ಖುಷ್ಬೂ ಬಳಿಕ.. ಖ್ಯಾತ ನಟಿ ವಿಜಯಶಾಂತಿ ನಾಳೆ BJPಗೆ ಸೇರ್ಪಡೆ

ಖುಷ್ಬೂ ಬಳಿಕ.. ಖ್ಯಾತ ನಟಿ ವಿಜಯಶಾಂತಿ ನಾಳೆ BJPಗೆ ಸೇರ್ಪಡೆ

ವಿಜಯಶಾಂತಿ ಅವರ ಪಕ್ಷ ಬದಲಾವಣೆ ಬಗ್ಗೆ ಇದ್ದ ಎಲ್ಲ ಸಸ್ಪೆನ್ಸ್​ಗೆ ತೆರೆಬಿದ್ದಿದೆ. ನಟಿ ಖುಷ್ಬು ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಬಳಿಕ, ಇದೀಗ ತೆಲಂಗಾಣದಲ್ಲಿ ನಟಿ ವಿಜಯಶಾಂತಿ ಕಾಂಗ್ರೆಸ್​ಗೆ ಗುಡ್ ಬೈ ಹೇಳಿದ್ದು, ನಾಳೆಯೇ ಬಿಜೆಪಿ ಸೇರಲಿದ್ದಾರೆ.

ಕೆಲವು ಸಮಯದಿಂದ ಪಕ್ಷದ ಚಟುವಟಿಕೆಗಳಿಂದ ದೂರವಿದ್ದ ಹಿರಿಯ ನಾಯಕಿ ವಿಜಯಶಾಂತಿ ಅವರು ಕಾಂಗ್ರೆಸ್​ಗೆ ವಿದಾಯ ಹೇಳಿದ್ದಾರೆ. ಅವರು ಮಂಗಳವಾರ ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ. ತದನಂತರ ಹಲವಾರು ಹಿರಿಯ ನಾಯಕರೊಂದಿಗೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ವಿಜಯಶಾಂತಿ ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ದುಬಕಾ ಚುನಾವಣೆಯ ಗೆಲುವಿನೊಂದಿಗೆ ಉತ್ತಮ ಮನಸ್ಥಿತಿಯಲ್ಲಿರುವ ಬಿಜೆಪಿ ವಿಜಯಶಾಂತಿಯ ಸೇವೆಗಳನ್ನು ಜಿಎಚ್‌ಎಂಸಿ ಚುನಾವಣೆಯಲ್ಲಿ ಬಳಸಿಕೊಳ್ಳಲಿದೆ. ಹಾಗೂ ಪಕ್ಷದ ಅಭ್ಯರ್ಥಿಗಳ ಪರವಾಗಿ ಅವರು ಪ್ರಚಾರ ನಡೆಸಲಿದ್ದಾರೆ.

ವಿಜಯಶಾಂತಿ ಸಿನಿಮಾ ಜೀವನ:
54ರ ಹರೆಯದ ಪಂಚಭಾಷಾ ನಟಿ ವಿಜಯಶಾಂತಿ ಕನ್ನಡ, ತೆಲುಗು, ತಮಿಳು, ಮಳಯಾಳಂ ಮತ್ತು ಹಿಂದಿಯಲ್ಲಿ ನಟಿಸಿದ್ದಾರೆ. ಸುಮಾರು 40 ವರ್ಷಗಳ ಕಾಲ ಅನೇಕ ಪಾತ್ರಗಳಲ್ಲಿ 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸಿನಿ ಪ್ರಿಯರನ್ನ ರಂಜಿಸಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ದಿ ಲೇಡಿ ಸೂಪರ್ ಸ್ಟಾರ್, ಮತ್ತು ಲೇಡಿ ಅಮಿತಾಬ್ ಎಂದು ಅಭಿಮಾನಿಗಳು ಇವರನ್ನ ಕರೆಯುತ್ತಾರೆ. ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ.

Read Full Article

Click on your DTH Provider to Add TV9 Kannada