India vs Australia Test Series | ಬೆದರಿಕೆಯ ಪರಾಕಾಷ್ಠೆ ಜನಾಂಗೀಯ ನಿಂದನೆ; ಕೊಹ್ಲಿ ಟ್ವೀಟ್
ಇಂತಹ ಅನೇಕ ಘಟನೆಗಳು ನನ್ನ ಅನುಭವಕ್ಕೂ ಬಂದಿವೆ. ಹೀಗಾಗಿ ಜನಾಂಗೀಯ ಟೀಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ ಎಂದು ಬರೆದುಕೊಂಡಿದ್ದಾರೆ.
ಸಿಡ್ನಿ: ಭಾರತ- ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸಂದರ್ಭದಲ್ಲಿ ಜನಾಂಗೀಯ ನಿಂದನೆ ವಿಚಾರವಾಗಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಟ್ವಿಟರ್ನಲ್ಲಿ ತಮ್ಮ ಅಸಮಾದಾನವನ್ನ ಹೊರಹಾಕಿದ್ದಾರೆ. ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಕಿಂಗ್ ಕೊಹ್ಲಿ, ಇಂತಹ ನಡವಳಿಕೆಯನ್ನು ಸಹಿಸಲು, ಒಪ್ಪಿಕೊಳ್ಳಲು ಆಗುವುದಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇಂತಹ ಅನೇಕ ಘಟನೆಗಳು ನನ್ನ ಅನುಭವಕ್ಕೂ ಬಂದಿವೆ. ಹೀಗಾಗಿ ಜನಾಂಗೀಯ ಟೀಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ ಎಂದು ಬರೆದುಕೊಂಡಿದ್ದಾರೆ.
ಸಿಡ್ನಿ ಟೆಸ್ಟ್ ಸಮಯದಲ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಕೆಲವು ವೀಕ್ಷಕರಿಂದ ಜನಾಂಗೀಯ ನಿಂದನೆಗೆ ಒಳಗಾದರು. ಈ ಘಟನೆ ಕುರಿತು ಕೊಹ್ಲಿ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದು, ಯಾವುದೇ ರೀತಿಯ ಜನಾಂಗೀಯ ನಿಂದನೆಗಳನ್ನು ಒಪ್ಪಲು ಆಗುವುದಿಲ್ಲ. ಬೌಂಡರಿ ಲೈನ್ನಲ್ಲಿ ಫೀಲ್ಡಿಂಗ್ ಮಾಡುವ ವೇಳೆ ನಾನು ಸಹ ಇಂತಹ ಅನೇಕ ಕೆಟ್ಟ ಸನ್ನಿವೇಶಗಳನ್ನು ಎದುರಿಸಿದ್ದೇನೆ. ಇದು ಬೆದರಿಕೆಯ ಪರಾಕಾಷ್ಠೆಯಾಗಿದೆ. ಮೈದಾನದಲ್ಲಿ ಇದೆಲ್ಲ ನಡೆಯುತ್ತಿರುವುದನ್ನು ನೋಡಿ ಬೇಸರವಾಗಿದೆ. ಈ ಘಟನೆಯನ್ನು ಗಂಭೀರವಾಗಿ ಮತ್ತು ವಿಳಂಬ ಮಾಡದೆ ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಅಪರಾಧಿಗಳ ವಿರುದ್ಧ ತೆಗೆದುಕೊಳ್ಳುವ ಕಠಿಣ ಕ್ರಮಗಳು, ಮುಂದೆ ಇಂತಹ ತಪ್ಪುಗಳು ಆಗದಂತೆ ತಡೆಯುತ್ತವೆ ಎಂದಿದ್ದಾರೆ.
Racial abuse is absolutely unacceptable. Having gone through many incidents of really pathetic things said on the boundary Iines, this is the absolute peak of rowdy behaviour. It's sad to see this happen on the field.
— Virat Kohli (@imVkohli) January 10, 2021
The incident needs to be looked at with absolute urgency and seriousness and strict action against the offenders should set things straight for once.
— Virat Kohli (@imVkohli) January 10, 2021
Published On - 5:09 pm, Sun, 10 January 21