ಬೆಳಗಾವಿ ಜೈಲಲ್ಲಿ ವಿನಯ್ ಕುಲಕರ್ಣಿ ಬಿಂದಾಸ್ ಬದುಕು

|

Updated on: Dec 03, 2020 | 12:36 PM

ವಿನಯ್ ಕುಲಕರ್ಣಿಗೆ ಜೈಲಿನಲ್ಲಿ ಸಕಲ ಸವಲತ್ತುಗಳನ್ನೂ ಒದಗಿಸಲಾಗುತ್ತಿದೆ ಎಂದು ಟಿವಿ9ಗೆ ಉನ್ನತ ಮೂಲಗಳು ತಿಳಿಸಿವೆ. ವಿನಯ್​ ಕುಲಕರ್ಣಿಗೆ ಇರೋದು ಜೈಲಿನಲ್ಲೋ ಅಥವಾ ನೆಂಟರ ಮನೆಯಲ್ಲೋ ಅನ್ನೋ ಅನುಮಾನ ಮೂಡುವಂತೆ ಇದೆ ವಿನಯ ಕುಲಕರ್ಣಿ ಜೈಲು ವಾಸ.

ಬೆಳಗಾವಿ ಜೈಲಲ್ಲಿ ವಿನಯ್ ಕುಲಕರ್ಣಿ ಬಿಂದಾಸ್ ಬದುಕು
ಮಾಜಿ ಸಚಿವ ವಿನಯ್ ಕುಲಕರ್ಣಿ
Follow us on

ಬೆಳಗಾವಿ: ಧಾರವಾಡ ಜಿ.ಪಂ. ಸದಸ್ಯ ಯೋಗೇಶ್​ ಗೌಡ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಮಾಜಿ ಸಚಿವ ವಿನಯ್​ ಕುಲಕರ್ಣಿಗೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆಯಂತೆ. ಕಂಬಿ ಹಿಂದೆ ಇದ್ರೂ ಬಿಂದಾಸ್ ಆಗಿ ಕಾಲ ಕಳೆಯೋಕೆ ಅಧಿಕಾರಿಗಳೇ ಸಾಥ್ ನೀಡ್ತಿದ್ದಾರೆ ಅಂತ ಟಿವಿ9ಗೆ ಜೈಲಿನ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದ್ದು ಇದೀಗ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಕುಲಕರ್ಣಿಯ ಮೇಲಿದೆಯಾ ಜೈಲು ಅಧೀಕ್ಷಕರ ಕೃಪಾಕಟಾಕ್ಷ?
ವಿನಯ್​ ಕುಲಕರ್ಣಿ ಜೈಲಿನಲ್ಲಿ ಸಾಧಾರಣ ಕೈದಿಯಂತೆಯೇ ಇರ್ತಾರೆ ಎಂದು ಜೈಲು ಅಧೀಕ್ಷಕ ಕೃಷ್ಣಕುಮಾರ್ ಆರಂಭದಲ್ಲಿ ಹೇಳಿದ್ರು. ಆದರೆ, ಆ ಮಾತಿಗೂ ಈಗ ಜೈಲಿನಲ್ಲಿ ನಡೆಯುತ್ತಿರುವುದಕ್ಕೂ ತಾಳಮೇಳ ಕೂಡಿಬರದೇ ಇರೋದನ್ನ ನೋಡಿದ್ರೆ ಜೈಲು ಅಧಿಕ್ಷಕರ ಕೃಪಾಕಟಾಕ್ಷ ಮಾಜಿ ಮಿನಿಸ್ಟರ್​ ಮೇಲಿದ್ಯಾ ಅನ್ನೋ ಅನುಮಾನ ಮೂಡಿದೆ.

