India vs England : ಚೆಂಡಿಗೆ ಎಂಜಲು ಮೆತ್ತಿ ಅಂಪೈರ್​ನಿಂದ ಎಚ್ಚರಿಕೆ ಪಡೆದ ಬೆನ್ ಸ್ಟೋಕ್ಸ್

ಸ್ಟೋಕ್ಸ್ ಆಕಸ್ಮಿಕವಾಗಿ ಎಸೆಗಿದ ಪ್ರಮಾದವನ್ನು ಗಮನಿಸಿದ ಆನ್-ಫಿಲ್ಡ್ ಅಂಪೈರ್ ವಿರೇಂದ್ರ ಶರ್ಮ ಆಂಗ್ಲರ ಆಗ್ರಮಾನ್ಯ ಆಲ್​ರೌಂಡರ್​ಗೆ ಎಚ್ಚರಿಕೆ ನೀಡಿದರು. ನೀತಿಸಂಹಿತೆ ಪ್ರಕಾರ ಆ ಬಾಲನ್ನು ಸ್ಯಾನಿಟೈಸ್ ಮಾಡಿದ ನಂತರವೇ ಪುನಃ ಉಪಯೋಗಿಸಲಾಯಿತು.

India vs England : ಚೆಂಡಿಗೆ ಎಂಜಲು ಮೆತ್ತಿ ಅಂಪೈರ್​ನಿಂದ ಎಚ್ಚರಿಕೆ ಪಡೆದ ಬೆನ್ ಸ್ಟೋಕ್ಸ್
ಚೆಂಡಿಗೆ ಎಂಜಲು ಮೆತ್ತಿ ವಿವಾದಕ್ಕೊಳಗಾದ ಇಂಗ್ಲೆಂಡ್ ಆಲ್​ರೌಂಡರ್ ಬೆನ್ ಸ್ಟೋಕ್ಸ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 26, 2021 | 8:45 PM

ಪುಣೆ: ಕೊವಿಡ್-19 ಪಿಡುಗು ವಿಶ್ವದಾದ್ಯಂತ ಹಬ್ಬಿದ ನಂತರ ಕ್ರಿಕೆಟ್​ ಪಂದ್ಯಗಳಲ್ಲಿ ಚೆಂಡಿಗೆ ಆಟಗಾರರು ತಮ್ಮ ಬಾಯಿ ಎಂಜಲನ್ನು (saliva) ಹಚ್ಚಿ ಹೊಳಪು ತರುವ ಪ್ರಯತ್ನ ಮಾಡಬಾರದೆಂದು ಅಂತರರಾಷ್ಟ್ರಿಯ ಕ್ರಿಕೆಟ್ ಕೌನ್ಸಿಲ್ ಅಂತ ಎಲ್ಲಾ ಸದಸ್ಯರ ರಾಷ್ಟ್ರಗಳಿಗೆ ನಿರ್ದೇಶನ ಜಾರಿ ಮಾಡಿತು. ಆ ನಿಯಮವನ್ನು ಕೇವಲ ಅಂತರರಾಷ್ಟ್ರೀಯ ಪಂದ್ಯಗಳಲ್ಲಷ್ಟೇ ಅಲ್ಲ ಆಯಾ ದೇಶಗಳಲ್ಲಿ ನಡೆಯುವ ಡೊಮೆಸ್ಟಿಕ್ ಕ್ರಿಕೆಟ್​ನಲ್ಲೂ ಆ ನಿಯಮವನ್ನು ಆನೂಚಾನಾಗಿ ಪಾಲಿಸಲಾಗುತ್ತಿದೆ. ಆದರೆ, ಈ ನಿಯಮವನ್ನು ಉಲ್ಲಂಘಿಸುವ ಸಂದರ್ಭಗಳು ಕ್ರಿಕೆಟ್​ ಮೈದಾನಗಳಲ್ಲಿ ಆಗಾಗ ಘಟಿಸುತ್ತಿವೆ. ಇಂದು (ಶುಕ್ರವಾರ) ಭಾರತ ಮತ್ತು ಇಂಗ್ಲೆಂಡ್​ ಮಧ್ಯೆ ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಒಂದು ದಿನದ ಪಂದ್ಯದ ಆರಂಭಿಕ ಹಂತದಲ್ಲಿ ನಡೆದ ಘಟನೆಯನ್ನೇ ಗಮನಿಸಿ. ಭಾರತದ ಇನ್ನಿಂಗ್ಸ್​ನ 4ನೇ ಓವರ್​ನಲ್ಲಿ ಇಂಗ್ಲೆಂಡ್ ಟೀಮಿನ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಚೆಂಡಿಗೆ ಎಂಜಲನ್ನು ಹಚ್ಚಿ ಫೀಲ್ಡ್​ ಅಂಪೈರ್​ನಿಂದ ಎಚ್ಚರಿಕೆಗೊಳಗಾದರು.

