ನೀವು ಭೀಮನ ಶಕ್ತಿಯ ಕಥೆಯನ್ನು ಕೇಳಿದ್ದೀರಿ..ಶಕ್ತಿಯ ಕುರಿತು ಬಲ ಭೀಮನ ಎಂಬ ವಿಶೇಷಣವನ್ನೇ ಬಳಸುತ್ತೇವೆ. ದೈತ್ಯದೇಹಿಗಳನ್ನು ಭೀಮಕಾಯ ಎಂದು ಕರೆಯುತ್ತೇವೆ. ಹೌದಪ್ಪಾ ಹೌದು, ಭೀಮನ ಕಥೆ ನಮಗೂ ಗೊತ್ತು. ಆದರೆ ಈಗ ಭೀಮನಂತ ಇರುವವರು ಯಾರು ತಾನೇ ಸಿಗ್ತಾರೆ? ಎಂದು ಕೇಳಿದರೆ ಈ ವ್ಯಕ್ತಿಯೇ ಉತ್ತರ. ಉಕ್ರೇನ್ ಮೂಲದ ಡಿಮಿಟ್ರೋ ಖಲಾಝಿ ಎಂಬ ವ್ಯಕ್ತಿಯನ್ನೇ ಕಲಿಯುಗದ ಭೀಮ ಎನ್ನಬಹುದು. ಇವರ ಇನ್ಸ್ಟಾಗ್ರಾಂ ಖಾತೆಯನ್ನೊಮ್ಮೆ ನೀವು ನೋಡಬೇಕು..ಅಬ್ಬಾ! ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವುದು ಖಚಿತ.
ಈ ವಿಡಿಯೋದಲ್ಲಿ ಉಕ್ರೇನಿನ ಈ ವ್ಯಕ್ತಿಯ ಭೀಮಬಲವನ್ನು ವೀಕ್ಷಿಸಬಹುದು. 150 ಕೆಜಿ ತೂಕವನ್ನು ಒಂದೇ ಕೈಯಲ್ಲಿ ಎತ್ತುವ ಸಾಮರ್ಥ್ಯ ಈತನಿಗಿದೆ. ಅಲ್ಲದೇ, ಎಮ್ಮೆ, ಕುದುರೆ, ಒಂಟೆಗಳನ್ನು ಸಲೀಸಾಗಿ ತನ್ನ ಹೆಗಲ ಮೇಲೆ ಹೊತ್ತೊಯ್ಯುತ್ತಾನೆ. ಅವರ ಸಾಹಸವನ್ನು ನೋಡಿ ಇತರರು ಬೆಕ್ಕಸಬೆರಗಾಗಿದ್ದಾರಂತೆ.
ಅವರಿಗೆ ಭೀಮ ಎಂದು ಅಭಿದಾನ ಕೊಟ್ರೆ ಯಾರೂ ಚಕಾರ ಎತ್ತುವುದಿಲ್ಲ. ಅಷ್ಟು ಶಕ್ತಿಶಾಲಿ ಉಕ್ರೇನ್ ಮೂಲದ ಡಿಮಿಟ್ರೋ ಖಲಾಝಿ. ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಇಂತಹ ವಿಡಿಯೋಗಳು ತುಂಬಿ ತುಳುಕುತ್ತಿವೆ. ಅಲ್ಲದೇ ಅವರಿಗೆ ಇನ್ಸ್ಟಾಗ್ರಾಂನಲ್ಲಿ 12 ಸಾವಿರಕ್ಕಿಂತಲೂ ಹೆಚ್ಚು ಫಾಲೊವರ್ಸ್ಗಳಿದ್ದಾರೆ.
ಇಷ್ಟೇ ಅಲ್ಲ. ಈ ಭೀಮನಿಗೆ ಸಾಹಿತ್ಯದಲ್ಲೂ ಆಸಕ್ತಿ ಇದೆಯಂತೆ. ಹಿಂದೆ ಸರ್ಕಸ್ನಲ್ಲಿ ಕೆಲಸ ಮಾಡಿದ್ದ ಅವರು ಅಥ್ಲೀಟ್ಗಳ ಬಗ್ಗೆ ಪುಸ್ತಕವನ್ನು ಬರೆದಿದ್ದಾರೆ. ಅಲ್ಲದೇ 2010ರಲ್ಲಿ ಗೋಲ್ಡನ್ ಪೆನ್ ಆಫ್ ರಷ್ಯಾ ಪ್ರಶಸ್ತಿಯೂ ಬಂದಿದೆ.
ಗಿನ್ನಿಸ್ ರೆಕಾರ್ಡನ್ನೂ ಮಾಡಿದ್ದಾರೆ..
ಒಂದಲ್ಲ ಎರಡಲ್ಲ..ಬರೋಬ್ಬರಿ 63 ಗಿನ್ನಿಸ್ ರೆಕಾರ್ಡ್ಗಳನ್ನು ಇವರು ಮಾಡಿದ್ದಾರೆ. ಈ ಮೂಲಕ ಸಾಧನೆಯ ಪರ್ವತ ಹತ್ತಿದ್ದಾರೆ. 2013ರಲ್ಲಿ ಒಮದು ಚಲನಚಿತ್ರದಲ್ಲಿಯೂ ಇವರು ಅಭಿನಯಿಸಿದ್ದರು.
ಇದನ್ನೂ ಓದಿ: ಗಂಡ ಝೂಮ್ ಮೀಟಿಂಗ್ನಲ್ಲಿದ್ದಾಗಲೇ ಜುಮ್ಮನೆ ಮುತ್ತಿಕ್ಕಲು ಬಂದ ಪತ್ನಿ! ನಂತರ ಆಗಿದ್ದು ಮಾತ್ರ
Viral Video: ಅಂಗಡಿಯವನಿಂದ ಧಮ್ಕಿ: ಸಾರ್ವಜನಿಕವಾಗಿ ಪ್ಯಾಂಟಿಯನ್ನೇ ತೆಗೆದು ಮಾಸ್ಕ್ ಮಾಡಿಕೊಂಡ ಮಹಿಳೆ
Published On - 5:26 pm, Tue, 9 March 21