Bengaluru Tech Summit 2020 ಮುಂದಿನ 5 ವರ್ಷಗಳಲ್ಲಿ 50 ಲಕ್ಷ ಉದ್ಯೋಗ: CM ಯಡಿಯೂರಪ್ಪ
ಬೆಂಗಳೂರು: ಹೊಸ ಐಟಿ ಕಾಯ್ದೆಯು ಮುಂದಿನ 5 ವರ್ಷಗಳಲ್ಲಿ 50 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಘೊಷಿಸಿದ್ದಾರೆ. 25ಕ್ಕೂ ಹೆಚ್ಚು ದೇಶ, ಹಾಗೂ 240 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿರುವ ಬೆಂಗಳೂರು ತಂತ್ರಜ್ಞಾನ ಮೇಳ-2020ಕ್ಕೆ Bengaluru Tech Summit 2020 ಚಾಲನೆ ನೀಡಿ ಮಾತಾನಾಡಿದ ಸಮಯದಲ್ಲಿ ಈ ಮಾಹಿತಿಯನ್ನು ಬಿಎಸ್ವೈ ಹಂಚಿಕೊಂಡರು. ಯುನಿಕಾರ್ನ್ 2020ರ ಏಳು ಯಶಸ್ವಿ ನವೋದ್ಯಮಗಳಲ್ಲಿ, ನಾಲ್ಕು ಉದ್ಯಮಗಳು ಬೆಂಗಳೂರು ಮೂಲದ್ದಾಗಿವೆ. ಹೀಗಾಗಿ ಜಾಗತಿಕ ಆರ್ಥಿಕ ಶಕ್ತಿಯಾಗಿ ಭಾರತ ಸದ್ಯದಲ್ಲೇ […]

ಬೆಂಗಳೂರು: ಹೊಸ ಐಟಿ ಕಾಯ್ದೆಯು ಮುಂದಿನ 5 ವರ್ಷಗಳಲ್ಲಿ 50 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಘೊಷಿಸಿದ್ದಾರೆ.
25ಕ್ಕೂ ಹೆಚ್ಚು ದೇಶ, ಹಾಗೂ 240 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿರುವ ಬೆಂಗಳೂರು ತಂತ್ರಜ್ಞಾನ ಮೇಳ-2020ಕ್ಕೆ Bengaluru Tech Summit 2020 ಚಾಲನೆ ನೀಡಿ ಮಾತಾನಾಡಿದ ಸಮಯದಲ್ಲಿ ಈ ಮಾಹಿತಿಯನ್ನು ಬಿಎಸ್ವೈ ಹಂಚಿಕೊಂಡರು. ಯುನಿಕಾರ್ನ್ 2020ರ ಏಳು ಯಶಸ್ವಿ ನವೋದ್ಯಮಗಳಲ್ಲಿ, ನಾಲ್ಕು ಉದ್ಯಮಗಳು ಬೆಂಗಳೂರು ಮೂಲದ್ದಾಗಿವೆ. ಹೀಗಾಗಿ ಜಾಗತಿಕ ಆರ್ಥಿಕ ಶಕ್ತಿಯಾಗಿ ಭಾರತ ಸದ್ಯದಲ್ಲೇ ನಿಲ್ಲಲಿದೆ ಎಂದರು.
ಕಂಪನಿಗಳಿಗೆ ಆತ್ಮ ವಿಶ್ವಾಸ ತುಂಬಲು ರಾಜ್ಯ ಸರ್ಕಾರ ಸಹಕರಿಸಲಿದೆ ಹಾಗೂ ಕಾರ್ಮಿಕ ಕಾಯ್ದೆ ಮತ್ತು ಭೂಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ತ್ವರಿತವಾಗಿ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಸರ್ಕಾರ ನೆರವಾಗಿದೆ. ಅಲ್ಲದೆ ಪ್ರಧಾನಿ ಮೋದಿಯವರ ಎಲ್ಲ ಕನಸುಗಳಿಗೆ ಕರ್ನಾಟಕ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.
ಡಿಜಿಟಲ್ ಆರ್ಥಿಕತೆಯನ್ನು 300 ಬಿಲಿಯನ್ ಡಾಲರ್ಗೆ ಒಯ್ಯಬೇಕಿದೆ.. ಇದೇ ಸಂದರ್ಭದಲ್ಲಿ ಮಾತಾನಾಡಿದ ಐಟಿ ಬಿಟಿ ಸಚಿವ, ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಡಿಜಿಟಲ್ ಆರ್ಥಿಕತೆಯನ್ನು 52 ಬಿಲಿಯನ್ ಡಾಲರ್ಗಳಿಂದ 300 ಬಿಲಿಯನ್ ಡಾಲರ್ಗೆ ಒಯ್ಯಬೇಕಿದೆ. ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ 100 ಬಿಲಿಯನ್ ಡಾಲರ್ ವಹಿವಾಟು ಸಾಧಿಸುವ ಗುರಿ ಸರ್ಕಾರಕ್ಕಿದೆ ಎಂದು ತಿಳಿಸಿದರು. ಬೆಂಗಳೂರು ತಂತ್ರಜ್ಞಾನ ಮೇಳದ 2ನೇ ಆವೃತ್ತಿ ಇದಾಗಿದ್ದು, ವರ್ಚುವಲ್ ಆಗಿ ನಡೆಯುತ್ತಿರುವ ಮೊದಲ ಸಮ್ಮೇಳನ ಎನಿಸಿದೆ.
ಇದನ್ನೂ ಓದಿ: Work From Anywhere ಜಾರಿಗೊಳಿಸುವ ಯೋಚನೆ ಸರ್ಕಾರಕ್ಕಿದೆ: ಪ್ರಧಾನಿ ಮೋದಿ
ಅಭಿವೃದ್ಧಿಯಲ್ಲಿ ಜೊತೆಜೊತೆಗೆ ಸಾಗೋಣ: ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್
ದತ್ತಾಂಶ ಸುರಕ್ಷತಾ ಕಾನೂನು ರೂಪಿಸುತ್ತೇವೆ: ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್
Published On - 2:32 pm, Thu, 19 November 20