ಸ್ಟೋಕ್ಸ್ ಆಕಸ್ಮಿಕವಾಗಿ ಎಸೆಗಿದ ಪ್ರಮಾದವನ್ನು ಗಮನಿಸಿದ ಆನ್-ಫಿಲ್ಡ್ ಅಂಪೈರ್ ವಿರೇಂದ್ರ ಶರ್ಮ ಆಂಗ್ಲರ ಆಗ್ರಮಾನ್ಯ ಆಲ್​ರೌಂಡರ್​ಗೆ ಎಚ್ಚರಿಕೆ ನೀಡಿದರು. ನೀತಿಸಂಹಿತೆ ಪ್ರಕಾರ ಆ ಬಾಲನ್ನು ಸ್ಯಾನಿಟೈಸ್ ಮಾಡಿದ ನಂತರವೇ ಪುನಃ ಉಪಯೋಗಿಸಲಾಯಿತು. ಅಂಪೈರ್ ಶರ್ಮ, ಸ್ಟೋಕ್ಸ್​ಗೆ ವಾರ್ನ್​ ಮಾಡಿದ ನಂತರ ಇಂಗ್ಲೆಂಡ್​ನ ಸ್ಟ್ಯಾಂಡ್-ಇನ್ ನಾಯಕ ಜೊಸ್ ಬಟ್ಲರ್ ಅವರೊಂದಿಗೆ ಸಮಾಲೋಚನೆ ನಡೆಸಿ, ಮತ್ತೊಮ್ಮೆ ಅಂಥ ಘಟನೆ ಪುನರಾವರ್ತನೆಗೊಂಡರೆ ಅವರ ತಂಡಕ್ಕೆ 5 ರನ್​ಗಳ ದಂಡ ವಿಧಿಸಲಾಗುವುದೆಂದು ಹೇಳಿದರು.

ಇಂಗ್ಲೆಂಡ್ ಎಡಗೈ ವೇಗದ ಬೌಲರ್​ ರೀಸ್ ಟಾಪ್ಲೀ ಅವರು ಭಾರತದ ಇನ್ನಿಂಗ್ಸ್​ನ 4ನೇ ಓವರ್ ಎಸೆಯುತ್ತಿದ್ದಾಗ ಮತ್ತು ಅತಿಥೇಯರ ಸ್ಕೋರ್ ವಿಕೆಟ್​ ನಷ್ಟವಿಲ್ಲದೆ 8 ಆಗಿದ್ದಾಗ ಎಂಜಲು ಹಚ್ಚುವ ಘಟನೆ ನಡೆಯಿತು. ಆದರೆ, ಸ್ಟೋಕ್ಸ್​ ಚೆಂಡಿಗೆ ಎಂಜಲು ಹಚ್ಚಿ ಸಿಕ್ಕಿ ಬಿದ್ದರೋದು ಇದೇ ಮೊದಲ ಸಲವೇನಲ್ಲ. ಭಾರತ ಮತ್ತು ಇಂಗ್ಲೆಂಡ್​ ನಡುವೆ ಅಹಮದಾಬಾದಿನಲ್ಲಿ ನಡೆದ ಪಿಂಕ್-ಬಾಲ್​ ಟೆಸ್ಟ್​ನಲ್ಲೂ ಅವರು ಹಾಗೆ ಮಾಡಿದ್ದರು.