ಸಾಂದರ್ಭಿಕ ಚಿತ್ರ

ಚಿಕನ್ ಬಿರಿಯಾನಿ, ಧಾರವಾಢ ರೊಟ್ಟಿ, ಮೆತ್ತನೆಯ ಹಾಸಿಗೆ, ಬ್ರ್ಯಾಂಡೆಂಡ್ ಡ್ರಿಂಕ್ಸ್…
ಮೂಲಗಳ ಪ್ರಕಾರ ವಿನಯ್ ಕುಲಕರ್ಣಿಗೆ ಜೈಲಿನಲ್ಲಿ ಸಕಲ ಸವಲತ್ತುಗಳನ್ನೂ ಒದಗಿಸಲಾಗುತ್ತಿದೆಯಂತೆ. ಆಯಿಲ್​ ಮಸಾಜ್​ ಮಾಡೋಕೆ ಇಬ್ಬರು ಕೈದಿಗಳನ್ನ ಬಿಟ್ಟಿದ್ದಾರಂತೆ. ಸಾಲದ್ದಕ್ಕೆ ಸಾಹೇಬರಿಗೆ ಮೆತ್ತನೆಯ ಹಾಸಿಗೆ, ದಿನಕ್ಕೊಂದು ಬಗೆಯ ಊಟ, ತಿಂಡಿ, ಧಾರವಾಡ ರೊಟ್ಟಿ, ಚಿಕನ್​ ಬಿರಿಯಾನಿ, ಫೇವರೇಟ್​ ಬ್ರ್ಯಾಂಡ್​ನ ಡ್ರಿಂಕ್ಸ್ ಇತ್ಯಾದಿ ಇತ್ಯಾದಿ ಎಲ್ಲವೂ ಸಿಗ್ತಾ ಇದೆಯಂತೆ.

ಅಧಿಕಾರಿಗಳಿಗೆ ಫುಲ್​ ಡ್ಯೂಟಿ
ಮಾಜಿ ಸಚಿವರಿಗೆ ಹೊರಗಿನಿಂದ ಪಾರ್ಸೆಲ್​ ಬಂದ್ರೆ ಅದನ್ನ ತಲುಪಿಸೋಕೆ ಅಧಿಕಾರಿಗಳೇ ಸಹಾಯ ಮಾಡ್ತಾರೆ ಅನ್ನೋ ಮಾಹಿತಿ ಸಿಕ್ಕಿದೆ. ಇನ್ನೋವಾ, ಸಫಾರಿ, ಸ್ವಿಫ್ಟ್ ಕಾರಿನಲ್ಲಿ ಬರೋ ವಿನಯ್ ಬಂಟರು ಇತರ ಕೈದಿಗಳ ಬಳಿ ಪಾರ್ಸೆಲ್​ ಕೊಡ್ತಾರಂತೆ. ಆ ಪಾರ್ಸೆಲ್​ ಡ್ಯೂಟಿಯಲ್ಲಿರೋ ಅಧಿಕಾರಿಗಳ ಮೂಲಕ ಕುಲಕರ್ಣಿಯ ಕೈ ಸೇರುತ್ತೆ ಎಂದು ತಿಳಿದುಬಂದಿದೆ.

ಸಾಂದರ್ಭಿಕ ಚಿತ್ರ

ಇದೇನು ಜೈಲೋ? ನೆಂಟರ ಮನೆಯೋ?
ಇಷ್ಟೇ ಅಲ್ಲದೇ ಪಾರ್ಸೆಲ್​ ಜೊತೆಗೆ ಮೊಬೈಲ್​ ಕೂಡ ವಿನಯ್​ ಕುಲಕರ್ಣಿಯ ಕೈ ಸೇರುತ್ತೆ. ಜೈಲಿನ ಅಧಿಕಾರಿಗಳೇ ಮೊಬೈಲ್​ ತಲುಪಿಸ್ತಿದ್ದಾರೆ ಅನ್ನೋ ವಿಷಯ ಗೊತ್ತಾಗಿದೆ. ಇದೆಲ್ಲವನ್ನೂ ನೋಡಿದರೆ ವಿನಯ್​ ಕುಲಕರ್ಣಿಗೆ ಇರೋದು ಜೈಲಿನಲ್ಲೋ ಅಥವಾ ನೆಂಟರ ಮನೆಯಲ್ಲೋ ಅನ್ನೋ ಅನುಮಾನ ಮೂಡದೇ ಇರದು.

Published On - 10:36 am, Wed, 2 December 20