Photo Album ಡಿಕೆಶಿ ಪುತ್ರಿ ಐಶ್ವರ್ಯಾ, ಅಮರ್ತ್ಯ ನಿಶ್ಚಿತಾರ್ಥದ ಒಂದು ಝಲಕ್!

Photo Album ಡಿಕೆಶಿ ಪುತ್ರಿ ಐಶ್ವರ್ಯಾ, ಅಮರ್ತ್ಯ ನಿಶ್ಚಿತಾರ್ಥದ ಒಂದು ಝಲಕ್!

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಪುತ್ರಿ ಐಶ್ವರ್ಯಾ ಹಾಗೂ ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಮೊಮ್ಮಗ ಮತ್ತು ಕಾಫೀ ಡೇ ಮಾಲೀಕ ದಿ.ಸಿದ್ದಾರ್ಥ್ ಹೆಗ್ಡೆ ಪುತ್ರ ಅಮರ್ತ್ಯ ಹೆಗ್ಡೆ ಅವರ ನಿಶ್ಚಿತಾರ್ಥ ಸಮಾರಂಭ ಇಂದು ನೆರವೇರಿತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ತಾಜ್​ ಹೋಟೆಲ್​ನಲ್ಲಿ ನಿಶ್ಚಿತಾರ್ಥ ಸಮಾರಂಭವು ನೆರವೇರಿತು. ಎರಡೂ ಕುಟುಂಬಗಳ ನಡುವೆ ಈ ಹಿಂದೆ ಮಾತುಕತೆ ಮುಗಿದಿದ್ದು ಇಂದು ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಿನ್ನೆ ರಾತ್ರಿಯೇ ತಾಜ್​ ಹೋಟೆಲ್​ಗೆ ಬಂದಿಳಿದ ಎಸ್.ಎಂ.ಕೃಷ್ಣ ಕುಟುಂಬದವರು […]

KUSHAL V

| Edited By: sadhu srinath

Nov 19, 2020 | 3:00 PM

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಪುತ್ರಿ ಐಶ್ವರ್ಯಾ ಹಾಗೂ ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಮೊಮ್ಮಗ ಮತ್ತು ಕಾಫೀ ಡೇ ಮಾಲೀಕ ದಿ.ಸಿದ್ದಾರ್ಥ್ ಹೆಗ್ಡೆ ಪುತ್ರ ಅಮರ್ತ್ಯ ಹೆಗ್ಡೆ ಅವರ ನಿಶ್ಚಿತಾರ್ಥ ಸಮಾರಂಭ ಇಂದು ನೆರವೇರಿತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ತಾಜ್​ ಹೋಟೆಲ್​ನಲ್ಲಿ ನಿಶ್ಚಿತಾರ್ಥ ಸಮಾರಂಭವು ನೆರವೇರಿತು.

ಎರಡೂ ಕುಟುಂಬಗಳ ನಡುವೆ ಈ ಹಿಂದೆ ಮಾತುಕತೆ ಮುಗಿದಿದ್ದು ಇಂದು ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಿನ್ನೆ ರಾತ್ರಿಯೇ ತಾಜ್​ ಹೋಟೆಲ್​ಗೆ ಬಂದಿಳಿದ ಎಸ್.ಎಂ.ಕೃಷ್ಣ ಕುಟುಂಬದವರು ಇಂದು ಸಂಪ್ರದಾಯದಂತೆ ಎಲ್ಲಾ ಶಾಸ್ತ್ರಗಳನ್ನು ನೆರವೇರಿಸಿದರು.

ನಿಶ್ಚಿತಾರ್ಥ ಸಮಾರಂಭಕ್ಕೆ ಆಯ್ದ 250 ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಕೊವಿಡ್ ಹಿನ್ನೆಲೆಯಲ್ಲಿ ಸೀಮಿತ ಗಣ್ಯರಿಗಷ್ಟೇ ಆಹ್ವಾನ ನೀಡಲಾಗಿದ್ದು ಸಮಾರಂಭಕ್ಕೆ ಸಿಎಂ B.S. ಯಡಿಯೂರಪ್ಪ ಮತ್ತು ಸಚಿವರಾದ ಅಶೋಕ್​, ಸೋಮಣ್ಣ ಹಾಗೂ ಸುಧಾಕರ್​ ಆಗಮಿಸಿದ್ದರು. ವಿನಯ್​ ಗುರೂಜಿ ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದಲ್ಲದೆ, ಎರಡೂ ಕುಟುಂಬದ ನಿಕಟ ಸಂಬಂಧಿಕರು ಸಹ ಭಾಗಿಯಾಗಿದ್ದರು.

Follow us on

Related Stories

Most Read Stories

Click on your DTH Provider to Add TV9 Kannada