Viral Video: ಯಕ್ಷಗಾನ ಪ್ರದರ್ಶನ ವೇಳೆ ಮೊಬೈಲ್ ನೋಡುತ್ತಿದ್ದ ಪ್ರೇಕ್ಷಕನಿಗೆ ವೇಷಧಾರಿಯಿಂದ ರಂಗಸ್ಥಳದಲ್ಲೇ ಕ್ಲಾಸ್!

| Updated By: ganapathi bhat

Updated on: Apr 06, 2022 | 7:16 PM

Yakshagana: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆ, ಎದುರು ಸಾಲಿನಲ್ಲಿ ಕುಳಿತ ಪ್ರೇಕ್ಷಕರು ಮೊಬೈಲ್​ನೊಂದಿಗೆ ತಲ್ಲೀನರಾಗಿದ್ದರಿರಬೇಕು. ಇದರಿಂದ ಕಿರಿಕಿರಿ ಅನುಭವಿಸಿದ ಕಲಾವಿದರು ಪ್ರೇಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Viral Video: ಯಕ್ಷಗಾನ ಪ್ರದರ್ಶನ ವೇಳೆ ಮೊಬೈಲ್ ನೋಡುತ್ತಿದ್ದ ಪ್ರೇಕ್ಷಕನಿಗೆ ವೇಷಧಾರಿಯಿಂದ ರಂಗಸ್ಥಳದಲ್ಲೇ ಕ್ಲಾಸ್!
ಯಕ್ಷಗಾನ ಪ್ರದರ್ಶನ
Follow us on

ರಂಗಭೂಮಿ ಕಲಾಪ್ರದರ್ಶನದಲ್ಲಿ ಪ್ರೇಕ್ಷಕರು ಕೆಲವು ಶಿಸ್ತಿನ ಪರಿಪಾಠ ಪಾಲಿಸುವುದು ಅಗತ್ಯವಾಗಿರುತ್ತದೆ. ಉದಾಹರಣೆಗೆ ಬೆಂಗಳೂರಿನ ರಂಗ ಶಂಕರದಲ್ಲಿ ಅಥವಾ ನೀನಾಸಂನಂಥಾ ರಂಗತಂಡಗಳ ಕಲಾಪ್ರದರ್ಶನಗಳಲ್ಲಿ ಪ್ರೇಕ್ಷಕರು ಸಭ್ಯರಾಗಿ, ಕೆಲವು ಶಿಸ್ತು ಪಾಲಿಸಿ ಆಸೀನರಾಗಿರಬೇಕಾಗುತ್ತದೆ. ಪ್ರದರ್ಶನದ ನಡುವೆ ಮಾತನಾಡದೆ ಇರುವುದು, ಗಲಾಟೆ, ಗದ್ದಲ ಉಂಟು ಮಾಡದಿರುವುದು, ಫ್ಲಾಶ್ ಹಾಕಿ ಫೊಟೊ ತೆಗೆಯದೆ ಇರುವುದು, ಮೊಬೈಲ್ ಬಳಕೆ ಮಾಡದಿರುವುದು ಇತ್ಯಾದಿ. ಈ ವಿಚಾರಗಳಲ್ಲಿ ಅಡಚಣೆ ಉಂಟಾದರೆ, ಕಲಾವಿದರು ಸಮಸ್ಯೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುವುದೂ ಇದೆ. ಇಂಥದ್ದೇ ಘಟನೆಯೊಂದು ಯಕ್ಷಗಾನದ ರಂಗಸ್ಥಳದಲ್ಲಿ ನಡೆದಿದೆ.

ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆ, ಎದುರು ಸಾಲಿನಲ್ಲಿ ಕುಳಿತ ಪ್ರೇಕ್ಷಕರು ಮೊಬೈಲ್​ನೊಂದಿಗೆ ತಲ್ಲೀನರಾಗಿದ್ದರಿರಬೇಕು. ಇದರಿಂದ ಕಿರಿಕಿರಿ ಅನುಭವಿಸಿದ ಕಲಾವಿದರು ಪ್ರೇಕ್ಷಕರನ್ನು ರಂಗಸ್ಥಳದಿಂದಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಮೊಬೈಲ್ ನೋಡುದಾದ್ರೆ ಹಿಂದೆ ಕುತ್ಕೋ’ ಎಂದು ತಿಳಿಸಿದ್ದಾರೆ. ಕಲಾವಿದ, ಸ್ತ್ರೀ ಪಾತ್ರಧಾರಿ ಪ್ರೇಕ್ಷಕರ ತನ್ನ ಸಂಭಾಷಣೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೀಗೆ ಮಾತನಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಪರ-ವಿರೋಧದ ಚರ್ಚೆಯೂ ನಡೆಯುತ್ತಿದೆ.