Eoin Morgan

ಅಂಗೈಗೆ ಗಾಯ ಮಾಡಿಕೊಂಡಯ ಸರಣಯಿಂದ ಹೊರಬಿದ್ದಿರುವ ಇಂಗ್ಲೆಂಡ್​ ನಾಯಕ ಅಯಾನ್ ಮೊರ್ಗನ್

ಪುಣೆಯಲ್ಲಿ ಶುಕ್ರವಾರ ನಡೆಯುತ್ತಿರುವ ಎರಡನೇ ಒಡಿಐ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮತ್ತೊಮ್ಮೆ ಮೊದಲು ಫೀಲ್ಡ್​ ಮಾಡುವ ನಿರ್ಧಾರ ತೆಗೆದುಕೊಂಡಿತು.

ಇದೇ ಮೈದಾನದಲ್ಲಿ ನಡೆದ ಮೊದಲ ಒಡಿಐ ಪಂದ್ಯದಲ್ಲಿ ಫೀಲ್ಡ್​ ಮಾಡುವಾಗ ಹೆಬ್ಬೆರಳು ಮತ್ತು ತೋರು ಬೆರಳಿನ ಮಧ್ಯದ ಭಾಗವನ್ನು ಹರಿದುಕೊಂಡ ಇಂಗ್ಲೆಂಡ್​ ನಾಯಕ ಆಯಾನ್ ಮೊರ್ಗನ್ ಎರಡನೇ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಅವರ ಅಂಗೈಯಲ್ಲಿ ನಾಲ್ಕು ಹೊಲಿಗೆಗಳು ಬಿದ್ದಿವೆ. ಗಮನಾರ್ಹ ಸಂಗತಿಯೆಂದರೆ, ಆ ಪರಿ ಗಾಯಗೊಂಡಿದ್ದರೂ ಅವರು ಬ್ಯಾಟಿಂಗ್ ಮಾಡಲು ಆಗಮಿಸಿದ್ದರು.

ಅದೇ ಪಂದ್ಯದಲ್ಲಿ ಸ್ಯಾಮ್ ಬಿಲ್ಲಿಂಗ್ಸ್ ಸಹ ಭುಜದ ಸಮಸ್ಯೆಗೊಳಗಾಗಿದ್ದಿರಿಂದ ಅವರ ಸ್ಥಾನದಲ್ಲಿ ಲಿಯಾಮ್ ಲಿವಿಂಗ್​ಸ್ಟೋನ್​ಗೆ ಪದಾರ್ಪಣೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ, ವೇಗದ ಬೌಲರ್ ಮಾರ್ಕ್​ ವುಡ್​ ಅವರ ಸ್ಥಾನದಲ್ಲಿ ಟಾಪ್ಲೀ ಆಡುತ್ತಿದ್ದಾರೆ.

ಭಾರತದ ತಂಡದಲ್ಲೂ ಒಂದು ಅನಿವಾರ್ಯತೆಯ ಬದಲಾವಣೆ ಮಾಡಲಾಗಿದೆ. ಫೀಲ್ಡಿಂಗ್ ಮಾಡುವಾಗ ಭುಜದ ಮೂಳೆ ಡಿಸ್​ಪ್ಲೇಸ್ ಮಾಡಿಕೊಂಡ ಶ್ರೇಯಸ್ ಅಯ್ಯರ್ ಚೇತರಿಸಿಕೊಳ್ಳಲು ಕನಿಷ್ಠ 4-5 ವಾರಗಳು ಬೇಕೆಂದು ಹೇಳಲಾಗುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಕೂಡ ಆಗಿರುವ ಅಯ್ಯರ್ ಇಂಡಿಯನ್ ಪ್ರಿಮೀಯರ್ ಲೀಗ್​ನ ಮೊದಲಾರ್ಧವನ್ನು ತಪ್ಪಿಸಿಕೊಳ್ಳಲಿದ್ದಾರೆ. ಅಯ್ಯರ್ ಸ್ಥಾನದಲ್ಲಿ ವಿಕೆಟ್​-ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ ಅವರಿಗೆ ಆಡುವ ಇಲೆವೆನ್​ನಲ್ಲಿ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: India vs England | ಸ್ಟೋಕ್ಸ್ ಆಡುವ ಉತ್ಸುಕತೆ ತೋರಿದ್ದರಿಂದ ಅವರಿಗೆ ವಿಶ್ರಾಂತಿ ನೀಡಿಲ್ಲ: ಅಯಾನ್ ಮೊರ್ಗನ್

Published On - 5:06 pm, Fri, 26 March 21

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