ್ರಜ್ಞಾನ ಮೇಳ-2020 ಉದ್ಘಾಟನಾ ಸಮಾರಂಭದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದರು. ಬಳಕೆದಾರರ ದತ್ತಾಂಶದ ರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರ ಯೋಜನೆಯೊಂದನ್ನು ರೂಪಿಸುತ್ತಿದೆ. ಜೊತೆಗೆ ಡೇಟಾ ಆಧಾರಿತ ಆರ್ಥಿಕತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ಭವಿಷ್ಯದಲ್ಲಿ ಭಾರತೀಯರ ದತ್ತಾಂಶ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನವನ್ನು ಎಲ್ಲ […]
ಬೆಂಗಳೂರು: ಸದ್ಯದಲ್ಲೇ ದತ್ತಾಂಶ ಸುರಕ್ಷತೆಗೆ ಸಂಬಂಧಿಸಿದ ಕಾನೂನು ಜಾರಿಗೆ ತರಲಾಗುವುದು ಎಂದು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಸಚಿವ ಮತ್ತು ರವಿ ಶಂಕರ್ ಪ್ರಸಾದ್ ತಿಳಿಸಿದರು. ಅವರು ಬೆಂಗಳೂರು ತಂತ್ರಜ್ಞಾನ ಮೇಳ-2020 ಉದ್ಘಾಟನಾ ಸಮಾರಂಭದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದರು.
ಬಳಕೆದಾರರ ದತ್ತಾಂಶದ ರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರ ಯೋಜನೆಯೊಂದನ್ನು ರೂಪಿಸುತ್ತಿದೆ. ಜೊತೆಗೆ ಡೇಟಾ ಆಧಾರಿತ ಆರ್ಥಿಕತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ಭವಿಷ್ಯದಲ್ಲಿ ಭಾರತೀಯರ ದತ್ತಾಂಶ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನವನ್ನು ಎಲ್ಲ ಕ್ಷೇತ್ರಗಳೂ ಅಳವಡಿಸಿಕೊಳ್ಳುತ್ತಿವೆ. ಆದರೆ, ಭಾರತೀಯತೆಗೆ ಧಕ್ಕೆಯಾಗದಂತೆ ತಂತ್ರಜ್ಞಾನದ ಅಳವಡಿಕೆಗೆ ಯತ್ನಿಸಬೇಕು ಎಂದರು.
ಕಾರ್ಮಿಕ ಕಾಯ್ದೆಗಳನ್ನು ನಮ್ಮ ಸರ್ಕಾರ ಪುನರುಜ್ಜೀವಗೊಳಿಸಿದೆ. ಮೊಬೈಲ್ಗಳ ಉತ್ಪಾದನೆಯಲ್ಲಿ ಭಾರತದಲ್ಲಿ ಹೊಸ ಅವಕಾಶಗಳನ್ನು ನಿರ್ಮಿಸಿಕೊಟ್ಟಿದೆ. ಮುಂದಿನ 5 ವರ್ಷಗಳಲ್ಲಿ ಭಾರತದ ಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆಯಾಗಲಿರುವ 11 ಲಕ್ಷ ಕೋಟಿಯಿಂದ ಉತ್ಪಾದನೆಯಾದ ಮೊಬೈಲ್, ಸ್ಮಾರ್ಟ್ಫೋನ್ಗಳು ಹೊರ ದೇಶಗಳಿಗೆ ರಫ್ತಾಗಲಿವೆ. ಭಾರತ ಜಾಗತಿಕ ಕಂಪನಿಗಳ ನೆಚ್ಚಿನ ತಾಣವಾಗಿ ಮಾರ್ಪಡಲು ಇದು ಸಹಕಾರಿಯಾಗಲಿದೆ ಎಂದು ಕೇಂದ್ರ ಸರ್ಕಾರದ ವಿದ್ಯುನ್ಮಾನ, ಮಾಹಿತಿ ಮತ್ತು ಪ್ರಸಾರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದರು.
ಫೇಸ್ಬುಕ್, ಗೂಗಲ್, ಆ್ಯಪಲ್ನಂತಹ ದಿಗ್ಗಜ ಕಂಪನಿಗಳು ಭಾರತದ ಮೇಲೆ ಇರಿಸಿದ ವಿಶ್ವಾಸ ಹೆಚ್ಚುತ್ತಿದೆ. ಆದರೆ, ಈ ಕಂಪನಿಗಳನ್ನು ಮೀರಿಸುವತ್ತ ಭಾರತದ ಟೆಕ್ ಕಂಪನಿಗಳು ಗಮನಹರಿಸಬೇಕು ಎಂದು ಅವರು ಕರೆಕೊಟ್ಟರು.
ಇದನ್ನೂ ಓದಿ: Bengaluru Tech Summit 2020 ಮುಂದಿನ 5 ವರ್ಷಗಳಲ್ಲಿ 50 ಲಕ್ಷ ಉದ್ಯೋಗ: CM ಯಡಿಯೂರಪ್ಪ
ಅಭಿವೃದ್ಧಿಯಲ್ಲಿ ಜೊತೆಜೊತೆಗೆ ಸಾಗೋಣ: ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್
Work From Anywhere ಜಾರಿಗೊಳಿಸುವ ಯೋಚನೆ ಸರ್ಕಾರಕ್ಕಿದೆ: ಪ್ರಧಾನಿ ಮೋದಿ
Published On - 2:54 pm, Thu, 19 November 20