ಹೀಗೇ ಘಟನೆ ನಡೆಯುತ್ತಿದ್ದರೆ, ‘ಇನ್ನು ನಿದ್ರೆ ಮಾಡುವವರು ಮನೆಗೆ ಹೋಗಿ, ಕಡ್ಲೆ ತಿನ್ನುವವರು ಹೊರಗೆ ಹೋಗಿ’ ಎಂಬ ಮಾತು ಕೂಡ ಕೇಳಿಬರಬಹುದು ಎಂದು ಕೆಲವರು ಹೇಳಿದ್ದಾರೆ. ಆದರೆ, ಬಹುತೇಕರು ಕಲಾವಿದರು ನಡೆದುಕೊಂಡದ್ದು ಸರಿಯಾಗಿದೆ ಎಂದಿದ್ದಾರೆ. ಸಭಾಶಿಸ್ತಿನ ಬಗ್ಗೆ ಜನರು ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ನಾಟಕಗಳು ನಡೆಯುವಾಗ ಮೊಬೈಲ್ ಬಳಸುವುದಾಗಲಿ, ಫೊಟೊ, ವಿಡಿಯೋ ಚಿತ್ರೀಕರಿಸುವುದಕ್ಕಾಗಲೀ ಅನುಮತಿ ನೀಡುವುದಿಲ್ಲ. ಯಕ್ಷಗಾನ ಸಭಿಕರು ಪ್ರದರ್ಶನದ ಮಧ್ಯೆ ಜೋರಾಗಿ ಫೋನ್​ನಲ್ಲಿ ಮಾತನಾಡುವುದಿದೆ. ಹಾಗೆ ಮಾಡುವುದರಿಂದ ಕಲಾವಿದರಿಗೂ, ಪ್ರದರ್ಶನ ವೀಕ್ಷಿಸುವ ಕಲಾಭಿಮಾನಿಗಳಿಗೂ ರಸಭಂಗ ಉಂಟಾಗುತ್ತದೆ. ಆದರೆ, ಯಕ್ಷಗಾನ ಬಯಲಾಟಗಳು ಈ ನಿಯಮಾವಳಿಗಳನ್ನು ಹಿಂದಿನಿಂದ ನಡೆಸಿಕೊಂಡು ಬಂದಿಲ್ಲ. ರಾತ್ರಿ ಪೂರ್ತಿ ನಡೆಯುವ ಪ್ರದರ್ಶನಗಳಲ್ಲಿ ಹೀಗೆ ನಿಯಮ ಇರಬೇಕೇ, ಬೇಡವೇ ಎಂಬುದು ಜಿಜ್ಞಾಸೆಗೆ ಕಾರಣವಾಗಿದೆ.

ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ, ಹಾಲಾಡಿ ಮೇಳದ ಕಲಾಪ್ರದರ್ಶನದ್ದು, ಕಲಾವಿದರು ವಿಜಯ ಗಾಣಿಗ ಬೀಜಮಕ್ಕಿ ಎಂಬ ಮಾಹಿತಿ ಲಭ್ಯವಾಗಿದೆ.


ಇದನ್ನೂ ಓದಿ: Video Viral: ಯುವತಿಯ ಕಪಾಳಕ್ಕೆ ಹೊಡೆದ ಮಹಿಳಾ ಪಿಎಸ್‌ಐ! ವಾಹನ ತಪಾಸಣೆ ವೇಳೆ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಘಟನೆ

ಜಮೀನು ಗಲಾಟೆ ಪ್ರಕರಣ; ದುದ್ದ ಪೊಲೀಸ್​ ಠಾಣೆಗೆ ಆಗಮಿಸಿದ ನಟ ಯಶ್

Published On - 5:04 pm, Tue, 9 March 21