India vs England: ಒಡಿಐ ಪಂದ್ಯಗಳಲ್ಲಿ ನಾಯಕನಾಗಿ ಅತಿಹೆಚ್ಚು ರನ್ ​ಗಳಿಸಿರುವವರ ಲಿಸ್ಟ್​ನಲ್ಲಿ 5 ನೇ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ

|

Updated on: Mar 26, 2021 | 11:11 PM

ಒಡಿಐಗಳಲ್ಲಿ ಸ್ಮಿತ್ ನಾಯಕನಾಗಿ 5,416 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಶುಕ್ರವಾರದಂದು 2ನೇ ಪಂದ್ಯಕ್ಕೆ ಮೊದಲು ಕೊಹ್ಲಿ ಅವರು ಸ್ಮಿತ್​ ಅವರಿಗಿಂತ 41 ರನ್ ಹಿಂದಿದ್ದರು. ಈ ಪಂದ್ಯದಲ್ಲಿ ಭಾರತದ ಸ್ಕಿಪ್ಪರ್ 66 ರನ್ ಗಳಿಸಿ ಔಟಾದರು.

India vs England: ಒಡಿಐ ಪಂದ್ಯಗಳಲ್ಲಿ ನಾಯಕನಾಗಿ ಅತಿಹೆಚ್ಚು ರನ್ ​ಗಳಿಸಿರುವವರ ಲಿಸ್ಟ್​ನಲ್ಲಿ 5 ನೇ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ
ವಿರಾಟ್​ ಕೊಹ್ಲಿ
Follow us on

ಪುಣೆ: ಫಾರ್ಮಾಟ್​ ಯಾವುದೇ ಇರಲಿ, ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಬ್ಯಾಟ್​ ಮಾಡಲು ಹೋದಾಗಲೆಲ್ಲ ದಾಖಲೆ ಸ್ಥಾಪಿಸುವುದನ್ನು ಅಭ್ಯಾಸ ಮಾಡಿಕೊಂಡಂತಿದೆ. ಕ್ರಿಕೆಟ್​ ಪ್ರೇಮಿಗಳಿಗೆ ನೆನೆಪಿರಬಹುದು, ಇಂಗ್ಲೆಂಡ್​ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಅವರು ಕ್ರೀಡೆಯ ಮೂರು ಫಾರ್ಮಾಟ್​ಗಳಿಂದ ಸ್ವದೇಶದಲ್ಲಿ ಆಡಿದ ಪಂದ್ಯಗಳಲ್ಲಿ ಅತ್ಯಂತ ವೇಗವಾಗಿ 10,000 ರನ್ ಪೂರೈಸಿದ ಆಟಗಾರನ ಹಿರಿಮೆಗೆ ಪಾತ್ರರಾದರು. ಶುಕ್ರವಾರದಂದು ಪುಣೆಯ ಅದೇ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಅವರು ಒಡಿಐಗಳಲ್ಲಿ ತಮ್ಮ ವೃತ್ತಿಬದುಕಿನ 62ನೇ ಅರ್ಧ ಶತಕವನ್ನು ಬಾರಿಸಿದರು. ಈ ಇನ್ನಿಂಗ್ಸ್ ಆಡುವಾಗ ಅವರು ನಾಯಕನಾಗಿ ಅತಿ ಹೆಚ್ಚು ರನ್ ಬಾರಿಸಿರುವವರ ಪೈಕಿ ದಕ್ಷಿಣ ಆಫ್ರಿಕಾದ ಗ್ರೀಮ್ ಸ್ಮಿತ್​ ಅವರನ್ನು ಹಿಂದಿಕ್ಕಿ 5 ನೇ ಸ್ಥಾನಕ್ಕೇರಿದರು.

ಒಡಿಐಗಳಲ್ಲಿ ಸ್ಮಿತ್ ನಾಯಕನಾಗಿ 5,416 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಶುಕ್ರವಾರದಂದು 2ನೇ ಪಂದ್ಯಕ್ಕೆ ಮೊದಲು ಕೊಹ್ಲಿ ಅವರು ಸ್ಮಿತ್​ ಅವರಿಗಿಂತ 41 ರನ್ ಹಿಂದಿದ್ದರು. ಈ ಪಂದ್ಯದಲ್ಲಿ ಭಾರತದ ಸ್ಕಿಪ್ಪರ್ 66 ರನ್ ಗಳಿಸಿ ಔಟಾದರು. ಭಾರತೀಯ ಇನ್ನಿಂಗ್ಸ್​ನ 24 ನೇ ಓವರ್​ನಲ್ಲಿ ಕೊಹ್ಲಿ ಈ ಸಾಧನೆಗೈದರು.

ಈ ಪಟ್ಟಿಯಲ್ಲಿ ನಂಬರ್​ ವನ್​ ಸ್ಥಾನದಲ್ಲಿರುವವರೆಂದರೆ, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್. ನಾಯಕನಾಗಿ 234 ಒಡಿಐ ಪಂದ್ಯಗಳನ್ನಾಡಿರುವ ಅವರು 8,497 ರನ್ ಗಳಿಸಿದ್ದಾರೆ. ಅವರ ನಂತರದ ಸ್ಥಾನದಲ್ಲಿರುವವರು ಕ್ಯಾಪ್ಟನ್ ಕೂಲ್ ಎಂದು ಕರೆಸಿಕೊಳ್ಳುತ್ತಿದ್ದ ಭಾರತದ ಮಹೇಂದ್ರ ಸಿಂಗ್ ಧೋನಿ. 199 ಒಡಿಐ ಪಂದ್ಯಗಳನ್ನಾಡಿದ ಧೋನಿ 6,641 ರನ್ ಗಳಿಸಿದ್ದಾರೆ.

ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿ ಕ್ರಮವಾಗಿ ನ್ಯೂಜಿಲೆಂಡ್ ಮಾಜಿ ನಾಯಕ ಸ್ಟೀಫೆನ್ ಫ್ಲೆಮಿಂಗ್ ಮತ್ತು ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗ ಇದ್ದಾರೆ. ಸರಾಸರಿ ಮತ್ತು ಸ್ಟ್ರೈಕ್​ರೇಟ್​ಗಳ ವಿಷಯಕ್ಕೆ ಬಂದರೆ ಕೊಹ್ಲಿ ಉಳಿದವರಿಗಿಂತ ಮುಂದಿದ್ದಾರೆ. ಈ ಆವೃತ್ತಿಯ ಪಂದ್ಯಗಳಲ್ಲಿ ನಾಯಕನಾಗಿ 70 ಕ್ಕಿಂತ ಜಾಸ್ತಿ ಸರಾಸರಿ ಹೊಂದಿರುವ ಏಕೈಕ ಆಟಗಾರ ಅವರಾಗಿದ್ದಾರೆ. ಅವರ ಸ್ಟ್ರೈಕ್​ರೇಟ್ ಸುಮಾರು 100ರಷ್ಟಿದ್ದು ಉಳಿದವರಿಗಿಂತ ಅತ್ಯುತ್ತಮವಾಗಿದೆ.

ಇದನ್ನೂ ಓದಿ: India vs England : ಚೆಂಡಿಗೆ ಎಂಜಲು ಮೆತ್ತಿ ಅಂಪೈರ್​ನಿಂದ ಎಚ್ಚರಿಕೆ ಪಡೆದ ಬೆನ್ ಸ್ಟೋಕ್ಸ್